Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಅರೇಂಜ್ಡ್ ಮ್ಯಾರೇಜ್ ಏಕೆ ಒಳ್ಳೆಯದು?

1. ಪರಸ್ಪರ ಆಸಕ್ತಿ: ಈಗಿನ ಕಾಲದಲ್ಲಿ ಮನೆಯವರು ಹೆಣ್ಣು-ಗಂಡಿನ ಒಪ್ಪಿಗೆಗೆ ಮಾನ್ಯತೆ ಕೊಡುತ್ತಾರೆ. ಇವರಿಬ್ಬರಿಗೆ ಪರಸ್ಪರ ಒಪ್ಪಿಗೆಯಾದರೆ ಮದುವೆ ಮಾತುಕತೆ ನಡೆಸುತ್ತಾರೆ. ಅಲ್ಲದೆ ಒಬ್ಬ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ರೀತಿಯ ಮದುವೆಯಲ್ಲಿ ಸಾಧ್ಯವಿಲ್ಲ. ಆದರೆ ಲವ್ ಮಾಡಿ ಮದುವೆಯಾದವರ ಗುಣಗಳು ಮದುವೆಯ ನಂತರವೂ ಹಾಗೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ!
2. ತ್ಯಾಗ ಕಡಿಮೆ: ಲವ್ ಮಾಡಿದರೆ ಅನೇಕ ವಿಷಯಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಮನೆಯಲ್ಲಿ ಒಪ್ಪಿಗೆ ಸಿಗಲಿಲ್ಲವೆಂದು ಮನೆಯವರನ್ನು ಬಿಟ್ಟು ಬರುವ ಸಾಹಸಕ್ಕೆ ಕೈಹಾಕಬೇಕಾಗುತ್ತದೆ. ಆದರೆ ಅರೇಂಜ್ಡ್ ಮ್ಯಾರೇಜ್ ನಲ್ಲಿ ಮನೆಯವರ ಸಂಪೂರ್ಣ ಬೆಂಬಲವಿರುತ್ತದೆ. ಸಂಬಂಧ ಹುಡುಕುವಾಗ ತಮಗೆ ಎಲ್ಲಾ ರೀತಿಯಲ್ಲಿ ಅನುರೂಪ ಆಗಿರುವವರನ್ನೆ ಹುಡುಕಿಕೊಡುತ್ತಾರೆ.
3. ರಕ್ಷಣೆ: ಮನೆಯವರು ನೋಡಿ ಮಾಡಿಸಿದ ಮದುವೆಯಲ್ಲಿ, ಮದುವೆಯ ನಂತರ ಗಂಡ-ಹೆಂಡತಿಯಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಬಂದರೆ ಮನೆಯವರು ಭಾಗಿಯಾಗಿ ಸಮಸ್ಯೆಯನ್ನು ಅಲ್ಲಿಗೆ ಬಗೆಹರಿಸಲು ನೋಡುತ್ತಾರೆ. ಆದರೆ ಪ್ರೀತಿಸಿ ಮದುವೆಯಾದರೆ ಸುಖವಾಗಿ ಇದ್ದರೆ ಮಾತ್ರ ಮನೆಯವರು ಬರುತ್ತಾರೆ ವಿನಃ ಕಷ್ಟದಲ್ಲಿದ್ದರೆ 'ನೀವೆ ಆಯ್ಕೆ ಮಾಡಿದ ಬದುಕು ಅನುಭವಿಸಿ' ಎಂದು ಚುಚ್ಚು ಮಾತು ಹೇಳುವವರೆ ಜಾಸ್ತಿ.
4. ವಿಚ್ಛೇದನ ಪಡೆದವರಲ್ಲಿ ಪ್ರೀತಿಸಿ ಮದುವೆಯಾದವರೆ ಜಾಸ್ತಿ: ಹೆಚ್ಚಿನವರಿಗೆ ಪ್ರೀತಿಸುವಾಗ ಇರುವ ಪ್ರೀತಿ ಮತ್ತು ಧೈರ್ಯ ಮದುವೆ ನಂತರ ಇಲ್ಲದಾಗುವುದೇ ವಿಪರ್ಯಾಸ. ಪ್ರೀತಿಸುವಾಗ ಇರುವ ಜೀವನ ಬೇರೆ, ಮದುವೆಯ ನಂತರದ ಜೀವನ ಬೇರೆ. ಪ್ರೀತಿಸಿ ಮದುವೆಯಾದವರಿಗೆ ಜೀವನದ ಬಗ್ಗೆ ಕನಸ್ಸುಗಳು ಜಾಸ್ತಿ ಇರುತ್ತದೆ. ವಾಸ್ತವವಾಗಿ ಅದು ಸಾಧ್ಯವಾಗದಿದ್ದಾಗ ಜಗಳಗಳು ಪ್ರಾರಂಭವಾಗುತ್ತದೆ.
ಉದಾಹರಣೆಗೆ: ಪ್ರೀತಿಸುತ್ತಿರುವಾಗ ಪ್ರತಿವಾರ ಸಿನಿಮಾಕ್ಕೆ ಕರೆದುಕೊಂಡು ಹೋಗಲು ಸಾಧ್ಯವಿತ್ತು, ಆದರೆ ಈಗ ಕರೆದು ಕೊಂಡು ಹೋಗುತ್ತಿಲ್ಲ ಎಂಬ ಸಣ್ಣ ಪುಟ್ಟ ವಿಷಯಗಳೇ ಮುಂದೆ ದೊಡ್ಡ ಕಲಹಕ್ಕೆ ಕಾರಣವಾಗುತ್ತ್ತಿದೆ. ಆದರೆ ಅರೇಂಜ್ಡ್ ಮ್ಯಾರೇಜ್ ನಲ್ಲಿ ಅನುಸರಿಸಿಕೊಂಡು ಹೋಗುವ ಗುಣ ಹೆಚ್ಚಾಗಿರುತ್ತದೆ.
ಮನೆಯವರು ಮಾಡಿಸಿದ ಎಷ್ಟೊ ಮದುವೆಗಳು ಮುರಿದು ಬಿದ್ದಿವೆ, ಆದರೆ ಪ್ರೀತಿಸಿ ಮದುವೆಯಾದವರಲ್ಲಿ ಹೆಚ್ಚಿನ ಜನರಿಗೆ ಮದುವೆಯ ನಂತರ ಪರಸ್ಪರ ಪ್ರೀತಿಸಲು ಮರೆತು ಹೋಗುತ್ತದೆ!
ಹೀಗೆ ನೋಡಿದಾಗ ಪ್ರೀತಿ, ಭದ್ರತೆ ಹಿರಿಯರು ನೋಡಿದ ಮದುವೆಯಲ್ಲಿಯೆ ಜಾಸ್ತಿ ಅನಿಸುತ್ತದೆ, ನಿಮಗೆ ಏನು ಅನಿಸುತ್ತದೆ?



Click it and Unblock the Notifications