Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಮನಿ ಮೈಂಡ್ ಗರ್ಲ್ ಫ್ರೆಂಡ್ ಪ್ರೀತಿಗೆ ಅರ್ಹಳಲ್ಲ!

ಇಲ್ಲಿ ಗರ್ಲ್ ಫ್ರೆಂಡ್ ಗಳ ಕೆಲವು ಸ್ವಭಾವಗಳನ್ನು ನೀಡಲಾಗಿದೆ. ನಿಮ್ಮ ಗರ್ಲ್ ಫ್ರೆಂಡ್ ಯಾವ ರೀತಿಯ ಸ್ವಭಾವದವಳೆಂದು ನೀವೆ ನಿರ್ಧರಿಸಿ.
1.ಸ್ವತಂತ್ರ ಮತ್ತು ಅಪ್ಪಟ ಭಾರತೀಯ ನಾರಿ ಸ್ವಭಾವ: ಇವಳು ತುಂಬಾ ಸಂಪ್ರದಾಯಬದ್ಧವಾಗಿ ಬೆಳೆದಿರುತ್ತಾಳೆ. ಸ್ವತಂತ್ರ ಮನೋಭಾವದವಳು, ಇತರರ ಅಭಿಪ್ರಾಯಕ್ಕೆ ಬೆಲೆ ಕೊಡುತ್ತಾಳೆ. ಅವಳಲ್ಲಿ ಸ್ವಂತಿಕೆ ಹೆಚ್ಚಾಗಿರುತ್ತದೆ. ಆದರೆ ಅದೇ ಸಮಯದಲ್ಲಿ ಅವಳಿಗೆ ಅವಳ ಮಿತಿಯ ಅರಿವು ಕೂಡ ಇರುತ್ತದೆ. ಪುರುಷರಲ್ಲಿರುವ ಗುಣ ಮತ್ತು ಪುರುಷ ಪ್ರಧಾನ ಗುಣವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುತ್ತಾಳೆ.
2.ತಿಳಿ ಹೇಳುವುದು: ಇವಳು ಹೇಗೆಂದರೆ ತನ್ನ ಬಾಯ್ ಫ್ರೆಂಡ್ ಸಣ್ಣ-ಪುಟ್ಟ ತಪ್ಪುಗಳನ್ನು ತಿದ್ದವುದು ಅವರ ಅಭ್ಯಾಸವಾಗಿರುತ್ತದೆ. ಎಲ್ಲಾ ನಿಮ್ಮ ವಿಷಯದಲ್ಲಿ ತನ್ನ ಅಭಿಪ್ರಾಯವನ್ನು ಹೇಳುತ್ತಿರುತ್ತಾಳೆ. ಆದರೆ ಇವಳು ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿ ನಿಮಗೆ ಸಹಕಾರ ನೀಡಲು ಹಿಂಜರಿಯುವುದಿಲ್ಲ ಮತ್ತು ನಿಮ್ಮನ್ನು ತುಂಬಾ ಪ್ರೀತಿಸುತ್ತಾಳೆ. ನಿಮ್ಮ ಉನ್ನತಿಗೋಸ್ಕರ ಅವಳು ಹೇಳುವ ಉಪದೇಶಗಳು ಸ್ವಲ್ಪ ಬೋರಾಗಬಹುದು.
3. ಬೇಡಿಕೆ ಮತ್ತು ಹಠಮಾರಿತನ: ಈ ಸ್ವಭಾವದ ಗರ್ಲ್ ಫ್ರೆಂಡ್ ಸಿಕ್ಕಿದರೆ ಜೀವನದಲ್ಲಿ ಸಂತೋಷ ಕ್ರಮೇಣ ಮಾಯವಾಗಬಹುದು. ಅವಳು ಬಯಸಿದ್ದು ಆ ಕ್ಷಣವೆ ತಲುಪಿಸದಿದ್ದರೆ ನಿಮಗೆ ಅವಳನ್ನು ಸಮಧಾನ ಪಡಿಸುವುದೆ ಹರಸಾಹಸವಾಗಿರುತ್ತದೆ. ನೀವು ಅವಳು ಹೇಳಿದ ಹಾಗೆ ಕುಣಿಯುತ್ತಿದ್ದರೆ ಜೀವನದಲ್ಲಿ ನಿಮ್ಮ ಬಗ್ಗೆ ಯೋಚಿಸಲು ಸಮಯವೆ ಸಿಗದೆ ಹೋಗಬಹುದು. ಪ್ರತಿಯೊಂದು ವಿಷಯಗಳನ್ನು ಅವಳೆ ನಿರ್ಧರಿಸಲು ಪ್ರಾರಂಭಿಸುತ್ತಾಳೆ. ನಿಮ್ಮ ಭಾವನೆಗಳಿಗೆ ಬೆಲೆ ಸಿಕ್ಕುವುದಿಲ್ಲ.
4. ಪೊಸೆಸಿವ್: ಅವಳು ನಿಮ್ಮನ್ನು ತುಂಬಾ ಪ್ರೀತಿಸುತ್ತಾಳೆ, ನಿಮ್ಮ ಬಗ್ಗೆ ಅಕ್ಕರೆ ತೋರುತ್ತಾಳೆ. ಆದರೆ ಅವಳು ನಿಮ್ಮ ಬಗ್ಗೆ ತುಂಬಾ ಪೊಸೆಸಿವ್ ಆಗಿರುತ್ತಾಳೆ. ಅವಳ ಮನಸ್ಸಿಗೆ ಸಮಧಾನ ಸಿಗುವವರೆಗೆ ನಿಮ್ಮ ಹತ್ತಿರ ಕೇಳಿದ ಪ್ರಶ್ನೆಯನ್ನೆ ಕೇಳುತ್ತಿರುತ್ತಾಳೆ. ನಿಮಗೆ ಹೇಳಿದ ಉತ್ತರವನ್ನೆ ಹೇಳಿ ಸಾಕಾಗುವುದು. ಆದರೆ ಅವಳು ಅವಳಿಗಿಂತ ಹೆಚ್ಚು ನಿಮ್ಮನ್ನು ಪ್ರೀತಿಸುತ್ತಾಳೆ.
5. ಹಣಕ್ಕೆ ಹೆಚ್ಚಿನ ಮಹತ್ವ ಕೊಡುವವಳು:ಇಂತಹ ಗುಣವಿರುವವರ ಹತ್ತಿರ ಪ್ರೀತಿ ಎಂಬ ಸಂಬಂಧ ಇಟ್ಟುಕೊಳ್ಳದಿರುವುದು ಒಳ್ಳೆಯದು. ಅವಳು ನಿಮ್ಮನ್ನು ಪ್ರೀತಿಸುವುದಕ್ಕಿಂತ ನಿಮ್ಮ ಅಂತಸ್ತು ಮತ್ತು ಹಣವನ್ನು ಹೆಚ್ಚು ಪ್ರೀತಿಸುತ್ತಿರುತ್ತಾಳೆ. ನೀವು ಕೊಡುವ ವಸ್ತುಗಳಲ್ಲಿ ಪ್ರೀತಿ ಕಾಣುವ ಬದಲು ಬ್ರಾಂಡ್ ಬಗ್ಗೆ ಹೆಚ್ಚು ಗಮನ ಪ್ರಾಮುಖ್ಯತೆ ಕೊಡುತ್ತಾಳೆ. ನಿಮ್ಮಲ್ಲಿ ಹಣ ಇಲ್ಲ ಅಂದರೆ ನಿಮ್ಮನ್ನು ಕಡೆಗಣಿಸಿ ಹೋಗಲು ಹಿಂದೆ-ಮುಂದೆ ನೋಡಲ್ಲ.



Click it and Unblock the Notifications