Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರೀತಿಗಾಗಿ ಕಾದಿರುವ ಹೃದಯ ಬರೆಯ ಉಯಿಲು

ನನ್ನ ಕಣ್ಣಲ್ಲಿ ಒಂದು ಹನಿ ನೀರು ಬಿದ್ದರೂ ನೀ ಅದೆಷ್ಟೋ ಚಡಪಡಿಸುತ್ತಿದ್ದೆ. ಆದರೆ ಈಗ ಈ ಹೃದಯ ನಿನಗಾಗಿ ಬಿಕ್ಕಿ ಬಿಕ್ಕಿ ಆಳುತ್ತಿದ್ದರೂ ನೋಡದಷ್ಟು ಕುರುಡನಾಗಿ ಹೋದೆಯಾ? ನೀನಾಡಿದ ಆ ಭರವಸೆಯ ಮಾತುಗಳು ಸುಳ್ಳಾಯಿತೆ? ನೀನೇ ಇಲ್ಲದೇ ಈ ಬದುಕಿನ ಚಕ್ರವೇ ಮುರಿದು ಬಿದ್ದಂತಾಗಿದೆ. ನಿನ್ನೊಂದಿಗೆ ಇರುವ ಪ್ರತಿಯೊಂದು ಕ್ಷಣವೂ ಜೀವನದ ಆಸೆಯನ್ನು ಹೆಚ್ಚಿಸುತ್ತಿತ್ತು. ನಾಳೆಯ ಬರುವಿಕೆಗಾಗಿ ಆಸೆಗಣ್ಣೆನಿಂದ ಹಾತೊರೆಯುತ್ತಿದೆ ನನ್ನ ಮನ. ಆದರೆ ಈಗ ನಾಳೆಯೆಂಬುದು ಬರೀ ಕತ್ತಲು ತುಂಬಿದ ಕಲ್ಲು ಮುಳ್ಳಿನ ದಾರಿಯಾಗಿದೆ.
ನಿನ್ನ ಎದೆಯ ಮೇಲೆ ಕಣ್ಣುಮುಚ್ಚಿ ಮಗುವಂತೆ ಮಲಗಿದಾಗ ನಿನ್ನ ಆಸರೆಯ ಅಪ್ಪುಗೆಯಾ ನಾ ಹೇಗೆ ಮರೆಯಲಿ. ನಾ ನನ್ನ ಮರೆಯುವಷ್ಟು ನೀ ನನ್ನ ಪ್ರೀತಿಸಿ ನಡುನೀರಿನಲ್ಲಿ ನನ್ನ ಮರೆತು ಬಿಟ್ಟು ನಿನ್ನ ದಾರಿಯಾ ನೀ ಕಂಡು ಕೊಂಡೆಯಾ? ನಾ ಆ ನೀರಿನಾ ಸುಳಿಯಲ್ಲಿ ಸಿಕ್ಕಿ ಪ್ರಾಣ ಹೋಗಲಿ ಎಂದು ಕಾಯುತ್ತಿರುವೆಯಾ?
ನಿನ್ನ ಧ್ವನಿ ಕೇಳದೇ, ನಿನ್ನ ನಗು ನೋಡದೇ ಈ ಮನ ಕೊರಗುತ್ತಿದೆ. ನೀನಿಲ್ಲದೇ ನಾ ಬೇರು ಮುರಿದ ಮರದ ಹಾಗೇ ನನ್ನ ಜೀವ ನರಳಿದೆ. ನನ್ನ ಮಡಿಲಿನಲ್ಲಿ ಸವಿಗನಸನು ಹಾಸಿದೆ ಬಾರೋ ನನ್ನ ಗೆಳೆಯನೆ ನಿನಗಾಗಿ ಕಾದಿರುವೆ. ಸಾವು ಬಂದರೂ ಮುಂದಿನ ಜನ್ಮದಲ್ಲಿಯೂ ನೀನೇ ಸಿಗುವಂತೆ ನಾ ಉಯಿಲು ಬರೆಯುವೆ.



Click it and Unblock the Notifications
