Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಸಂಗಾತಿಗೆ ಫೇಸ್ ಬುಕ್ ಪಾಸ್ ವರ್ಡ್ ಗೊತ್ತಿದೆಯೆ?

ಮೊನ್ನೆ ನನ್ನ ಗೆಳಯ ಮತ್ತು ಗೆಳತಿಯ (ಇಬ್ಬರೂ ನನ್ನ ಕಾಲೇಜ್ ಮೇಟ್) ನಿಶ್ಚಿತಾರ್ಥವಾಯಿತು. ಆದರೆ ಅದು ಬೆಂಗಳೂರಿನಲ್ಲಿರುವ ನಮ್ಮ ಗೆಳಯರ ಬಳಗಕ್ಕೆ ಗೊತ್ತಾದದು ಫೇಸ್ ಬುಕ್ ನಿಂದ! ಅವರು ನಿಶ್ಚಿತಾರ್ಥದ ಬಗ್ಗೆ ನಮಗೆ ಒಂದೂ ಮೆಸೇಜೂ ಹಾಕಿರಲಿಲ್ಲ. ಅದರ ಬದಲು ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಲೋಡ್ ಮಾಡಿದರು. ಅದನ್ನು ನೋಡಿ ತಿಳಿದುಕೊಳ್ಳಬೇಕಾಯಿತು ಅವರು ನಿಶ್ಚಿತಾರ್ಥವಾದ ಸಿಹಿ ಸುದ್ಧಿ!
ಜನಪ್ರಿಯವಾಗಿರುವ ಫೇಸ್ ಬುಕ್ ಗೆಳಯರನ್ನಷ್ಟೆ ಅಲ್ಲ ಗಂಡ-ಹೆಂಡತಿ ಸಂಬಂಧವನ್ನು ದೂರ ಮಾಡುತ್ತಿದೆ! ಫೇಸ್ ಬುಕ್ ನಿಂದ ಡಿವೋರ್ಸ್ ಗಾಗಿ ಕೋರ್ಟ್ ಮೆಟ್ಟಿಲು ಹತ್ತಿರುವ ಅನೇಕ ಕುಂಟುಂಬಗಳಿವೆ. ಫೇಸ್ ಬುಕ್ ಈ ರೀತಿ ಕುಟುಂಬ ಒಡೆಯುವುದನ್ನು ತಪ್ಪಿಸಲು ಪಾಸ್ ವರ್ಡ್ ಕೊಟ್ಟರೆ ಈ ಎಲ್ಲಾ ಸಮಸ್ಯೆಗೆ ಪರಿಹಾರ ದೊರೆಯಬಹುದೆ?
ಜೀವನದಲ್ಲಿ ಸಂಶಯವೆಂಬುದು ಇದ್ದರೆ ಸಂಸಾರ ಹಾಳಾದಂತೆ. ಗಂಡ-ಹೆಂಡತಿ ನಡುವೆ ಮುಚ್ಚುಮರೆ ಇಲ್ಲದಿರುವುದೇ ಒಳ್ಳೆಯದು. ನಿಮ್ಮ ಪಾಸ್ ವರ್ಡ್ ನಿಮ್ಮ ಗಂಡ/ ಹೆಂಡತಿ ಜೊತೆ ಇದ್ದರೆ ನಿಮ್ಮ ಮೇಲೆ ನಂಬಿಕೆ ಮತ್ತು ಅತ್ಮೀಯತೆ ಮತ್ತಷ್ಟು ಹೆಚ್ಚಾಗಬಹುದು.
ಆದರೆ ನಿಮ್ಮ ಸಂಗಾತಿ ಸಣ್ಣಪುಟ್ಟ ವಸ್ತುಗಳಿಗೆ ಸಂಶಯ ಪಡುವವರಾದರೆ ಪಾಸ್ ವರ್ಡ್ ಕೊಡದಿರುವುದೇ ಸೂಕ್ತ. ಫೇಸ್ ಬುಕ್ ನಲ್ಲಿ ನೀವು ಬೇರೆಯವರೆಗೆ ಕಳಿಸಿದ ಮೆಸೇಜ್ ಅನ್ನು ತಪ್ಪಾಗಿ ಅರ್ಥೈಹಿಸಿಕೊಂಡರೆ ಜಗಳ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಏನು ಮಾಡಬೇಕು ಎಂಬುದನ್ನು ನೀವೆ ತೀರ್ಮಾನಿಸಿ.
ನಿಮ್ಮ ಪಾಸ್ ವರ್ಡ್ ನಿಮ್ಮ ಸಂಗಾತಿ ಜೊತೆಗೆ ಗೊತ್ತಿದ್ದರೆ ಖಾಸಗಿತನ ಎಂಬುದು ಇರುವುದಿಲ್ಲ ನಿಜ ಆದರೆ ಮದುವೆಯಾದ ಮೇಲೆ ಖಾಸಗಿ ಬದುಕಿಗಿಂತ ಪರಸ್ಪರ ಅರೆತು ಬಾಳುವ ಸಂಬಂಧಕ್ಕೆ ಆಯುಷ್ಯ ಜಾಸ್ತಿ.
ಫೇಸ್ ಬುಕ್ ಪಾಸ್ ವರ್ಡ್ ಬಾಳ ಸಂಗಾತಿಗೆ ತಿಳಿದಿರುವುದು ಸರಿಯೆ ಅಥವಾ ತಪ್ಪೆ? ಈ ವಿಷಯದ ಬಗ್ಗೆ ನಿಮ್ಮ ನಿಮ್ಮ ಅನಿಸಿಕೆ ತಿಳಿಸಿ.



Click it and Unblock the Notifications
