Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ಕಿ ಹಾಕದೆ ರಾಗಿ ಮಾತ್ರ ಬಳಸಿ ಮಾಡುವ ಇಡ್ಲಿ, ಮಧುಮೇಹಿಗಳಿಗೆ ರುಚಿಕರವಾದ ಬ್ರೇಕ್‌ಫಾಸ್ಟ್ ಆಯ್ಕೆ
ರಾಗಿ ತಿನ್ನುವುದರಿಂದ ರೋಗ ದೂರವಿಡಬಹುದು, ಮಧುಮೇಹಿಗಳ ಪಾಲಿನ ಅಮೃತ ರಾಗಿಯೆಂದರೆ ತಪ್ಪಾಗಲಾರದು. ಮುದ್ದೆ, ಇಡ್ಲಿ, ರೊಟ್ಟಿ, ರಾಗಿ ಮಣ್ಣಿ ಅಂತ ರುಚಿ ರುಚಿಯಾಗಿ ಇದನ್ನು ಮಾಡಿ ಸವಿಯಬಹುದು, ರಾಗಿ ತಿನ್ನುವುದರಿಂದ ದೇಹಕ್ಕೆ ಅವಶ್ಯಕವಾದ ಪೋಷಕಾಂಶ ದೊರೆಯುವುದು, ಸಕ್ಕರೆಯಂಶ ನಿಯಂತ್ರಣದಲ್ಲಿಡಬಹುದು. ಇಲ್ಲಿ ನಾವು ಇಡಿ ರಾಗಿ ಬಳಸಿ ಮಾಡುವ ಬ್ರೇಕ್‌ಫಾಸ್ಟ್ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
2 ಕಪ್ ರಾಗಿ (ಇಡಿ ರಾಗಿ)
ಉದ್ದಿನ ಬೇಳೆ 1 ಕಪ್
1 ಚಮಚ ಮೆಂತೆ ಬೀಜ
ಒಂದು ಮುಷ್ಟಿಯಷ್ಟು ಅವಲಕ್ಕಿ
ತುಪ್ಪ ಅಥವಾ ಎಣ್ಣೆ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ನೀವು ರಾಗಿ ಮತ್ತೆ ಉದ್ದುವನ್ನು ಪ್ರತ್ಯೇಕವಾಗಿ ನೆನೆ ಹಾಕಿ. ನೀವು
6-8 ಗಂಟೆಗಳ ಕಾಲ ನೆನೆ ಹಾಕಿ.
ಮೆಂತೆಯನ್ನು ಕೂಡ ನೆನೆ ಹಾಕಿ
ಅವಲಕ್ಕಿ ರುಬ್ಬುವ 10 ನಿಮಿಷ ಮೊದಲು ನೆನೆ ಹಾಕಿದರೆ
ಸಾಕು.
- ರಾಗಿಯನ್ನು ರುಬ್ಬಿ, ತುಂಬಾ ನುಣ್ಣನೆ ರುಬ್ಬಬೇಡಿ,ಸ್ವಲ್ಪ ತರಿತರಿಯಾಗಿ ರುಬ್ಬಿ
- ಉದ್ದಿನ ಬೇಳೆ ರುಬ್ಬುವಾಗ ಮೆಂತೆ ಕೂಡ ಸೇರಿಸಿ ರುಬ್ಬಿ. ಅವಲಕ್ಕಿ ಕೂಡ ಸೇರಿಸಿ.
- ಈಗ ಎಲ್ಲಾ ಹಿಟ್ಟು ಚೆನ್ನಾಗಿ ಕಲೆಸಿ ಹುದುಗು ಬರಲು 8 ಗಂಟೆ ಇಡಿ.
- ನಂತರ ಇಡ್ಲಿ ಪಾತ್ರೆಗೆ ತುಪ್ಪ ಸವರಿ ಹಿಟ್ಟು ಹಾಕಿ 20 ನಿಮಿಷ ಬೇಯಿಸಿದರೆ ರುಚಿಯಾದ ರಾಗಿ ಇಡ್ಲಿ ರೆಡಿ.
ರಾಗಿ ಇಡ್ಲಿ ಮಧುಮೇಹಗಳಿಗೆ ಅತ್ಯುತ್ತುಮವಾದ
ಬ್ರೇಕ್‌ಫಾಸ್ಟ್
ಭಾರತದಲ್ಲಿ ಮಧುಮೆಹಿಗಳ ಸಮಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಬದಲಾಗುತ್ತಿರುವ ಜೀವನಶೈಲಿ , ಆಹಾರ ಶೈಲಿ ಮಧುಮೇಹ ಹೆಚ್ಚಳಕ್ಕೆ ಬಹುದೊಡ್ಡ ಕೊಡುಗೆಯನ್ನೇ ನೀಡುತ್ತಿದೆ. ಮಧುಮೇಹ ನಿಯಂತ್ರಣದಲ್ಲಿರದಿದ್ದರೆ ಸೋಂಕು, ದೃಷ್ಟಿದೋಷ, ಕಿಡ್ನಿ ವೈಫಲ್ಯ, ಹೃದಯ ಸಂಬಮಧಿ ಸಮಸ್ಯೆ, ಪಾರ್ಶ್ವವಾಯು ಸೇರಿಸಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕು.
- ರಾಗಿ ಮಧುಮೇಹ ನಿಯಂತ್ರಿಸುವ ಅತ್ಯುತ್ತಮವಾದ ಆಹಾರವಾಗಿದೆ. ರಾಗಿಯಲ್ಲಿ ಪಾಲಿಫೀನೋಲ್, ಕ್ಯಾಲ್ಸಿಯಂ, ಅಮೈನೋ ಆಮ್ಲ ಅಂಶವಿದೆ. ಹಾಗಾಗಿ ಅಕ್ಕಿ ಬದಲಿಗೆ ರಾಗಿ ಸೇವನೆ ತುಂಬಾ ಒಳ್ಳೆಯದು.
- ರಾಗಿಯಲ್ಲಿ ಗ್ಲುಟೀನ್ ಫ್ರೀ ಆದ್ದರಿಂದ ರಾಗಿಗಳಿಗೆ ತುಂಬಾ ಒಳ್ಳೆಯದು.
- ರಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
- ರಾಗಿಯಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ
- ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.



Click it and Unblock the Notifications
