Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
3 ಟೊಮೆಟೊ, 1 ಈರುಳ್ಳಿ ಇದ್ದರೆ ಸಾಕು! 10 ನಿಮಿಷದಲ್ಲಿ ಚಪಾತಿಗೆ ಹೋಟೆಲ್ ರುಚಿಯ ಸೈಡ್ ಡಿಶ್ ರೆಡಿ.. ಹೀಗೆ ಮಾಡಿ
10 ನಿಮಿಷದಲ್ಲಿ ಚಪಾತಿಗೆ ರುಚಿಕರ ಸೈಡ್ ಡಿಶ್.. ಕೇವಲ 3 ಟೊಮೆಟೊ ಮತ್ತು 1 ಈರುಳ್ಳಿ ಬಳಸಿ ಹೋಟೆಲ್ ಶೈಲಿಯ ಸೈಡ್ ಡಿಶ್ (Side Dish) ಮಾಡಿ ನೋಡಿ. ಹೌದು, ಬೆಳಗಿನ ಅವಸರ ಅಥವಾ ದೀರ್ಘ ಕೆಲಸದ ನಂತರ ಅಡುಗೆಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಬಹುತೇಕರು ಬಯಸುವುದಿಲ್ಲ. ಅದರಲ್ಲೂ ಚಪಾತಿಯ (Chapathi) ಜೊತೆ ಸವಿಯಲು ರುಚಿಕರವಾದ ಸೈಡ್ ಡಿಶ್ ತಯಾರಿಸುವುದು ಕೆಲವೊಮ್ಮೆ ಸವಾಲಿನ ಕೆಲಸವಾಗಿ ಪರಿಣಮಿಸುತ್ತದೆ.
ಅದಕ್ಕಾಗಿಯೇ, ಕೇವಲ 10 ನಿಮಿಷದಲ್ಲಿ, ಒಂದೇ ಈರುಳ್ಳಿ ಮತ್ತು ಮೂರು ಟೊಮೆಟೊ ಬಳಸಿ ಹೋಟೆಲ್ ಶೈಲಿಯ 'ಈರುಳ್ಳಿ-ಟೊಮೆಟೊ ಮಸಾಲಾ' (Tomato Onion Masala) ರೆಸಿಪಿ ಪರಿಪೂರ್ಣ ಪರಿಹಾರವಾಗಿದೆ. ತರಕಾರಿಗಳು ಲಭ್ಯವಿಲ್ಲದಿದ್ದಾಗ ಅಥವಾ ಸಮಯದ ಕೊರತೆಯಿದ್ದರೆ, ಈ ಸೈಡ್ ಡಿಶ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಬ್ಯಾಚುಲರ್‌ಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಅಡುಗೆ ಪ್ರಕ್ರಿಯೆಯನ್ನು ಸರಳವಾಗಿಸಿ, ರುಚಿಕರವಾದ ಫಲಿತಾಂಶ ನೀಡುತ್ತದೆ.
ಚಪಾತಿ ಮಾತ್ರವಲ್ಲದೆ, ಪೂರಿ, ರೊಟ್ಟಿ ಮತ್ತು ಬಿಸಿ ಅನ್ನದೊಂದಿಗೂ ಈ ಮಸಾಲಾ ಅದ್ಭುತವಾಗಿ ಹೊಂದಿಕೊಳ್ಳುತ್ತದೆ. ಈರುಳ್ಳಿ-ಟೊಮೆಟೊ ಮಸಾಲಾಗೆ ಬೇಕಾದ ಪದಾರ್ಥಗಳು ಮತ್ತು ತಯಾರಿಸುವ ಸಲಭ ವಿಧಾನ (Tomato Onion Masala Recipe) ಇಲ್ಲಿದೆ.
ಈರುಳ್ಳಿ-ಟೊಮೆಟೊ ಮಸಾಲಾಗೆ ಬೇಕಾದ ಪದಾರ್ಥಗಳು
• ಎಣ್ಣೆ
• ಈರುಳ್ಳಿ
• ಟೊಮೆಟೊ
• ಜೀರಿಗೆ
• ಕರಿಬೇವು
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಮೊಸರು
• ಖಾರದ ಪುಡಿ
• ಧನಿಯಾ ಪುಡಿ
• ಗರಂ ಮಸಾಲಾ
• ರುಚಿಗೆ ತಕ್ಕಷ್ಟು ಉಪ್ಪು
• ನೀರು
• ಕೊತ್ತಂಬರಿ ಸೊಪ್ಪು
ಈರುಳ್ಳಿ-ಟೊಮೆಟೊ ಮಸಾಲಾ ತಯಾರಿಸುವ ವಿಧಾನ
- ಮೊದಲಿಗೆ, ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ದೊಡ್ಡದಾಗಿ ಕತ್ತರಿಸಿದ ಈರುಳ್ಳಿ ಮತ್ತು ಅರ್ಧ ಟೊಮೆಟೊ ತುಂಡುಗಳನ್ನು ಸೇರಿಸಿ ೧ ನಿಮಿಷ ಲಘುವಾಗಿ ಹುರಿಯಿರಿ. ಇವು ಪೂರ್ತಿ ಬೇಯುವ ಮುನ್ನವೇ ತಟ್ಟೆಗೆ ತೆಗೆದಿಡಿ. (ಈ ಹಂತವು ಗ್ರೇವಿಗೆ ಹೋಟೆಲ್ ಲುಕ್ ಮತ್ತು ರುಚಿ ನೀಡಲು ಸಹಾಯ ಮಾಡುತ್ತದೆ.)
- ಅದೇ ಎಣ್ಣೆಗೆ ಜೀರಿಗೆ ಸೇರಿಸಿ ಚಿಟಪಟ ಎನ್ನಲು ಬಿಡಿ. ನಂತರ ಕರಿಬೇವು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಕೆಂಪಾಗುವವರೆಗೆ ಹುರಿಯಿರಿ. ಈರುಳ್ಳಿ ಬೆಂದ ನಂತರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ.
- ಈಗ ಮಿಕ್ಸಿಯಲ್ಲಿ ಅರೆದ ಮೂರು ಟೊಮೆಟೊ ಪೇಸ್ಟ್ ಅನ್ನು ಬಾಣಲೆಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಟೊಮೆಟೊದಿಂದ ಎಣ್ಣೆ ಬೇರ್ಪಡುವವರೆಗೆ ಸರಿಯಾಗಿ ಬೇಯಿಸಿ.
- ಬಳಿಕ ಉರಿಯನ್ನು ಕಡಿಮೆ ಮಾಡಿ ಎರಡು ಚಮಚ ಮೊಸರು ಸೇರಿಸಿ ಮಸಾಲೆಯೊಂದಿಗೆ ಚೆನ್ನಾಗಿ ಬೆರೆಸಿ.
- ಬಳಿಕ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಸೇರಿಸಿ. ಎಲ್ಲವೂ ಮಿಶ್ರಣವಾದ ನಂತರ, ಒಂದೂವರೆ ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ.
- ಈಗ, ಗ್ರೇವಿ ಕುದಿ ಬಂದು ಎಣ್ಣೆ ಮೇಲೆ ತೇಲಿದಾಗ, ಮೊದಲು ಹುರಿದಿಟ್ಟಿದ್ದ ದೊಡ್ಡ ಈರುಳ್ಳಿ ಮತ್ತು ಟೊಮೆಟೊ ತುಂಡುಗಳನ್ನು ಸೇರಿಸಿ.
- ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಉದುರಿಸಿ, ಒಮ್ಮೆ ಬೆರೆಸಿ, ಒಲೆಯಿಂದ ಇಳಿಸಿದರೆ ರುಚಿಕರ ಮಸಾಲಾ ಸಿದ್ಧ.
ಈ ಈರುಳ್ಳಿ-ಟೊಮೆಟೊ ಮಸಾಲಾ ರೆಸಿಪಿಯ ವಿಶೇಷತೆಗಳು
* ವೇಗದ ರೆಸಿಪಿ: ಯಾವುದೇ ತರಕಾರಿ ಕತ್ತರಿಸುವ ಅಥವಾ ದೀರ್ಘಕಾಲ ಬೇಯಿಸುವ ಜಂಜಾಟವಿಲ್ಲದೆ, ಕೇವಲ 10 ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು.
* ಕಡಿಮೆ ವೆಚ್ಚ: ಅಡುಗೆಮನೆಯಲ್ಲಿ ಲಭ್ಯವಿರುವ ಈರುಳ್ಳಿ ಮತ್ತು ಟೊಮೆಟೊ ಹೊರತುಪಡಿಸಿ ದುಬಾರಿ ಪದಾರ್ಥ ಬೇಕಿಲ್ಲ.
* ಸೂಪರ್ ರುಚಿ ಮತ್ತು ಡಿಸೈನ್: ಕೊನೆಯಲ್ಲಿ ಸೇರಿಸುವ ಹುರಿದ ಈರುಳ್ಳಿ ತುಂಡುಗಳು ಗ್ರೇವಿಗೆ ಹೋಟೆಲ್ 'ಕಡೈ' ಮಸಾಲಾದಂತೆ ವಿಶಿಷ್ಟ ಆಕರ್ಷಣೆ ಮತ್ತು ರುಚಿ ನೀಡುತ್ತವೆ.
ಈ ಟಿಪ್ಸ್ ಬಳಸಿ!
ಮಸಾಲಾ ಇನ್ನಷ್ಟು ರುಚಿಯಾಗಿರಬೇಕೆಂದರೆ, ಸ್ವಲ್ಪ ಕಸ್ತೂರಿ ಮೇಥಿಯನ್ನು ಕೈಯಿಂದ ಹಿಸುಕಿ ಸೇರಿಸಿ. ಇದು ಅಡುಗೆಗೆ ಉತ್ತಮವಾದ ಸುಗಂಧ ನೀಡುತ್ತದೆ.



Click it and Unblock the Notifications
