Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮೈಕ್ರೋವೇವ್ ಅಡುಗೆಗೆ ಕೆಲ ಸಲಹೆಗಳು

1. ಮೈಕ್ರೋವೇವ್ ನಲ್ಲಿ ಆಹಾರ ಬೇಯಿಸುವಾಗ ಮಿತಿ ಮೀರಿ ಬೇಯಿಸಿಬಾರದು. ತುಂಬಾ ಬೇಯಿಸಿದರೆ ಆಹಾರ ಬೆಂದು ಹಿಟ್ಟಿನ ರೀತಿಯಾಗುವುದು. ಆಹಾರವನ್ನು ಮುಕ್ಕಾಲು ಭಾಗದಷ್ಟು ಬೇಯಿಸಿ ನಂತರ ಸ್ಟ್ಯಾಂಡಿಂಗ್ ಟೈಮ್ ನಲ್ಲಿ ಬೇಯಿಸುವುದು ಒಳ್ಳೆಯದು.
2. ಮೈಕ್ರೋವೇವ್ ನಲ್ಲಿ ಆಹಾರ ಬೇಯಿಸಲು ಇಡುವ ಪಾತ್ರೆಯು ಚೌಕಾಕಾರದಲ್ಲಿರುವುದಕ್ಕಿಂತ ದುಂಡಗೆ ಇರುವ ಪಾತ್ರೆ ಒಳ್ಳೆಯದು. ಚೌಕಾಕಾರದ ಪಾತ್ರೆಯಲ್ಲಿ ಅದರ ನಾಲ್ಕು ಮೂಲೆಯಲ್ಲಿರುವ ಆಹಾರ ಅಧಿಕವಾಗಿ ಬೇಯುವುದು. ಮೈಕ್ರೋವೇವ್ ನಲ್ಲಿ ಪಾತ್ರೆಯು ಒಂದೇ ರೀತಿಯಲ್ಲಿ ಬೇಯಲು ದುಂಡಗೆ ಇರುವ ಪಾತ್ರೆ ಬಳಸುವುದು ಒಳ್ಳೆಯದು.
3. ಆಹಾರವನ್ನು ಬೇಯಲು ಇಡುವಾಗಲೇ ಉಪ್ಪು ಹಾಕಿ ಇಟ್ಟರೆ ಬೇಯಲು ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಆಹಾರ ಮುಕ್ಕಾಲು ಭಾಗ ಬೆಂದ ನಂತರ ಉಪ್ಪು ಹಾಕಿದರೆ ಆಯಿತು.
4. ಆಹಾರವನ್ನು ಬೇಯಲು ಇಡುವಾಗ ಅಗತ್ಯವಿರುವುದಕ್ಕಿಂತ ಅಧಿಕ ನೀರು ಹಾಕಬಾರದು. ಏಕೆಂದರೆ ಅಧಿಕ ನೀರು ಹಾಕಿದಷ್ಟು ಬೇಯಲು ಅಧಿಕ ಸಮಯ ತೆಗೆದುಕೊಳ್ಳುತ್ತದೆ.
5. ಮೈಕ್ರೋವೇವ್ ನಲ್ಲಿ ಡೀಪ್ ಫ್ರೈ ಮಾಡಬಾರದು.
6. ಪುಡ್ಡಿಂಗ್ ಅನ್ನು ಮೈಕ್ರೋವೇವ್ ನಲ್ಲಿ ಮಾಡುವಾಗ ಮದ್ಯ (ಆಲ್ಕೋಹಾಲ್) ಹಾಕಬಾರದು, (ಮದ್ಯ ಬೆಂಕಿಯನ್ನು ಆಕರ್ಷಿಸುತ್ತದೆ)
7. ಮೊಟ್ಟೆಯನ್ನು ಸಿಪ್ಪೆ ಸಹಿತ ಮೈಕ್ರೋವೇವ್ ನಲ್ಲಿ ಬೇಯಿಸಬಾರದು.
8. ಗ್ರೇವಿ ಮಾಡುವಾಗ ಸ್ವಲ್ಪ ಆಳವಾದ ಪಾತ್ರೆಯನ್ನು ಬಳಸಿ ಮಾಡಬೇಕು. ಅದರಲ್ಲೂ ಪಾತ್ರೆಯಲ್ಲಿ ಮಕ್ಕಾಲು ಭಾಗದಷ್ಟು ಮಾತ್ರ ಆಹಾರ ಸಾಮಾಗ್ರಿಗಳನ್ನು ಹಾಕಬೇಕು.
9. ಆಹಾರ ಪಾತ್ರೆಯನ್ನು ಮುಚ್ಚಲು ಅಲ್ಯುಮಿನಿಯಂ ಪಾತ್ರೆ ಬಳಸಬಾರದು. ಆಹಾರಗಳಾದ ಲಡ್ಡು, ಬರ್ಫಿ ಇವುಗಳನ್ನು ಮತ್ತೆ ಸಿಲ್ವರ್ ಶೀಟ್ ನಲ್ಲಿಟ್ಟು ಬಿಸಿ ಮಾಡಬಾರದು.
10. ಕೇಕ್ ಮಾಡುವಾಗ ಪಾತ್ರೆಯಲ್ಲಿ ಅರ್ಧದಷ್ಟು ಮಾತ್ರ ಕೇಕ್ ಮಿಶ್ರಣ ಹಾಕಬೇಕು, ಆಗ ಮಾತ್ರ ಕೇಕ್ ಗೆ ಸರಿಯಾಗಿ ಉಬ್ಬಲು ಸಹಾಯಕವಾಗುವುದು.



Click it and Unblock the Notifications
