Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆಲೂ ಎಗ್ ಫ್ರೈ-ಬ್ಯಾಚುಲರ್ ರೆಸಿಪಿ
ನೀವು ಮೊಟ್ಟೆ ಪ್ರಿಯರಾಗಿದ್ದರೆ, ನಿಮಗಾಗಿ ಸರಳವಾದ, ರುಚಿಯಾದ ಸ್ಪೆಷಲ್ ಮೊಟ್ಟೆಯ ರೆಸಿಪಿ ನೀಡಿದ್ದೇನೆ ನೋಡಿ.
ಈ ಆಲೂ ಎಗ್ ಫ್ರೈ ಮಾಡಲು ಸರಳವಾದ ಪದಾರ್ಥಗಳಿದ್ದರೆ ಸಾಕು. ಈ ಆಲೂ ಎಗ್ ಫ್ರೈಯನ್ನು ಚಪಾತಿ, ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಬನ್ನಿ ಇವತ್ತಿನ ಸ್ಪೆಷಲ್ ಆಲೂ ಎಗ್ ಫ್ರೈ ಮಾಡುವುದು ಹೇಗೆ ಎಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು
ಸಾಧಾರಣ ಗಾತ್ರದ ಆಲೂಗಡ್ಡೆ 4
ಹಸಿ ಮೆಣಸು 3 (ಹಸಿ ಮೆಣಸನ್ನು ಸಮ ಅರ್ಧ ಭಾಗವಾಗಿ ಕತ್ತರಿಸಿ)
ಟೊಮೆಟೊ1
ಮೊಟ್ಟೆ 3
ಈರುಳ್ಳಿ 1
ಬೆಳ್ಳುಳ್ಳಿ 2-3 ಎಸಳು
ಎಣ್ಣೆ 1 ಚಮಚ
ಸ್ವಲ್ಪ ಸಾಸಿವೆ
ಅರ್ಧ ಚಮಚ ಉಪ್ಪು
ತಯಾರಿಸುವ ವಿಧಾನ
* ಆಲೂಗಡ್ಡೆಯನ್ನು ತೆಳ್ಳಗೆ ಕತ್ತರಿಸಿ, ತೊಳೆದು ಇಡಿ.
* ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಮಾಡುವಾಗ ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿ, ನಂತರ ಆಲೂಗಡ್ಡೆ ಹಾಕಿ, ಅರ್ಧ ಚಮಚ ಪುಡಿ ಉಪ್ಪು ಹಾಕಿ, 1 ಕಪ್ ನೀರು ಹಾಕಿ ಬೇಯಿಸಿ.
* ಆಲೂಗಡ್ಡೆ ಬೆಂದು ನೀರು ಸಂಪೂರ್ಣ ಆವಿಯಾಗುವವರೆಗೆ ಬೇಯಿಸಿ.
* ನಂತರ ಮೊಟ್ಟೆಯನ್ನು ಹಾಕಿ ಮಿಕ್ಸ್ ಮಾಡಿ, ಮತ್ತೆ 5 ನಿಮಿಷ ಸೌಟ್ ನಿಂದ ಆಡಿಸುತ್ತಾ ಫ್ರೈ ಮಾಡಿದರೆ ಆಲೂ ಎಗ್ ಫ್ರೈ ರೆಡಿ.



Click it and Unblock the Notifications
