Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತಾಳೆಹಣ್ಣಿನ ಜ್ಯೂಸ್ ರೆಸಿಪಿ: ಬೇಸಿಗೆ ದೇಹ ತಂಪಾಗಿಸಲು ಸಹಕಾರಿ
ಈ ವರ್ಷ ಉಷ್ಣಾಂಶ ಹೆಚ್ಚಿದೆ, ಕೆಲವರು ಹೀಟ್‌ಸ್ಟ್ರೋಕ್‌ನಿಂದ ಸಾವನ್ನಪ್ಪಿದ್ದಾರೆ ಕೂಡ. ಈ ಉರಿ ಬಿಸಿಲಿನ ಸಮಯದಲ್ಲಿ ದೇಹ ತಂಪಾಗಿಸುವ ಆಹಾರ ಸೇವಿಸಬೇಕು. ಎಳನೀರಿನಂತೆ, ತಾಳೆಹಣ್ಣು ಕೂಡ ಮಾರುತ್ತಿರುತ್ತಾರೆ, ಇದು ಕಣ್ಣಿಗೆ ಬಿದ್ದ ತಕ್ಷಣ ಸೇವಿಸಿ, ಏಕೆಂದರೆ ದೇಹ ತಂಪಾಗಿಸುವಲ್ಲಿ ಸಹಕಾರಿ. ಇದರಿಂದ ಮಾಡುವ ಜ್ಯೂಸ್ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಗ್ರಿ
ತಾಳೆಹಣ್ಣು ಅಥವಾ ಈರೋಳ್
1 ಚಮಚ ನಿಂಬೆರಸ
ಸಕ್ಕರೆ
ನೀರು
ಐಸ್ ಕ್ಯೂಬ್ಸ್
ಮಾಡುವ ವಿಧಾನ
ತಾಳೆಹಣ್ಣು ತೆಗೆದು ಮಿಕ್ಸ್‌ಯನ್ನು ಪೇಸ್ಟ್ ಮಾಡಿ
ಈಗ ನೀರಿಗೆ ಸಕ್ಕರೆ, ನಿಂಬೆರಸ ಹಾಕಿ ಮಿಕ್ಸ್ ಮಾಡಿ, ನಂತರ ಅದಕ್ಕೆ ತಾಳೆಹಣ್ಣು
ಪೇಸ್ಟ್ ಹಾಕಿ ಸೇರಿಸಿ, ಐಸ್‌ಕ್ಯೂಬ್ಸ್ ಹಾಕಿ ಸರ್ವ್ ಮಾಡಿ
ಕುಡಿಯಲು ಚೆನ್ನಾಗಿರುತ್ತದೆ.
ಸೋಡಾ ಹಾಕಿ ಮಾಡುವ ವಿಧಾನ
ಸೋಡಾ ಒಂದು ಬಾಟಲಿ
ತಾಳೆಹಣ್ಣು 1
ಪುದೀನಾ ಎಲೆ
ನಿಂಬೆಹಣ್ಣು 1
ಸಕ್ಕರೆ
ಐಸ್‌ಕ್ಯೂಬ್ಸ್
ಮಾಡುವ ವಿಧಾನ
ಸೋಡಾಗೆ ಸಕ್ಕರೆ ಪುಡಿ, ನಿಂಬೆರಸ ಹಾಕಿ ಮಿಕ್ಸ್ ಮಾಡಿ.
ನೀವು ತಾಳೆಹಣ್ಣು ಪೇಸ್ಟ್ ಮಾಡಿ ಸೋಡಾಗೆ ಹಾಕಿ.
ಈಗ ಐಸ್‌ಕ್ಯೂಬ್ಸ್, ಪುದೀನಾ ಎಲೆ ಹಾಕಿ ಸರ್ವ್ ಮಾಡಿ.
ಈ ಜ್ಯೂಸ್ ಕುಡಿಯಲು ತುಂಬಾ ರುಚಿಯಾಗಿರುತ್ತದೆ, ನೀವು ಒಂದು ಲೋಟ ಕುಡಿದರೆ ಮತ್ತೊಂದು ಲೋಟ ಕುಡಿಯಬೇಕೆನಿಸುವುದು.
ತಾಳೆಹಣ್ಣಿನಲ್ಲಿರುವ ಪ್ರಯೋಜನಗಳು
ತಾಳೆಹಣ್ಣಿನಲ್ಲಿರುವ ಪೋಷಕಾಂಶಗಳು
ಇದರಲ್ಲಿ ಶೇ. 95ರಷ್ಟು ನೀರಿನಂಶವಿದೆ.
ಅಲ್ಲದೆ ಇದರಲ್ಲಿ ಪೊಟಾಷ್ಯಿಯಂ, ಖನಿಜಾಂಶ. ಎಲೆಕ್ಟ್ರೋಲೈಟ್ಸ್, ಮೆಗ್ನಿಷ್ಯಿಯಂ
ಅಧಿಕವಿದೆ, ಅಲ್ಲದೆ ಬೇಸಿಗೆಯಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಂಬಾನೇ
ಸಹಕಾರಿ.
ದೇಹವನ್ನು ಬೇಗನೆ ತಂಪಾಗಿಸುತ್ತದೆ
ಇದನ್ನು ತಿನ್ನುವುದರಿಂದ ದೇಹದಲ್ಲಿ ಉಷ್ಣಾಂಶ ಬೇಗನೆ ಕಡಿಮೆಯಾಗುವುದು, ಆದ್ದರಿಂದ
ಈ ಉರಿ ಬಿಸಿಲು ಸಮಯಲ್ಲಿ ದೇಹ ರಕ್ಷಣೆ ಮಾಡಲು ಸಹಕಾರಿ. ಮಕ್ಕಳಿಗೆ , ದೊಡ್ಡವರಿಗೆ
ಇದು ತುಂಬಾನೇ ಒಳ್ಳೆಯದು. ಅದರಲ್ಲೂ ಈಗ ಹೀಟ್‌ವೇವ್, ಹಾಗಾಗಿ ದೇಹ ತಂಪಾಗಿಸುವ
ಇಂಥ ಹಣ್ಣುಗಳನ್ನು ಸೇವಿಸಿ.
ಆಯುರ್ವೇದದ ಪ್ರಯೋಜನಗಳು
ಇದನ್ನು ಆಯುರ್ವೇದದಲ್ಲಿ ಕೂಡ ಬಳಸಲಾಗುವುದು. ಪಿತ್ತ ದೋಷ ತಡೆಗಟ್ಟಲು ಸಹಕಾರಿ.
ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಅಸಿಡಿಟಿ, ತ್ವಚೆಯಲ್ಲಿ ಗುಳ್ಳೆಗಳು ಕಂಡು
ಬರುವುದು, ಹೀಟ್ ಸ್ಟ್ರೋಕ್ ಸಮಸ್ಯೆ ಕಂಡು ಬರುವುದು. ಈ ಬಗೆಯ ಸಮಸ್ಯೆ
ತಡೆಗಟ್ಟಲು ಈ ತಾಳೆಹಣ್ಣು ತುಂಬಾ ಸಹಕಾರಿಯಾಗಿದೆ.
ನಿರ್ಜಲೀಕರಣ ತಡೆಗಟ್ಟುತ್ತದೆ
ಇದನ್ನು ತಿನ್ನುವುದರಿಂದ ದೇಹದಲ್ಲಿ ನಿರ್ಜಲೀಕರಣ ಕಡಿಮೆಯಾಗುವುದು. ಆದ್ದರಿಂದ
ಬೇಸಿಗೆಯಲ್ಲಿ ಈ ತಾಳೆಹಣ್ಣಿನ ಜ್ಯೂಸ್ ಕುಡಿದರೆ ಒಳ್ಳೆಯದು.
ಅಲ್ಲದೆ ಫೇಮಸ್ ಸೆಲೆಬ್ರಿಟಿ ನ್ಯೂಟ್ರಿಷ್ಟಿಯನಿಸ್ಟ್ ರುಜುತಾ
ದ್ವಿವೇಕರ್ ತಾಳೆಹಣ್ಣಿನ ಪ್ರಯೋಜನಗಳ ಬಗ್ಗೆ ಹೀಗೆ ಹೇಳಿದ್ದಾರೆ:
ಈ ಬಗೆಯ ಸಮಸ್ಯೆಗಳಿಗೆ ತುಂಬಾ ಒಳ್ಳೆಯದು
ಬೆಳಗ್ಗೆ ಎದ್ದಾಗ ಹೊಟ್ಟೆ ಉಬ್ಬುವುದಾದರೆ
ಆಗಾಗ ತಲೆನೋವು ಉಂಟಾಗುತ್ತಿದ್ದರೆ
ಮಲಬದ್ಧತೆ ಸಮಸ್ಯೆ
ಸ್ಕಿನ್ ಟ್ಯಾನ್ ಸಮಸ್ಯೆಯಿದ್ದರೆ, ತ್ವಚೆಯಲ್ಲಿ ಕಪ್ಪು ಚುಕ್ಕಿ ಬೀಳುವುದನ್ನು
ತಡೆಗಟ್ಟಲು ಸಹಕಾರಿ.
ಈ ಬಗೆಯ ಸಮಸ್ಯೆಗಳಿಗೆ ತಾಳೆಹಣ್ಣು ತುಂಬಾ ಒಳ್ಳೆಯದು.
ಬೆಳಗ್ಗೆ ಎದ್ದಾಗ ಹೊಟ್ಟೆ ಉಬ್ಬಿದಂತೆ ಅನಿಸಿದರೆ ನಿಮ್ಮ ಆಹಾರಕ್ರಮದಲ್ಲಿ
ತಾಳೆಹಣ್ಣು ಸೇರಿಸಿದರೆ ಒಳ್ಳೆಯದು
ಆಗಾತ ತಲೆನೋವು ಉಂಟಾಗುತ್ತಿದ್ದರೆ ಈ ತಾಳೆ ಹಣ್ಣು ವಾರದಲ್ಲಿ 3-4 ಬಾರಿ ಸೇವಿಸಿ,
ಇದರಿಂದ ತಲೆನೋವಿನ ಸಮಸ್ಯೆ ಕಡಿಮೆಯಾಗುವುದು,
ಹೊಟ್ಟೆ ತುಂಬಾ ಕ್ಲೀನ್ ಆಗುತ್ತೆ, ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು.
ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಮಕ್ಕಳಿಗೂ ಇದನ್ನು ಕೊಡಿಸಿ, ಅವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕೊನೆಯದಾಗಿ: ಬೇಸಿಗೆಯಲ್ಲಿ ಆಹಾರ ಕಾಪಾಡಿಕೊಳ್ಳಬೇಕೆಂದರೆ ಆಹಾರಕ್ರಮದ ಕಡೆಗೆ ಗಮನಹರಿಸಬೇಕು. ಆದ್ದರಿಂದ ನೀವು ದೇಹ ತಂಪಾಗಿಸುವ ಆಹಾರದ ಕಡೆಗೆ ಗಮನ ಹರಿಸಿ. ಈ ತಾಳೆಹಣ್ಣು ದುಬಾರಿಯೇನಲ್ಲ, ಎಳನೀರಿನ ಬೆಲೆಯಲ್ಲಿಯೇ ಇದು ಸಿಗುವುದರಿಂದ ಇದನ್ನು ಪ್ರತಿದಿನ ಸೇವಿಸಿದರೂ ಒಳ್ಳೆಯದು.



Click it and Unblock the Notifications
