Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಧು ಪುಷ್ಪ:ಹಬ್ಬದ ಸಡಗರ ಹೆಚ್ಚಿಸಲು ಹೊಸ ಸಿಹಿತಿನಿಸು
ಬೇಕಾಗುವ ಪದಾರ್ಥಗಳು :
ಮೈದಾ ಹಿಟ್ಟು : 300 ಗ್ರಾಂ
ಉಪ್ಪು : ಒಂದು ಚಿಟಿಕೆ
ಬಿಸಿ ಹಾಲು : 1 ಕಪ್ಪು
ಸಕ್ಕರೆ : ಮುಕ್ಕಾಲು ಕಪ್ಪು
ತುಪ್ಪ : 2 ಟೇಬಲ್ ಚಮಚ
ಏಲಕ್ಕಿ : 1 ಟೇಬಲ್ ಚಮಚ
ವೆನಿಲಾ : ಒಂದೆರಡು ಹನಿ
ಹುರಿಯಲು ತುಪ್ಪ ಅಥವಾ ಎಣ್ಣೆ
ಮಾಡುವ ವಿಧಾನ :
ಮೈದಾ ಹಿಟ್ಟಿಗೆ ಚಿಟಿಕೆ ಉಪ್ಪನ್ನು ಬೆರಸಿ ಜರಡಿ ಹಿಡಿಯಬೇಕು. ಈಗ ಅದಕ್ಕೆ ತುಪ್ಪವನ್ನು ಬೆರಸಿ. ಹಾಲಿಗೆ ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಕೊಂಚ ಕೊಂಚವಾಗಿ ಮೈದಾಗೆ ಹಾಲನ್ನು ಬೆರಸುತ್ತಾ ಮೈದಾ ಹಿಟ್ಟನ್ನು ಚೆನ್ನಾಗಿ ನಾದ ಬೇಕು. ಹತ್ತು ನಿಮಿಷಗಳ ಕಾಲ ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿಡಿ. ಆನಂತರ ಹಿಟ್ಟನ್ನು ಸಣ್ಣ ಗೋಲಿ ಗಾತ್ರದಿಂದ ಹಿಡಿದು ನಿಂಬೆ ಹಣ್ಣು ಗಾತ್ರದ ಉಂಡೆಗಳವರೆಗೆ ವಿವಿಧ ಆಕಾರಗಳಲ್ಲಿ ಮಾಡಿಟ್ಟುಕೊಳ್ಳಿ. ಮೊದಲು ದೊಡ್ಡ ಉಂಡೆಗಳಿಂದ ಗುಂಡನೆಯ ಪೂರಿ ಮಾಡಿಕೊಳ್ಳಿ. ಅದರ ಮೇಲೆ ಸಣ್ಣ ಉಂಡೆಗಳಿಂದ ಮಾಡಿದ ಪೂರಿ ಇಡಬೇಕು. ಈ ಪದರಗಳ ಮಧ್ಯೆ ಸಿಹಿಯಾದ ಹಾಲನ್ನು ಸ್ವಲ್ಪ ಲೇಪಿಸಬೇಕು. ಹೀಗೆ ಎಲ್ಲಾ ಪೂರಿಗಳನ್ನು ಮಾಡಿದ ಬಳಿಕ ಪೂರಿಯ ಮಧ್ಯದಲ್ಲಿ ಹೆಬ್ಬೆರಳಿನಿಂದ ಸ್ವಲ್ಪ ಒತ್ತಿ. ಏಕೆಂದರೆ ಎಲ್ಲ ಪೂರಿಗಳೂ ಒಂದಕ್ಕೊಂದು ಅಂಟಿಕೊಳ್ಳುತ್ತವೆ. ವೃತ್ತಾಕಾರದಲ್ಲಿರುವ ಪೂರಿಯನ್ನು ನಕ್ಷತ್ರಾಕಾರಕ್ಕೆ ಕತ್ತರಿಸಿಕೊಳ್ಳಿ. ಇದಕ್ಕಾಗಿ ಸಣ್ಣ ಚಾಕುವನ್ನು ಬಳಸಬಹುದು. ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ನಕ್ಷತ್ರಾಕಾರಕ್ಕೆ ಕತ್ತರಿಸಿದ ಪೂರಿಗಳನ್ನು ಹೊಂಬಣ್ಣ ಬರುವವರೆಗೂ ಕಾಯಿಸಿ. ಈಗ ನಿಮ್ಮ ನೆಚ್ಚಿನ ಮಧುಪುಷ್ಪಗಳು ತಯಾರಾದಂತೆ.
(ದಟ್ಸ್‌ಕನ್ನಡ ಅಡುಗೆ)



Click it and Unblock the Notifications
