Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಬ್ಬಕ್ಕೆ ರುಚಿಕರವಾದ ಸಿಹಿ ಕಡುಬು ರೆಸಿಪಿ
ಹಬ್ಬದ ಸಮಯದಲ್ಲಿ ಸಿಹಿಕಡುಬು ಮಾಡುವುದು ಸಾಮಾನ್ಯ. ಹಬ್ಬದ ಸಮಯದಲ್ಲಿ ಒಬ್ಬಟ್ಟು ಮಾಡುವುದಾದರೆ ಹೂರಣವನ್ನು ಸ್ವಲ್ಪ ಜಾಸ್ತಿ ತಯಾರಿಸಿದರೆ ಸಾಕು, ಸಿಹಿ ಕಡುಬು ಸುಲಭವಾಗಿ ಮಾಡಬಹುದು. ಹಬ್ಬಕ್ಕೆ ಸಿಹಿ ಕಡುಬು ಮಾಡುವುದಾದರೆ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಹೂರಣ 1 ಕಪ್
(ಒಂದು ಕಪ್ ಕಡಲೆ ಬೇಳೆ ಬೇಯಿಸಿ, ಮತ್ತೊಂದು ಪಾತ್ರೆಯಲ್ಲಿ ಒಂದು ಕಪ್ ಬೆಲ್ಲವನ್ನು ನೀರು ಹಾಕದೆ ಕರಗಿಸಿ. ಕರಗಿದ ಬೆಲ್ಲದ ಪಾಕಕ್ಕೆ ಬೇಯಿಸಿದ ಕಡಲೆಬೇಳೆಯನ್ನು ಹಾಕಿ ಮಿಶ್ರಮಾಡಿ. ಮಿಶ್ರಣ ತುಂಬಾ ಗಟ್ಟಿಯಾಗಿರಲಿ, ನೀರಾದರೆ ಈ ಮಿಶ್ರಣವನ್ನು ಸ್ವಲ್ಪ ಕುದಿಸಿ, ಕುದಿಸಿದ ಮಿಶ್ರಣವನ್ನು ಆರಲು ಬಿಡಿ, ಆರಿದ ಮಿಶ್ರಣವನ್ನು ನುಣ್ಣಗೆ ರುಬ್ಬಿ. ಈ ರೀತಿ ಮಾಡಿದರೆ ಹೂರಣ ರೆಡಿ.)
* ಹೋಳಿಗೆ ಮಾಡಲು ತಯಾರಿಸುವ ರೀತಿಯಲ್ಲಿ ಮೈದಾ ಹಿಟ್ಟು ತಯಾರಿಸಿ.
* ಎಣ್ಣೆ
ತಯಾರಿಸುವ ವಿಧಾನ:
1. ಕಲೆಸಿದ ಮೈದಾಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ಮಾಡಿ ಅವುಗಳನ್ನು ಮೊಟ್ಟೆಯ ಆಕಾರದಲ್ಲಿ ಲಟ್ಟಿಸಬೇಕು. ಹೀಗೆ ಲಟ್ಟಿಸುವಾಗ ಹಿಟ್ಟು ಲಟ್ಟಣಿಗೆಗೆ ಅಂಟುತ್ತಿದ್ದರೆ ಸ್ವಲ್ಪ ಮೈದಾ ಪುಡಿಯನ್ನು ಉದುರಿಸಿ, ನಂತರ ತಟ್ಟಿ.
2. ಹೀಗೆ ಲಟ್ಟಿಸಿರುವ ಮಧ್ಯಭಾಗದಲ್ಲಿ ಸ್ವಲ್ಪ ಹೂರಣವನ್ನು ಹಾಕಿ ನಂತರ ತುದಿಯನ್ನು ಹಾಲಿನಿಂದ ಸವರಿ ಮಡಚಿ. ಈ ರೀತಿ ಕಡುಬು ಮಾಡಿಟ್ಟುಕೊಳ್ಳಬೇಕು.
3. ಎಣ್ಣೆಯನ್ನು ಕಾಯಿಸಿ ಮಾಡಿಟ್ಟ ಕಡುಬನ್ನು ಒಂದೊಂದು ಆಗಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಈ ರೀತಿ ಮಾಡಿದರೆ ರುಚಿಯಾದ ಸಿಹಿ ಕಡುಬು ತುಪ್ಪ ಜೊತೆ ತಿನ್ನಲು ರೆಡಿ.
ಸೂಚನೆ: ಇದನ್ನು ಮಾಮೂಲಿ ಕಡುಬು ಮಾಡುವ ರೀತಿಯಲ್ಲಿ ಕೂಡ ಬೇಯಿಸಬಹುದು.



Click it and Unblock the Notifications
