Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತಕ್ಷಣ ಸಿಹಿ ಅಡುಗೆ ಮಾಡಬೇಕೆ? ಈ ಹಲ್ವಾ ಮಾಡಿ
ಹಲ್ವಾ ನೋಡಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಹೆಚ್ಚಿನವರು ಮನೆಯಲ್ಲಿ ಹಲ್ವಾ ಮಾಡುವುದು ಅಂದರೆ ಕ್ಯಾರೆಟ್ ಹಲ್ವಾ ಮಾಡಲು ಇಷ್ಟಪಡುತ್ತಾರೆ. ಏಕೆಂದರೆ ಕ್ಯಾರೆಟ್ ಹಲ್ವಾ ಮಾಡುವುದು ಬಲು ಸುಲಭ. ಇದರಷ್ಟೇ ಸುಲಭವಾದ, ತಯಾರಿಸಲು ರುಚಿಕರವಾದ ಇನ್ನು ಅನೇಕ ಬಗೆಯ ಹಲ್ವಾಗಳಿವೆ ಅದರಲ್ಲೊಂದು ರವೆ ಬಾಳೆ ಹಣ್ಣಿನ ಹಲ್ವಾ. ಈ ಹಲ್ವಾ ತಯಾರಿಸುವ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
* 1 ಕಪ್ ರವೆ
* 3/4 ಕಪ್ ಸಕ್ಕರೆ
* 1/2 ಕಪ್ ತುಪ್ಪ
* 1 ಕಪ್ ಹಾಲು
* ಒಂದೂವರೆ ಕಪ್ ನೀರು
* 2 ಬಾಳೆ ಹಣ್ಣು
* ಗೋಡಂಬಿ, ಒಣದ್ರಾಕ್ಷಿ 1/2 ಕಪ್
ತಯಾರಿಸುವ ವಿಧಾನ:
* ಒಂದು ಪಾತ್ರೆಯಲ್ಲಿ ನೀರು ಮತ್ತು ಹಾಲನ್ನು ಮಿಶ್ರ ಮಾಡಿ ಕಾಯಿಸಬೇಕು.
* ಮತ್ತೊಂದು ಬಾಣಲೆಯಲ್ಲಿ ರವೆಯನ್ನು ಹುರಿಯಬೇಕು. ಹೀಗೆ ಉರಿಯುವಾಗ ಸ್ವಲ್ಪ ತುಪ್ಪ ( 2 ಚಮಚ) ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ರವೆಗೆ ಸಕ್ಕರೆ ಹಾಕಿ ಮಿಶ್ರ ಮಾಡಿ ರವೆಯನ್ನು ಕುದಿಯುತ್ತಿರುವ ಹಾಲಿಗೆ ಹಾಕಿ ಸೌಟ್ ನಿಂದ ಆಗಾಗ ತಿರುಗಿಸುತ್ತಾ ಇರಬೇಕು.
* ರವೆ ಹಾಲನ್ನು ಹೀರಿಕೊಂಡು ಬೇಯುವವರೆಗೆ ಆಗಾಗ ತಿರುಗಿಸುತ್ತಾ ಇರಬೇಕು. ನಂತರ ಬಾಳೆಹಣ್ಣನ್ನು ಹಿಸುಕಿ ಹಾಕಿ, ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ತಿರುಗಿಸಬೇಕು. ಈ ಅಡುಗೆ ಪಾತ್ರೆಯಲ್ಲಿ ತಳ ಹಿಡಿಯಲು ಬಿಡಬಾರದು.
* ರವೆ ಬೆಂದ ಮೇಲೆ ಅದನ್ನು ಉರಿಯಿಂದ ತೆಗೆದು ಬದಿಯಲ್ಲಿಡಬೇಕು.
* ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ತಯಾರಾದ ರವೆ ಬಾಳೆ ಹಣ್ಣು ಹಲ್ವಾಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಿದರೆ ಸ್ವಾದಿಷ್ಟಕರವಾದ ರವೆ ಬಾಳೆ ಹಣ್ಣಿನ ಹಲ್ವಾ ರೆಡಿ.
ಇದನ್ನು ಬಿಸಿಯಾಗಿರುವಾಗಲೇ ತಿಂದರೆ ಚೆನ್ನ.



Click it and Unblock the Notifications
