ಜನ್ಮಾಷ್ಟಮಿ ವಿಶೇಷ ಸಿಹಿ: ಘಮ ಘಮ ಮಲೈ ಲಾಡು

ಕೆನೆಯನ್ನು ಬಳಸಿ ತಯಾರಿಸಿದ ಲಾಡು ಹೆಚ್ಚಿನ ಭಾರತೀಯ ಹಬ್ಬಗಳಲ್ಲಿ ಪ್ರಮುಖವಾಗಿರುತ್ತದೆ. ಉತ್ತರದಲ್ಲಿ ಇದನ್ನು ಪ್ರಧಾನ ಸಿಹಿಯನ್ನಾಗಿ ಉತ್ತರ ಭಾರತೀಯರು ಪ್ರತೀ ಹಬ್ಬಗಳಲ್ಲೂ ತಯಾರಿಸುತ್ತಾರೆ. ಆದರೆ ದಕ್ಷಿಣದಲ್ಲೂ ಇಂತಹ ಸಿಹಿ ಖಾದ್ಯಗಳನ್ನು ಮಾಡುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಹಾಲನ್ನು ಚೆನ್ನಾಗಿ ಕುದಿಸಿ ಮೇಲ್ಪದರದಲ್ಲಿ ಸಂಗ್ರಹವಾಗುವ ಹಳದಿ ಬಣ್ಣದ ಕೆನೆಯಿಂದ ಈ ಲಾಡನ್ನು ಸಿದ್ಧಪಡಿಸಲಾಗುತ್ತದೆ.

ಇನ್ನೇನು ಜನ್ಮಾಷ್ಟಮಿ ಬಂದೇ ಬಿಟ್ಟಿದೆ. ಮನೆಗೆ ಬರುವ ಅತಿಥಿಗಳನ್ನು ಸಂತೃಪ್ತಿಪಡಿಸಲು ಮತ್ತು ಹಬ್ಬದ ವಾತಾವರಣವನ್ನು ಇನ್ನಷ್ಟು ಸಿಹಿಗೊಳಿಸಲು ಸಿಹಿಯ ತಯಾರಿಯನ್ನು ನೀವು ಮಾಡಲೇಬೇಕು. ಆದ್ದರಿಂದಲೇ ಇಂದಿನ ಲೇಖನದಲ್ಲಿ ನಾವು ನೀಡಿರುವಂತಹ ಕೆನೆ ಲಾಡು ನಿಮಗೆ ಇಷ್ಟವಾಗುವುದು ಖಂಡಿತ. ಇಲ್ಲಿರುವ ತಯಾರಿ ವಿಧಾನವನ್ನು ಒಮ್ಮೆ ಚೆನ್ನಾಗಿ ಮನನ ಮಾಡಿಕೊಳ್ಳಿ. ನಂತರ ಲಾಡನ್ನು ತಯಾರಿಸಿ. ಖಂಡಿತ ಇದು ನಿಮ್ಮ ಹಬ್ಬದ ಕಳೆಯನ್ನು ದುಪ್ಪಟ್ಟುಗೊಳಿಸುತ್ತದೆ.

ಸರಳವಾಗಿ ತಯಾರಿಸಬಹುದಾದ ಕೆನೆ ಅಥವಾ ಮಲೈ ಲಾಡು ಅಮೂಲಾಗ್ರ ರುಚಿಯನ್ನು ನೀಡುತ್ತದೆ ಮತ್ತು ತಿಂದಷ್ಟೂ ನಿಮ್ಮ ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ಹಾಗಿದ್ದರೆ ತಡ ಮಾಡದೇ ನಾವಿಲ್ಲಿ ನೀಡಿರುವ ಖಾದ್ಯ ವಿಧಾನವನ್ನು ಅರಿತುಕೊಂಡು ಮಲೈ ಲಾಡನ್ನು ಸಿದ್ಧಪಡಿಸಿ.

Janmashtami Special: Malai Ladoo

ಕೃಷ್ಣ ಜನ್ಮಾಷ್ಟಮಿಗೆ 5 ಸ್ವೀಟ್ ರೆಸಿಪಿ

ಪ್ರಮಾಣ: 5
ಸಿದ್ಧತಾ ಸಮಯ: 5 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ಪನೀರ್ - 400 ಗ್ರಾಮ್ಸ್
*ಕೆನೆ - 1 ಕಪ್ (ಮನೆಯ ಹಾಲಿನಿಂದ ತೆಗೆದಿರುವಂಥದ್ದು)
*ಪೌಡರ್ ಸಕ್ಕರೆ - 1 ಕಪ್
*ಗೋಡಂಬಿ - 2 ಚಮಚ
*ಪಿಸ್ತಾ - 1 ಚಮಚ
*ಹಸಿರು ಏಲಕ್ಕಿ - 4 ತುಂಡುಗಳು
*ಕೇಸರಿ - 25 - 30 ಎಳೆಗಳು
*ಹಳದಿ ಪೌಡರ್

ಕೃಷ್ಣ ಜನ್ಮಾಷ್ಟಮಿಗೆ 6 ರೀತಿಯ ಸಿಹಿತಿಂಡಿ

ಮಾಡುವ ವಿಧಾನ
1. ಕೆನೆಯನ್ನು ಪಾತ್ರೆಗೆ ಹಾಕಿ ಅದನ್ನು ಬಿಸಿ ಮಾಡಲು ಆರಂಭಿಸಿ. ಇದು ದಪ್ಪಗಾಗುವರೆಗೆ 5-6 ನಿಮಿಷಗಳ ಕಾಲ ಇದನ್ನು ಬಿಸಿ ಮಾಡಿ.
2. ಖೋವಾ ಮತ್ತು ಪನೀರ್ ಅನ್ನು ಬಳಸಿ ಲಾಡನ್ನು ಹೇಗೆ ತಯಾರಿಸುತ್ತಾರೋ ಅದೇ ರೀತಿ ಕೆನೆ ಮತ್ತು ಪನೀರ್ ಅನ್ನು ಇಲ್ಲಿ ಬಳಸಲಾಗುತ್ತದೆ.
3. ಕೆನೆಯ ಬದಲು ನೀವು ಖೋವಾವನ್ನು ಬಳಸುತ್ತೀರಿ ಎಂದಾದಲ್ಲಿ, ಇಷ್ಟೇ ಪ್ರಮಾಣದ (200 ಗ್ರಾಮ್‌ಗಳು) ಖೋವಾವನ್ನು ನೀವು ಬಳಸಬೇಕಾಗುತ್ತದೆ. ಇದಲ್ಲದೆ ಕಂಡೆನ್ಸ್‌ಡ್ ಮಿಲ್ಕ್ (ಮಂದಗೊಳಿಸಿದ ಹಾಲು) ಅನ್ನು ಕೂಡ ಖೋವಾ ಮತ್ತು ಕೆನೆಯ ಬದಲಿಗೆ ಬಳಸಬಹುದು. ನೀವು ಈ ಹಾಲನ್ನು ಬಳಸುತ್ತೀರಿ ಎಂದಾದಲ್ಲಿ ಇದರ ಪ್ರಮಾಣ 400 ಗ್ರಾಮ್‌ಗಳಾಗಿರಬೇಕು.
4.ಖೋವಾ ಬಳಸುತ್ತೀರಿ ಎಂದಾದಲ್ಲಿ, ಖೋವಾವನ್ನು ಸೇರಿಸುವ ಮೊದಲು 1 ಚಮಚ ತುಪ್ಪವನ್ನು ಹಾಕಿ. ಇದನ್ನು 3-4 ನಿಮಿಷಗಳ ಕಾಲ ಬಿಸಿ ಮಾಡಿ.
5. ಹುಡಿ ಮಾಡಿದ ಪನೀರ್ ಅನ್ನು ಈ ಮಿಶ್ರಣಕ್ಕೆ ಸೇರಿಸಿ.
6. ಇದನ್ನು ಮಧ್ಯಮ ಉರಿಯಲ್ಲಿ ಇರಿಸಿ ಚೆನ್ನಾಗಿ ಕಲಸುತ್ತಿರಿ. ಇದು ದಪ್ಪಗಾಗುವರೆಗೂ 6 ನಿಮಿಷಗಳ ಕಾಲ ಕಲಸಿ.
7. ಗೋಡಂಬಿ, ಪಿಸ್ತಾವನ್ನು ಕತ್ತರಿಸಿ ಮತ್ತು ಏಲಕ್ಕಿಯನ್ನು ಹುಡಿ ಮಾಡಿ.
8. ಮಂದಗೊಳಿಸಿದ ಕೆನೆಯನ್ನು ಕೇಸರಿಗೆ ಹಾಕಿ ಮತ್ತು ಇದನ್ನು ಮುಖ್ಯ ಮಿಶ್ರಣಕ್ಕೆ ಸೇರಿಸಿ.
9. ಕೇಸರಿ ಮಿಶ್ರಣವನ್ನು ಸೇರಿಸಿದ ನಂತರ ಇನ್ನಷ್ಟು ಸಮಯ ಇದನ್ನು ಹುರಿದುಕೊಳ್ಳಿ.
10. ಈ ಮಿಶ್ರಣಕ್ಕೆ ಸ್ವಲ್ಪ ಹಳದಿ ಬಣ್ಣವನ್ನು ಹಾಕಿ.
11. ಮಿಶ್ರಣದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವವರೆಗೆ ಹಳದಿ ಮತ್ತು ಕೇಸರಿಯನ್ನು ಬೇಯಿಸಿಕೊಳ್ಳಿ.
12. ಇದು ಪೂರ್ಣವಾಗಿ ಆದ ನಂತರ ಇದನ್ನು ತಟ್ಟೆಗೆ ಹಾಕಿ ಮತ್ತು ತಣಿಯಲು ಬಿಡಿ.
13. ಇನ್ನು ಇದಕ್ಕೆ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
14. ಇದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಕತ್ತರಿಸಿದ ಗೋಡಂಬಿಯನ್ನು ಹಾಕಿ.
15. ಚೆನ್ನಾಗಿ ಮಿಶ್ರ ಮಾಡಿ ಲಾಡುಗಳನ್ನು ತಯಾರಿಸಿಕೊಳ್ಳಿ.
16. ನಂತರ ಕತ್ತರಿಸಿದ ಪಿಸ್ತಾವನ್ನು ಬಳಸಿ ಲಾಡುಗಳನ್ನು ಅಲಂಕರಿಸಿಕೊಳ್ಳಿ.

ಜನ್ಮಾಷ್ಟಮಿಯ ಕಳೆಯನ್ನು ರಂಗನ್ನು ಆಹ್ಲಾದಗೊಳಿಸುವ ಘಮಲುಳ್ಳ ಮಲೈ ಲಾಡು ಸಿದ್ಧವಾಗಿದೆ. ಶ್ರೀಕೃಷ್ಣನಿಗೆ ನೈವೇದ್ಯವನ್ನಾಗಿ ಈ ಲಾಡನ್ನು ಅರ್ಪಿಸಿ ನಂತರ ಪ್ರಸಾದ ರೂಪದಲ್ಲಿ ಸೇವಿಸಿ ಬಾಲ ಕೃಷ್ಣನ ಕೃಪೆಗೆ ಪಾತ್ರರಾಗಿ.

X
Desktop Bottom Promotion