Latest Updates
-
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ!
ವ್ಯಾಲಂಟೇನ್ ದಿನಕ್ಕಾಗಿ ಬಾದಾಮಿ ಚಾಕಲೇಟ್ ರೆಸಿಪಿ
ವ್ಯಾಲಂಟೇನ್ ದಿನದಲ್ಲಿ ಚಾಕಲೇಟ್ ದಿನ ಕೂಡ ಸೇರಿಕೊಂಡಿದೆ. ಬೆಲೆಬಳುವ ಅಷ್ಟೊಂದುರ ರುಚಿಯಿಲ್ಲದ ಚಾಕಲೇಟ್ ಅನ್ನು ಖರೀದಿಸುವುದಕ್ಕಿಂತ ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಚಾಕಲೇಟ್ ಅನ್ನು ಈ ವ್ಯಾಲಂಟೇನ್ ದಿನಕ್ಕಾಗಿ ತಯಾರಿಸಿ.
ಮನೆಯಲ್ಲೇ ಸಿದ್ಧಪಡಿಸಿದ ಚಾಕಲೇಟ್‌ಗಳು ರುಚಿಯಾಗಿದ್ದು ಆರೋಗ್ಯಕರವಾಗಿರುತ್ತವೆ. ಚಾಕಲೇಟ್‌ಗಳನ್ನು ಮನೆಯಲ್ಲೇ ತಯಾರಿಸುವುದೂ ಸಹ ಎಲ್ಲರ ಮನ ಗೆಲ್ಲುವಂತೆ ಮಾಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿ ರುಚಿಯಾದ ಎಗ್ ರೋಲ್ ರೆಸಿಪಿ

ತ್ವರಿತವಾಗಿ ತಯಾರಿಸಬಹುದಾದ ಚಾಕಲೇಟ್‌ನಿಂದ ಈ ವ್ಯಾಲಂಟೇನ್ ದಿನವನ್ನು ಆಚರಿಸಿ. ಇಂದು ನಾವು ತಯಾರಿಸುವಂತಹ ಚಾಕಲೇಟ್ ಬಾದಾಮಿ ಚಾಕಲೇಟ್ ಆಗಿದ್ದು ಈ ರುಚಿಯಾದ ಚಾಕಲೇಟ್ ತಯಾರಿಸಲು ನಿಮಗೆ ಬೇಕಾಗಿರುವ ಸಾಮಾಗ್ರಿಗಳೆಂದರೆ ಕೋಕಾ ಪೌಡರ್, ಕೆಲವು ನಟ್ಸ್ ಅಂದರೆ ಬಾದಾಮಿ ಮತ್ತು ಸಕ್ಕರೆ. ತಯಾರಿ ವಿಧಾನವನ್ನು ಅರಿತುಕೊಳ್ಳಿ.
ಪ್ರಮಾಣ: 15-20 ಚಾಕಲೇಟ್‌ಗಳು
ಸಿದ್ಧತಾ ಸಮಯ: 15-20 ನಿಮಿಷಗಳು
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಡಾರ್ಕ್ ಚಾಕಲೇಟ್ ನಲ್ಲಿರುವ ಗುಣಗಳು
ಸಾಮಾಗ್ರಿಗಳು:
.ಕೋಕಾ ಪೌಡರ್ - 2ಟೇಸ್ಪೂನ್
.ಬೆಣ್ಣೆ - 50ಗ್ರಾಂ (ತಾಪಮಾನಕ್ಕೆ ಅನುಗುಣವಾಗಿ)
.ಸಕ್ಕರೆ - ರುಚಿಗೆ ತಕ್ಕಷ್ಟು (1 ಕಪ್)
.ಮಿಲ್ಕ್ ಪೌಡರ್ ಅಥವಾ ಡೈರಿ ವೈಟ್ನರ್ - 1ಕಪ್
.ನೀರು - 3/4 ಕಪ್
.ಚಾಕಲೇಟ್ ಮೌಲ್ಡ್‌ಗಳು - 10 ರಿಂದ 15 (ಹೃದಯಾದಾಕಾರದ್ದು)
.ಬಾದಾಮಿ - ಮುಷ್ಟಿಯಷ್ಟು (ತುಂಡರಿಸಿದ್ದು)
.ವೆನಿಲ್ಲಾ ಎಸೆನ್ಸ್ - 2 ಡ್ರಾಪ್ಸ್ (ಆಯ್ಕೆಗೆ ಬಿಟ್ಟದ್ದು)
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕ್ಲಿಯರ್ ತ್ವಚೆಗಾಗಿ 5 ಚಾಕಲೇಟ್ ಫೇಶಿಯಲ್ ರೆಸಿಪಿ
ಮಾಡುವ ವಿಧಾನ:
*ನೀರು ಮತ್ತು ಸಕ್ಕರೆಯನ್ನು ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ.
*ಸಕ್ಕರೆ ಪಾಕ ಸಿದ್ಧವಾದೊಡನೆ ಪ್ಯಾನ್ ಅನ್ನು ಉರಿಯಿಂದ ಕೆಳಗಿಳಿಸಿ ನಂತರ ಅದಕ್ಕೆ ಮಿಲ್ಕ್ ಪೌಡರ್ ಸೇರಿಸಿ.
*ಚೆನ್ನಾಗಿ ಮಿಶ್ರಗೊಳ್ಳುವವರೆಗೆ ಕಲಸುತ್ತಿರಿ ಸಕ್ಕರೆ ಪಾಕ ಬಿಸಿಯಾಗಿರುವಾಗಲೇ ಮಿಲ್ಕ್ ಪೌಡರ್ ಅನ್ನು ಪ್ಯಾನ್‌ಗೆ ಹಾಕಿ.
*ಕೋಕಾ ಪೌಡರ್ ಅನ್ನು ಮಿಶ್ರಣಕ್ಕೆ ಸೇರಿಸಿ ಮತ್ತು ಬೆಣ್ಣೆ ಹಾಕಿ.
*ಸುಗಂಧಕ್ಕಾಗಿ ವೆನಿಲ್ಲಾ ಎಸೆನ್ಸ್ ಹಾಕಿ. ಎಲೆಕ್ಟ್ರೋನಿಕ್ ಬ್ಲೆಂಡರ್ ಬಳಸಿ ನಿಮ್ಮ ಚಾಕಲೇಟ್ ಮಿಶ್ರಣವನ್ನು ನಿಮಗೆ ಗಟ್ಟಿಗೊಳಿಸಬಹುದು.
*ಬಾದಾಮಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
*ಚಾಕಲೇಟ್ ಮೌಲ್ಡ್‌ಗಳಿಗೆ ಈ ಮಿಶ್ರಣವನ್ನು ಸುರಿಯಿರಿ ಮತ್ತು 45 ನಿಮಿಷಗಳಷ್ಟು ಕಾಲ ಫ್ರೀಜ್ ಮಾಡಿ.
ಮನೆಯಲ್ಲೇ ತಯಾರಿಸಿದ ಬಾದಾಮಿ ಚಾಕಲೇಟ್ ಸವಿಯಲು ಸಿದ್ಧವಾಗಿದೆ. ಬಣ್ಣದ ಕಾಗದಗಳಲ್ಲಿ ಚಾಕಲೇಟ್ ಕವರ್ ಮಾಡಿ ನಿಮ್ಮ ಸಂಗಾತಿಗೆ ಉಡುಗೊರೆ ನೀಡಿ.



Click it and Unblock the Notifications