Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೋಕಾ ಬರ್ಫಿ-ತುಂಬಾ ಸರಳವಾದ ರೆಸಿಪಿ
ಕೋಕಾ ಬರ್ಫಿ ತಯಾರಿಸಬೇಕೆಂದು ಬಯಸುವುದಾದರೆ ಇಲ್ಲಿದೆ ನೋಡಿ ನೋಡಿ ಕೋಕಾ ಬರ್ಫಿ ರೆಸಿಪಿ.
ಚಾಕಲೇಟ್ ನಷ್ಟೇ ರುಚಿಕರವಾಗಿರುವ ಈ ಬರ್ಫಿಯನ್ನು ಮಾಡಲು ಹೆಚ್ಚಿನ ಶ್ರಮ ಪಡಬೇಕಾಗಿಲ್ಲ, ಇದನ್ನು ಮಾಡಲು ಬೇಕಾಗುವ ಪದಾರ್ಥಗಳು ಇದ್ದರೆ ಸಾಕು, ನಿರಾಯಾಸವಾಗಿ ಬರ್ಫಿ ರೆಡಿಯಾಗುವುದು. ಅಡುಗೆಯ ಎಬಿಸಿಡಿ ಗೊತ್ತಿಲ್ಲ ಅನ್ನುವವರು ಕೂಡ ಇದನ್ನು ಮಾಡಬಹುದು, ಅಷ್ಟೊಂದು ಸರಳವಾಗಿದೆ ಇದರ ರೆಸಿಪಿ.
ಬನ್ನಿ ಇದನ್ನು ಮಾಡುವ ವಿಧಾನದತ್ತ ಕಣ್ಣಾಡಿಸೋಣ:

ಬೇಕಾಗುವ ಸಾಮಾಗ್ರಿಗಳು
ಮೈದಾ 1 ಕಪ್
ಕೋಕಾ ಪುಡಿ ಅರ್ಧ ಕಪ್
ಹಾಲು
ಬಾದಾಮಿ 5-6
ಸಕ್ಕರೆ ಒಂದೂವರೆ ಕಪ್
ತುಪ್ಪ ಅರ್ಧ ಕಪ್
ತಯಾರಿಸುವ ವಿಧಾನ:
* ತಳ ಸ್ವಲ್ಪ ಅಗಲವಿರುವ ಪಾತ್ರೆಯನ್ನು ಬಿಸಿ ಮಾಡಿ, ತುಪ್ಪ ಹಾಕಿ ಕಾಯಿಸಿ.
* ಈಗ ಕಾದ ತುಪ್ಪಕ್ಕೆ ಮೈದಾ ಹಾಕಿ ಕಡಿಮೆ ಉರಿಯಲ್ಲಿ ಮೈದಾ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಮೈದಾ ಕಂದು ಬಣ್ಣಕ್ಕೆ ಬಂದು ಸುವಾಸನೆ ಬೀರಲು ಪ್ರಾರಂಭಿಸಿದಾಗ ಅದನ್ನು ಒಂದು ಪ್ಲೇಟ್ ಗೆ ಸುರಿದು ತಣ್ಣಗಾಗಲು ಇಡಿ.
* ನಂತರ ಅದೇ ಪಾತ್ರೆಗೆ ಅರ್ಧ ಲೀಟರ್ ಹಾಲು ಹಾಕಿ ಕಾಯಿಸಿ, ನಂತರ ಸಕ್ಕರೆ ಹಾಕಿ ಸಕ್ಕರೆ ಕರಗುವವರೆಗೆ ಸೌಟ್ ನಿಂದ ತಿರುಗಿಸಿ. ಹಾಲು ಸ್ವಲ್ಪ ಮಂದವಾಗುವವರೆಗೆ ಕಾಯಿಸಿ, ನಂತರ ಫ್ರೈ ಮಾಡಿದ ಮೈದಾ ಹಾಕಿ, ಕೋಕಾ ಪುಡಿ ಹಾಕಿ (ಕೋಕಾ ಪುಡಿ ಹಾಕುವಾಗ ಸೌಟ್ ನಿಂದ ತಿರುಗಿಸಿ, ಇಲ್ಲದಿದ್ದರೆ ಮೈದಾ ಹಿಟ್ಟು ಮತ್ತು ಪುಡಿ, ಗಂಟು ಗಂಟಾಗುವುದು).
* ಕೋಕಾ ಪುಡಿ ಹಾಕಿದ ಬಳಿಕ 5 ನಿಮಿಷ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಿ, ನಂತರ ಈ ದ್ರವವನ್ನು ಒಂದು ಪ್ಲೇಟ್ ಗೆ ಸ್ವಲ್ಪ ತುಪ್ಪ ಸವರಿ ಅದರಲ್ಲಿ ಸುರಿದು, ಗೋಡಂಬಿಯನ್ನು ಪುಡಿ ಮಾಡಿ ಉದುರಿಸಿ, ತಣ್ಣಗಾಗಲು ಬಿಡಿ,ದ್ರವ ಗಟ್ಟಿಯಾಗುವಾಗ ಬರ್ಫಿ ಶೇಪ್ ಗೆ ಕತ್ತರಿಸಿ, ನಂತರ ಸಂಪೂರ್ಣ ತಣ್ಣಗಾದ ಮೇಲೆ ರೆಡಿಯಾದ ಬರ್ಫಿಯನ್ನು ಸವಿಯಿರಿ.



Click it and Unblock the Notifications
