Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಕನ್ನಡ ರಾಜ್ಯೋತ್ಸವಕ್ಕೆ ಸ್ಪೆಷೆಲ್-ಬ್ರೆಡ್ ಬರ್ಫಿ
ವಿಶೇಷ ದಿನಗಳಲ್ಲಿ ಸಿಹಿ ತಿಂಡಿಗಳನ್ನು ಮಾಡುವುದು ನಮ್ಮ ಸಂಪ್ರದಾಯ. ಹೀಗೆ ಸಿಹಿ ತಿಂಡಿಗಳನ್ನು ತಯಾರಿಸುವಾಗ ರವೆ, ಅವಲಕ್ಕಿ, ಅಕ್ಕಿ ಈ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಬಾರಿಯ ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಬ್ರೆಡ್ ನಿಂದ ಬರ್ಫಿ ಮಾಡುವ ವಿಧಾನವನ್ನು ನೀಡಲಾಗಿದೆ.
ಈ ಸಿಹಿತಿಂಡಿಯನ್ನು ಸುಲಭವಾಗಿ ತಯಾರಿಸಬಹುದಾಗಿದ್ದು, ಇದನ್ನು ಮಾಡಿ ರುಚಿ ಇಷ್ಟವಾಯಿತೇ ಎಂದು ನಮಗೆ ತಿಳಿಸಿ. ಎಲ್ಲರಿಗೂ ಕನ್ನಡ ರಾಜೋತ್ಸವದ ಶುಭಾಶಯಗಳು.

ಬೇಕಾಗುವ ಸಾಮಾಗ್ರಿಗಳು:
ಬ್ರೆಡ್ ಚೂರುಗಳು 2 ಕಪ್
ಹಾಲು 1 ಕಪ್
ಬೆಲ್ಲ 100 ಗ್ರಾಂ
ತೆಂಗಿನ ತುರಿ ಅರ್ಧ ಕಪ್
ತುಪ್ಪ 1 ಚಮಚ
ರೋಸ್ ವಾಟರ್ ಸ್ವಲ್ಪ (ಬೇಕಿದ್ದರೆ)
ಗೋಡಂಬಿ ಸ್ವಲ್ಪ
ತಯಾರಿಸುವ ವಿಧಾನ:
1. ಬೆಲ್ಲದಿಂದ ಬೆಲ್ಲ ಪಾಕವನ್ನು ತಯಾರಿಸಲು ಇಡಿ.
2. ಬ್ರೆಡ್ ಚೂರುಗಳನ್ನು ಹಾಲಿನಲ್ಲಿ 10 ನಿಮಿಷ ಕಾಲ ನೆನೆ ಹಾಕಿ. ತುಂಬಾ ಹೊತ್ತು ಹಾಕಬೇಡಿ.
3. ಬೆಲ್ಲ ಕರಗಿದಾಗ ಅದಕ್ಕೆ ತೆಂಗಿನ ತುರಿ ಹಾಕಿ ಸೌಟ್ ನಿಂದ ಸ್ವಲ್ಪ ಹೊತ್ತು ತಿರುಗಿಸಿ. ಈ ರೀತಿ ತಿರುಗಿಸುವಾಗ ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿ ಇಡಿ.
4. ನಂತರ ಈ ಮಿಶ್ರಣಕ್ಕೆ ಹಾಲಿನಲ್ಲಿ ನೆನೆಸಿಟ್ಟ ಬ್ರೆಡ್ ಚೂರುಗಳನ್ನು ಹಾಕಿ ತಿರುಗಿಸುತ್ತಾ ಇರಿ. ನಂತರ ತುಪ್ಪ ಹಾಕಿ, ತುಪ್ಪ ಮಿಶ್ರಣದ ಮೇಲೆ ತೇಲುವವರಿಗೆ ಸೌಟ್ ನಿಂದ ತಿರುಗಿಸಿ. ನಂತರ ಗೋಡಂಬಿ ಹಾಕಿ ಮಿಶ್ರಣವನ್ನು ಉರಿಯಿಂದ ತೆಗೆಯಬೇಕು (ಈ ಮಿಶ್ರಣ ಗಟ್ಟಿಯಾಗಿರಲಿ).
5. ನಂತರ ಅದನ್ನು ಸ್ವಲ್ಪ ತಣ್ಣಗಾದ ಮೇಲೆ ಉಂಡೆಕಟ್ಟಬಹುದು ಅಥವಾ ಮಿಶ್ರಣವನ್ನು ತಟ್ಟೆಯಲ್ಲಿ ಸುರಿದು ತಣ್ಣಗಾದ ಮೇಲೆ ಕತ್ತರಿಸಿದರೆ ರುಚಿಕರವಾದ ಬ್ರೆಡ್ ಬರ್ಫಿ ರೆಡಿ.



Click it and Unblock the Notifications
