Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಕ್ರಿಸ್‌ಮಸ್‌ಗಾಗಿ ನೀರೂರಿಸುವ ಕೇಕ್ ಖಾದ್ಯಗಳು
ಕ್ರಿಸ್‌ಮಸ್ ಮತ್ತು ಕೇಕ್ ಎರಡಕ್ಕೂ ಈಡುಜೋಡಿನ ನಂಟು. ಕ್ರಿಸ್‌ಮಸ್‌ನಲ್ಲಿ ಕೇಕ್‌ಗೆ ಪ್ರಾಧಾನ್ಯತೆ ಹೆಚ್ಚು. ಕೇಕ್ ಅನ್ನು ನೀವು ಮನೆಯಲ್ಲೇ ತಯಾರಿಸಿ ಅಥವಾ ಅಂಗಡಿಯಿಂದ ಕೊಂಡುಕೊಳ್ಳಿ ಕೇಕ್ ಮಾತ್ರ ಕ್ರಿಸ್‌ಮಸ್‌ಗೆ ಅತ್ಯವಶ್ಯಕ.
ಮನೆಯಲ್ಲೇ ಕೇಕ್ ತಯಾರಿಸಿ ಕ್ರಿಸ್‌ಮಸ್ ಆಚರಿಸುವುದು ಒಂದು ಉತ್ತಮ ವಿಧಾನವಾಗಿದೆ. ಈ ಕ್ರಿಸ್‌ಮಸ್‌ಗಾಗಿ ನಿಮ್ಮ ಸ್ನೇಹಿತರು ಮತ್ತು ಬಂಧುಮಿತ್ರರಿಗಾಗಿ ಮನೆಯಲ್ಲೇ ಕೇಕ್ ತಯಾರಿಸಿ.
ವೃತ್ತಿಪರತೆಯ ಸಹಾಯವಿಲ್ಲದೇ ಅತ್ಯುತ್ತಮ ಕೇಕ್ ತಯಾರಿಸುವುದು ಹೇಗೆ ಎಂಬುದರ ಬಗ್ಗೆ ತಲೆಕೆಡೆಸಿಕೊಂಡಿರುವಿರಾ, ಚಿಂತಿಸಬೇಡಿ ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ.
ನೀವು ಮನೆಯಲ್ಲೇ ತಯಾರಿಸಬಹುದಾದ ಅತ್ಯದ್ಭುತ ಕೇಕ್ ರೆಸೆಪಿಯ ಸಂಗ್ರಹ ನಮ್ಮಲ್ಲಿದೆ. ಇವುಗಳು ನಿಮ್ಮ ಕೇಕ್‌ನ ಸವಿಯನ್ನು ಉತ್ತಮಗೊಳಿಸಿ ಇನ್ನಷ್ಟು ಬೇಕೆನಿಸುವಂತೆ ಮಾಡುತ್ತವೆ.
ಹಾಗಾದರೆ ಇನ್ನೇಕೆ ತಡ ಕಡಿಮೆ ಕ್ಯಾಲೋರಿಯ ವಿವಿಧ ರುಚಿಕರ ಕೇಕ್‌ಗಳ ತಯಾರಿ ವಿಧಾನದ ಮೇಲೆ ಕಣ್ಣುಹಾಯಿಸಿ.

1. ಬಟರ್ ಸ್ಪಾಂಜ್ ವೆನಿಲ್ಲಾ ನಟ್ಸ್
ಹಬ್ಬದ ಕಾಲ ಮರುಕಳಿಸಿದೆ! ಕ್ರಿಸ್‌ಮಸ್ ನಿಮ್ಮ ಬಾಗಿಲ ಕದ ತಟ್ಟುತ್ತಿದೆ, ರುಚಿಕರ ಮತ್ತು ಆರೋಗ್ಯಪೂರ್ಣ ಕೇಕ್‌ನೊಂದಿಗೆ ಹಬ್ಬವನ್ನು ಆಚರಿಸುವ ಸೂಕ್ತ ಸಮಯ ಬಂದೊದಗಿದೆ. ಆದ್ದರಿಂದ ಈ ಸರಳವಾದ ಮತ್ತು ಪರಿಪೂರ್ಣ ಬಟರ್ ಸ್ಪಾಂಜ್ ವೆನಿಲ್ಲಾ ನಟ್ಸ್ ಅನ್ನು ಕ್ರಿಸ್‌ಮಸ್‌ಗಾಗಿ ತಯಾರಿಸಿ ಮತ್ತು ರುಚಿಯನ್ನು ಸವಿಯಿರಿ.

2. ಚಾಕಲೇಟ್ ರಸ್‌ಬೆರಿ ಕೇಕ್
ಅತ್ಯದ್ಭುತ ಕೇಕ್ ತಯಾರಿಗೆ ಚಾಕಲೇಟ್ ಮತ್ತು ರಸ್‌ಬೆರಿ ಹೇಳಿಮಾಡಿಸಿದಂತವು. ಇವುಗಳನ್ನು ಬಳಸಿಕೊಂಡು ಅದ್ಭುತ ಕೇಕ್ ಅನ್ನು ಈ ಕ್ರಿಸ್‌ಮಸ್‌ಗಾಗಿ ತಯಾರಿಸಿ ಮತ್ತು ಹಬ್ಬವನ್ನು ರುಚಿಕರವಾಗಿಸಿ.

3.ಶುಂಠಿ ಬ್ರೆಡ್ ಲೋಪ್ ಕೇಕ್
ಸಾಂಪ್ರದಾಯಿಕ ಶುಂಠಿ ಬ್ರೆಡ್ ಕೂಡ ಸಂತೋಷದ ಚಿಹ್ನೆಯಾಗಿದೆ. ತೇವವಾಗಿರುವ, ಪರಿಮಳ ಮಸಾಲೆಯುಕ್ತ ಕ್ರಿಸ್‌ಮಸ್ ಈ ಕೇಕ್‌ನೊಂದಿಗೆ ನಿಮ್ಮದಾಗುತ್ತದೆ, ಇದನ್ನು ನೀವು ತಯಾರಿಸಲೇಬೇಕು.

4. ಐರಿಶ್ ವಿಸ್ಕಿ ಕೇಕ್
ಪ್ಲಮ್ ಕೇಕ್ ತಯಾರಿಸಿ ತಯಾರಿಸಿ ನೀವು ದಣಿದಿರುವಿರಾ, ಹಾಗಾದರೆ ವಿಸ್ಕಿ ಕೇಕ್ ಖಾದ್ಯವನ್ನು ನಿಮಗೆ ಸಿದ್ಧಗೊಳಿಸಬಹುದಲ್ಲವೇ? ಮೃದುವಾದ, ರುಚಿಕರ ಮತ್ತು ವಿಸ್ಕಿ ಸುವಾಸನೆಯಿಂದ ಕೂಡಿರುವ ಐರಿಶ್ ವಿಸ್ಕಿ ಕೇಕ್ ಅನ್ನು ತಯಾರಿಸಿ.

5.ಬ್ಲಾಕ್ ಫಾರೆಸ್ಟ್
ಜನಪ್ರಿಯ ಜರ್ಮನ್ ಖಾದ್ಯ 'ಬ್ಲಾಕ್ ಫಾರೆಸ್ಟ್ ಚೆರ್ರಿ ಟೋರ್ಟ್' ನಿಂದ ವಿಭಜಿಸಲ್ಪಟ್ಟ ಬ್ಲಾಕ್ ಫಾರೆಸ್ಟ್ ಕ್ರೀಮ್‌ನಿಂದ ಕೂಡಿದ್ದು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಕ್ರೀಮ್ ಮತ್ತು ಚಾಕಲೇಟ್‌ನ ಹಲವಾರು ಪದರಗಳು ಈ ಕೇಕ್‌ನೊಂದಿಗಿದ್ದು, ಮೇಲ್ಬಾಗದಲ್ಲಿ ಚೆರ್ರಿ ಮತ್ತು ಚಾಕಲೇಟ್‌ನ ಅಲಂಕಾರವನ್ನು ಹೊಂದಿದೆ. ಇದೊಂದು ಸಾಂಪ್ರದಾಯಿಕ ಖಾದ್ಯವಾಗಿದ್ದು, ಇದರ ತಯಾರಿಯಲ್ಲಿ ಲಿಕ್ಕರ್ ಅನ್ನು ಬಳಸಲಾಗುತ್ತದೆ, ಅಲ್ಕೋಹಾಲ್ ಇಲ್ಲದೆಯೂ ಇದನ್ನು ತಯಾರಿಸಬಹುದು.

6.ಸಕ್ಕರೆ ರಹಿತ ಕೇಕ್
ಈ ಕ್ರಿಸ್‌ಮಸ್ ಅನ್ನು ಆರೋಗ್ಯವಾಗಿ ಆಚರಿಸಲು ಮತ್ತು ನೀವು ಸಕ್ಕರೆ ಕಾಯಿಲೆಯನ್ನು ಹೊಂದಿದ್ದರೆ ಅದನ್ನು ನಿಯಂತ್ರಣದಲ್ಲಿಡಲು ನೀವು ಬಯಸಿದ್ದರೆ ಈ ರುಚಿಕರ ಸಕ್ಕರೆ ರಹಿತ ಕೇಕ್ ಖಾದ್ಯವನ್ನು ಪ್ರಯತ್ನಿಸಿ. ಈ ಕೇಕ್ ತಯಾರಿಯ ಸಾಮಾಗ್ರಿಗಳಲ್ಲಿ ಸಕ್ಕರೆಯ ಅಂಶ ಇಲ್ಲದಿರುವುದರಿಂದ ಇದನ್ನು ಫ್ರುಟ್ ಕೇಕ್ ಎಂದೂ ಸಹ ಕರೆಯುತ್ತಾರೆ.

7.ಮೊಟ್ಟೆ ರಹಿತ ಕೇಕ್
ಕೇಕ್‌ಗೆ ಬೇಕಾದ ನಯತ್ವವನ್ನು ಮೊಟ್ಟೆಯಿಲ್ಲದೆ ತಯಾರಿಸುವುದು ತುಂಬಾ ಕಷ್ಟಕರವಾಗಿರುವುದರಿಂದ ಮೊಟ್ಟೆ ರಹಿತ ಕೇಕ್ ತಯಾರಿ ಸ್ವಲ್ಪ ಕಠಿಣವೇ ಹೌದು. ನೀವು ಮನಸ್ಸು ಮಾಡಿದರೆ ಮೊಟ್ಟೆ ರಹಿತ ಕೇಕ್ ತಯಾರಿ ಸರಳವಾಗಿದ್ದು, ರುಚಿಕರವಾದ, ಬೇಕರಿಯಲ್ಲಿ ಸಿಗುವಂತಹ ಮೊಟ್ಟೆ ರಹಿತ ಕೇಕ್ ಮನೆಯಲ್ಲೂ ನೀವು ತಯಾರಿಸಬಹುದು.

8.ಚಾಕಲೇಟ್ ಮತ್ತು ಆರೇಂಜ್ ಕೇಕ್
ಚಾಕಲೇಟ್ ಮತ್ತು ಆರೆಂಜ್ ಮಿಶ್ರಣವು ಕೇಕ್ ಸ್ವಾದಕ್ಕೆ ಹೊಸ ರೂಪವನ್ನು ನೀಡುತ್ತವೆ. ಕ್ರೀಮ್ ಸವರಿದ ಚಾಕಲೇಟ್ ಕೇಕ್ ಇಲ್ಲಿದೆ. ಈ ಕೇಕ್ ತುಂಬಾ ಮೃದು ಮತ್ತು ರುಚಿಕರವಾಗಿದ್ದು ಪರಿಪೂರ್ಣವಾಗಿದೆ. ತುಂಡರಿಸಿದ ಆರೇಂಜ್ ಅನ್ನು ಕೂಡ ಕೇಕ್‌ನ ಮೇಲ್ಭಾಗದಲ್ಲಿ ಚಾಕಲೇಟ್‌ನೊಂದಿಗೆ ಅಲಂಕಾರಕ್ಕಾಗಿ ಬಳಸಬಹುದು. ಪ್ರತಿ ಬಾರಿ ತಿನ್ನುವಾಗ ಕೂಡ ವಿಶೇಷ ರುಚಿಯನ್ನು ಇದು ನೀಡುತ್ತದೆ.

9.ಕ್ರಿಸ್‌ಮಸ್ ಪ್ಲಮ್ ಕೇಕ್
ಬ್ರೌನ್ ಸುಗರ್ ಮತ್ತು ಚಾಕಲೇಟ್, ರಮ್ ಹಾಗೂ ಬ್ರಾಂದಿಯಲ್ಲಿ ಮುಳುಗಿಸಿದ ಹಣ್ಣುಗಳು ಮತ್ತು ನಟ್ಸ್ ಅದಕ್ಕೆ ವಿಶೇಷ ಸವಿಯನ್ನು ಸುವಾಸನೆಯನ್ನು ನೀಡುವ ಕ್ರಿಸ್‌ಮಸ್ ಪ್ಲಮ್ ಕೇಕ್ ಈ ಕ್ರಿಸ್‌ಮಸ್ ಅನ್ನು ಸದಾ ಕಾಲ ನೆನಪಲ್ಲುಳಿಯುವಂತೆ ಮಾಡುತ್ತದೆ.

10.ಚಾಕಲೇಟ್ ಚೀಸ್ ಕೇಕ್
ಯಾವುದೇ ಸಿಹಿ ಭಕ್ಷ್ಯವನ್ನು ತಯಾರಿಸುವಾಗಿನ ಶ್ರದ್ಧೆ ಈ ಕೇಕ್ ತಯಾರಿಯಲ್ಲಿ ಇರಲೇಬೇಕು. ಅದಾಗ್ಯೂ, ಈ ಮೈಕ್ರೋವೇವ್ ರೆಸೆಪಿಯಾದ ಪರಿಪೂರ್ಣ ಚಾಕಲೇಟ್ ಚೀಸ್ ಕೇಕ್ ಅನ್ನು ಕೇವಲ ಕೆಲವೇ ಗಂಟೆಗಳಲ್ಲಿ ನಿಮಗೆ ತಯಾರಿಸಬಹುದು.

11.ಚಾಕಲೇಟ್ ಕಪ್ ಕೇಕ್ಸ್
ರುಚಿಕರ ಚಾಕಲೇಟ್ ಕಪ್ ಕೇಕ್ ಸುಲಭವಾಗಿ ಬೇಕರಿಯಲ್ಲಿ ಸಿಗುವುದರಿಂದ ಇದನ್ನು ಮನೆಯಲ್ಲಿ ಮಾಡಲು ನಾವು ಪ್ರಯತ್ನಿಸುವುದಿಲ್ಲ, ಅದಾಗ್ಯೂ ಈ ಕೇಕ್ ಮಾಡುವುದು ತುಂಬಾ ಸರಳವಾಗಿರುವುದರಿಂದ ಬೇಕರಿಗೆ ಹೋಗಬೇಕಾದ ಅವಶ್ಯಕತೆಯೇ ಇಲ್ಲ. ಇಲ್ಲಿದೆ ಸರಳ ಚಾಕಲೇಟ್ ಕಪ್ ಕೇಕ್ ರೆಸೆಪಿ.



Click it and Unblock the Notifications
