Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸವಿಯಲು ಚೆನ್ನ ಈ ಬನಾನ ಪುಡ್ಡಿಂಗ್
ಬಾಳೆ ಹಣ್ಣಿನಿಂದ ತಯಾರಿಸುವ ಈ ಬನಾನ ಪುಡ್ಡಿಂಗ್ ತುಂಬಾ ರುಚಿಕರವಾಗಿರುತ್ತದೆ. ಬಾಳೆ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಈ ಪುಡ್ಡಿಂಗ್ ಮಾಡಲು ಹೆಚ್ಚಿನ ಶ್ರಮವಾಗಲಿ, ನೈಪುಣ್ಯತೆಯಾಗಲಿ ಬೇಕಾಗಿಲ್ಲ.
ಇದನ್ನು ಸುಲಭವಾಗಿ ಹಾಗೂ ಅಲ್ಪ ಸಮಯದಲ್ಲಿ ಮಾಡಬಹುದಾಗಿದ್ದು ಮಾಡುವ ವಿಧಾನವನ್ನು ಈ ಕೆಳಗೆ ಹೇಳಲಾಗಿದೆ.

ಬೇಕಾಗುವ ಸಾಮಾಗ್ರಿಗಳು:
ಮೈದಾ 1 ಕಪ್
ಹಾಲು 3 ಕಪ್
ಸಕ್ಕರೆ 3 ಚಮಚ
ಬಾಳೆ ಹಣ್ಣು 4
ಮೊಟ್ಟೆಯ ಹಳದಿ 2
ಚಿಟಿಕೆಯಷ್ಟು ಉಪ್ಪು
ಬೆಣ್ಣೆ 1 ಚಮಚ
ಸ್ವೀಟೆಂಡ್ ಕ್ರೀಮ್ (sweetened cream)
ವೆನಿಲ್ಲಾ ಎಸೆನ್ಸ್ 3-4 ಹನಿ
ಕುಕ್ಕೀಸ್ 4 ಚೆರ್ರಿ 6 (ಆಯ್ಕೆಗೆ ಬಿಟ್ಟದ್ದು)
ತಯಾರಿಸುವ ವಿಧಾನ:
1. ಸ್ವಲ್ಪ ದೊಡ್ಡ ಬಟ್ಟಲಿನಲ್ಲಿ ಮೈದಾ, ಉಪ್ಪು, ಸಕ್ಕರೆ ಹಾಕಿ ಮಿಶ್ರ ಮಾಡಿ ನಂತರ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
2. ನಂತರ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಗ್ಯಾಸ್ ಉರಿ ಮೇಲೆ ಇಟ್ಟು ಸೌಟ್ ನಿಂದ ಆಡಿಸುತ್ತಾ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ ಉರಿಯಿಂದ ಇಳಿಸಿ ಬದಿಯಲ್ಲಿಡಿ.
3. ಈಗ ಮತ್ತೊಂದು ಪಾತ್ರೆಯಲ್ಲಿ ಮೊಟ್ಟೆಯ ಹಳದಿ, ಬೆಣ್ಣೆ, ಸ್ವೀಟೆಂಡ್ ಕ್ರೀಮ್ ಹಾಕಿ ಚೆನ್ನಾಗಿ ಕಲೆಸಿ ನಂತರ ಇದನ್ನು ಹಾಲಿನ ಮಿಶ್ರಣದ ಜೊತೆಗೆ ಹಾಕಬೇಕು. ನಂತರ ಈ ಮಿಶ್ರಣವನ್ನು ಉರಿಯಲ್ಲಿ 2 ನಿಮಿಷ ಕಾಲ ಇಡಬೇಕು. ನಂತರ ವೆನಿಲ್ಲಾ ಎಸೆನ್ಸ್ ಹಾಕಿ ಉರಿಯಿಂದ ತೆಗೆಯಬೇಕು.
4. ಈಗ ಬಾಳೆ ಹಣ್ಣನ್ನು ಚೆನ್ನಾಗಿ ಹಿಸುಕಬೇಕು.
5. ಈ ದೊಡ್ಡ ಗ್ಲಾಸ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಭಾಗ ಚೆನ್ನಾಗಿ ಹಿಸುಕಿದ ಬಾಳೆಹಣ್ಣು ನಂತರ ಆ ಮಿಶ್ರಣವನ್ನು ಹಾಕಬೇಕು, ನಂತರ ಪುನಃ ಬಾಳೆ ಹಣ್ಣು ಹಾಕಬೇಕು. ಈ ರೀತಿ ಗ್ಲಾಸ್ ಅನ್ನು ಮುಕ್ಕಾಲು ಭಾಗದಷ್ಟು ತುಂಬಿ ನಂತರ ಚೆರ್ರಿ ಹಣ್ಣುಗಳಿಂದ ಅಲಂಕರಿಸಿದರೆ ಬನಾನ ಪುಡ್ಡಿಂಗ್ ರೆಡಿ.



Click it and Unblock the Notifications
