Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಬನಾನ ಚಾಕಲೇಟ್ ಚಂಕ್ -ಕ್ರಿಸ್ ಮಸ್ ಸ್ಪೆಷೆಲ್
ಪ್ರಳಾಯ ಉಂಟಾಗಿ ಈ ಭಾರಿ ಕ್ರಿಸ್ ಮಸ್ ಎಲ್ಲಿ ಆಚರಿಸಲೋ ಸಾಧ್ಯವಾಗುವುದಿಲ್ಲವೋ ಎಂದು ಭಯಪಟ್ಟವರಿಗೆ ನಿರಾಂತಕವಾಗಿದೆ. ಪ್ರಳಾಯದ ವಿಷಯ ಮರೆತು ಸಡಗರ ಸಂಭ್ರಮದ ಕ್ರಿಸ್ ಮಸ್ ಹಬ್ಬವನ್ನು ಸ್ವಾಗತಿಸಲು ನಾವೆಲ್ಲಾ ಸಿದ್ಧವಾಗಿದ್ದೇವೆ.
ಕ್ರಿಸ್ ಮಸ್ ಗೆ ಪ್ರತಿಯೊಂದು ಕ್ರಿಶ್ಚಿಯನ್ ರ ಮನೆಯಲ್ಲಿ ಕೇಕ್ ಇದ್ದೇ ಇರುತ್ತದೆ. ಈ ಕೇಕ್ ಅನ್ನು ಬೇಕರಿಯಿಂದ ತಂದು ತಿನ್ನುವ ಬದಲು ಮನೆಯಲ್ಲಿಯೇ ಮಾಡಿದರೆ ಕೇಕ್ ತಿನ್ನುವ ಆನಂದವೇ ಬೇರೆ. ಅದಕ್ಕಾಗಿ ಇಲ್ಲಿ ನಾವು ಸರಳವಾದ ಮತ್ತು ರುಚಿಕರವಾದ ಬನಾನ ಚಾಕಲೇಟ್ ಚಂಕ್ ಕೇಕ್ ನ ರೆಸಿಪಿ ನೀಡಿದ್ದೇವೆ. ಕ್ರಿಸ್ ಮಸ್ ಹಬ್ಬಕ್ಕೆ ಕೇಕ್ ನೀವೇ ತಯಾರಿಸಿದರಂತೂ ಕಿಸ್ ಮಸ್ ಮತ್ತಷ್ಟು ಸ್ಪೆಷೆಲ್ ಆಗಿರುತ್ತದೆ. ಹ್ಯಾಪಿ ಕ್ರಿಸ್ ಮಸ್ ...

ಬೇಕಾಗುವ ಸಾಮಾಗ್ರಿಗಳು:
* ಅರ್ಧ ಕಪ್ ಬೆಣ್ಣೆ
* ಅರ್ಧ ಕಪ್ ಸಕ್ಕರೆ
* 2 ಮೊಟ್ಟೆ
* 1 ಚಮಚ ವೆನಿಲ್ಲಾ ಎಕ್ಸಾಟ್ರಾಟ್
* 1/4 ಕಪ್ ಹುಳಿ ಕ್ರೀಮ್ (sour cream ), ಇದು ಇಲ್ಲಿದಿದ್ದರೆ ಕಿವಿ ಹಣ್ಣು ಹಾಕಬಹುದು.
* ಒಂದೂವರೆ ಕಪ್ ಮೈದಾ
3/4 ಚಮಚ ಅಡುಗೆ ಸೋಡಾ
* 1 ಕಪ್ ಹಣ್ಣಾದ ಚೆನ್ನಾಗಿ ಹಿಸುಕಿದ ಬಾಳೆಹಣ್ಣು
* 3 ಕರಗಿಸಿದ ಚಾಕಲೇಟ್ (3 squares semi-sweet chocolate)
ತಯಾರಿಸುವ ವಿಧಾನ:
* ಮೈಕ್ರೋ ಅವನ್ ಅನ್ನು 350 ಡಿಗ್ರಿ ಉಷ್ಣತೆಗೆ ಬಿಸಿ ಮಾಡಬೇಕು. ಈಗ 8 ಇಂಚಿನಷ್ಟು ಅಗಲವಿರುವ ತವಾಕ್ಕೆ ಸ್ವಲ್ಪ ಬೆಣ್ಣೆ ಸವರಬೇಕು.
* ಕ್ರೀಮ್ , ಬೆಣ್ಣೆ, ಸಕ್ಕರೆ ಪಾಕ ಹಾಕಿ ಮಿಕ್ಸಿಯಲ್ಲಿ ಮೀಡಿಯಂ ಸ್ಪೀಡ್ ನಲ್ಲಿ ಇಟ್ಟು ರುಬ್ಬಬೇಕು.
* ಈಗ ಮೊಟ್ಟೆ ಹಾಕಿ, ವೆನಿಲ್ಲಾ ಹಾಕಿ ಈ ಮಿಶ್ರಣವನ್ನು ಚೆನ್ನಾಗಿ ಕದಡಬೇಕು.
* ಈಗ ಮೈದಾ ಹಾಕಿ ಮಿಶ್ರಣ ಮಾಡಿ ಬೇಕಿಂಗ್ ಸೋಡಾ ಮತ್ತು ಚಾಕಲೇಟ್ ಹಾಕಬೇಕು, ನಂತರ ಇದಕ್ಕೆ ಚೆನ್ನಾಗಿ ಹಿಸುಕಿದ ಬಾಳೆ ಹಣ್ಣನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.
* ಈಗ ಈ ಮಿಶ್ರಣವನ್ನು ತವಾಕ್ಕೆ ಸುರಿದು 30 ನಿಮಿಷ ಬೇಯಿಸಿ ನಂತರ ತಣ್ಣಗಾಗಲು ತಟ್ಟೆಗೆ ಹಾಕಬೇಕು. ಈ ರೀತಿ ಮಾಡಿದರೆ ಬನಾನ ಚಾಕಲೇಟ್ ಚಂಕ್ ಕೇಕ್ ರೆಡಿ.



Click it and Unblock the Notifications
