Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರಂಜಾನ್ ಹಬ್ಬಕ್ಕಾಗಿ ರುಚಿಕರವಾದ ಬಾದಾಮ್ ಫಿರ್ನಿ ಖಾದ್ಯ
ಪವಿತ್ರ ಹಬ್ಬ ರಂಜಾನ್ ತಿಂಗಳು ಪ್ರಾರಂಭವಾಗಿದೆ. ದಿನಪೂರ್ತಿ ಉಪವಾಸವಿದ್ದು ಆಹಾರ ಸೇವಿಸಲು ಸಂಜೆಯವರೆಗೆ ಕಾಯುವುದು ಅನಿವಾರ್ಯ. ನಿಮ್ಮ ದಿನದ ಉಪವಾಸಕ್ಕಾಗಿ ನೀವು ಸಂಜೆ ಸಿದ್ಧಪಡಿಸುವ ಆಹಾರ ರುಚಿಯಾಗಿರಬೇಕು ಮತ್ತು ಆರೋಗ್ಯಪೂರ್ಣವಾಗಿರಬೇಕು ಅಲ್ಲವೇ?
ಆದ್ದರಿಂದಲೇ ಈ ದಿನಕ್ಕಾಗಿ ರುಚಿಯಾದ ಖಾದ್ಯವನ್ನು ನೀವು ತಯಾರಿಸುತ್ತೀರಿ. ನೈಸರ್ಗಕವಾಗಿ ಈ ಆಹಾರ ಪಟ್ಟಿಯಲ್ಲಿ ನೀವು ಬಿಡಲು ಸಾಧ್ಯವಾದೇ ಇರುವಂತಹುದ್ದು ಸಿಹಿ ತಿಂಡಿಯಾಗಿದೆ ಅಲ್ಲವೇ? ಭಾರತದ ಉತ್ತರದ ಕಡೆಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಫಿರ್ನಿ ಸಿಹಿ ತಿಂಡಿ ಕಾಶ್ಮೀರದ ಸೊಗಸನ್ನು ಸೌಂದರ್ಯವನ್ನು ತನ್ನಲ್ಲಿ ಒಗ್ಗೂಡಿಸಿಕೊಂಡಿದೆ.
ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಂಡು ತಯಾರು ಮಾಡಲಾಗುವ ಈ ಹಾಲಿನ ತಿಂಡಿಗೆ ಬೆಲ್ಲ ಸೇರಿಸಲಾಗುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಹೆಚ್ಚು ಕ್ಯಾಲೋರಿ ಸೇರ್ಪಡೆಯಾಗುವುದಿಲ್ಲ. ರುಚಿಯಾದ ಬಾದಾಮ್‌ನ ಗರಿ ಗರಿ ರುಚಿ ನಿಮ್ಮ ನಾಲಗೆಯ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಹಾಗಿದ್ದರೆ ಬಾದಾಮ್ ಫಿರ್ನಿಯ ಸ್ವಾದವನ್ನು ನಿಮ್ಮ ನಾಲಗೆಗೆ ಉಣಬಡಿಸಲು ನೀವು ತಯಾರಾಗಿರುವಿರಾ? ಬನ್ನಿ ಹಾಗಿದ್ದರೆ ಇಲ್ಲಿ ನಾವು ಕೊಟ್ಟಿರುವ ತಯಾರಿ ವಿಧಾನವನ್ನು ನೋಡಿಕೊಳ್ಳಿ ಮತ್ತು ಮನೆಯಲ್ಲೇ ಈ ರುಚಿಯಾದ ಖಾದ್ಯವನ್ನು ತಯಾರಿಸಿ.

ರಂಜಾನ್ ಗೆ ಶೀರ್ ಕುರ್ಮಾ ವಿಶೇಷ ಔತಣ
ಪ್ರಮಾಣ: 3
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು
ಸಾಮಾಗ್ರಿಗಳು:
*ಬೆಲ್ಲ - 4 ಚಮಚ (ಚೆನ್ನಾಗಿ ಜಜ್ಜಿದ್ದು)
*ಬಾದಾಮಿ - 10-15 (ಜಜ್ಜಿದ್ದು)
*ಹಾಲು - 3 ಕಪ್‌ಗಳು
*ಅಕ್ಕಿ - 1/4 ಕಪ್ (ನೀರಿನಲ್ಲಿ ನೆನೆಸಿದ್ದು)
*ಹಸಿರು ಏಲಕ್ಕಿ ಹುಡಿ - 1/2 ಚಮಚ
*ರೋಸ್ ವಾಟರ್ - 1 ಚಮಚ
ಮಾಡುವ ವಿಧಾನ:
1. ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿಕೊಳ್ಳಿ.
2. ಅಕ್ಕಿಯಲ್ಲಿರುವ ನೀರನ್ನು ಬಸಿದು ನುಣ್ಣಗೆ ಅದನ್ನು ರುಬ್ಬಿಕೊಳ್ಳಿ.
3. ಈಗ ಸ್ವಲ್ಪ ಕುದಿಸಿದ ಹಾಲನ್ನು ರುಬ್ಬಿದ ಹಿಟ್ಟಿಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
4. ಇನ್ನು ಕುದಿಯುತ್ತಿರುವ ಹಾಲಿಗೆ ಈ ಅಕ್ಕಿ ಹುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
5. ಈ ಮಿಶ್ರಣ ದಪ್ಪಗಾಗುವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.
6. ಇನ್ನು ಏಲಕ್ಕಿ ಹುಡಿಯನ್ನು ಮತ್ತು ಜಜ್ಜಿದ ಬೆಲ್ಲವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
7. ಸಣ್ಣ ಉರಿಯಲ್ಲಿ ಮಿಶ್ರಣ ಬೇಯಲು ಬಿಡಿ.
8. ಈ ಮಿಶ್ರಣಕ್ಕೆ ಬಾದಾಮಿಯನ್ನು ಸೇರಿಸಿ.
9. ಒಮ್ಮೆ ಪೂರ್ತಿ ಆದ ನಂತರ, ಇದು ಆರಲು ಬಿಡಿ.
ಬಾದಾಮ್ ಫಿರ್ನಿ ರೆಸಿಪಿ ಸವಿಯಲು ಸಿದ್ಧವಾಗಿದೆ. ಈ ರಂಜಾನ್ ಅನ್ನು ಈ ಸ್ವಾದಿಷ್ಟ ಭಕ್ಷ್ಯದೊಂದಿಗೆ ಸವಿಯಿರಿ.



Click it and Unblock the Notifications
