Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ!
ಜನ್ಮಾಷ್ಟಮಿಯ ಕಳೆಗಟ್ಟಿಸುವ ರುಚಿಯಾದ ಬಾದಾಮಿ ಹಲ್ವಾ
ಹಬ್ಬಗಳು ಒಂದರ ಮೇಲೊಂದರಂತೆ ಆಗಮಿಸುತ್ತಿವೆ, ಅದರಲ್ಲೂ ಕೃಷ್ಣ ಜನ್ಮಾಷ್ಟಮಿಗೆ ಇನ್ನೇನು ಕಲವೇ ದಿನಗಳು ಬಾಕಿ ಉಳಿದಿವೆ, ಅಷ್ಟೇ ಅಲ್ಲದೆ ಹಬ್ಬಗಳೊಂದಿಗೆ ಆತ್ಮೀಯತೆಯನ್ನು ತೋರುವ ಅತಿಥಿಗಳು ಮತ್ತು ಸ್ನೇಹಿತರು ನಿಮ್ಮ ನಿವಾಸಕ್ಕೆ ಬಂದೇ ಬರುತ್ತಾರೆ. ಅವರು ಬಂದಾಗ ಯಾವಾಗಲೂ ಮಾಡುವ ಅಡುಗೆಯನ್ನೇ ಅವರಿಗೆ ತಯಾರಿಸಿ ಬಡಿಸುವುದು ಸೂಕ್ತವಾಗಿರುವುದಿಲ್ಲ ಹಾಗಿದ್ದರೆ ಅವರಿಗೆ ವಿಶೇಷವಾಗಿರುವ ಮತ್ತು ನಿಮ್ಮ ಹಬ್ಬದ ಕಳೆಯನ್ನು ಹೆಚ್ಚಿಸುವ ರುಚಿಕರವಾದ ತಿಂಡಿಯನ್ನು ಮಾಡುವುದು ಅತೀ ಅಗತ್ಯ ಅಲ್ಲವೇ?,
ಬನ್ನಿ ಹಾಗಾದರೆ ಜನ್ಮಾಷ್ಟಮಿ ಪ್ರಯುಕ್ತ ಬಾಯನ್ನು ಸಿಹಿ ಮಾಡುವ ಬಾದಾಮಿ ಹಲ್ವಾ ರೆಸಿಪಿಯೊಂದಿಗೆ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದು, ನೀವು ಪ್ರಯತ್ನಿಸಿ.

ಪ್ರಮಾಣ: 2
ಸಿದ್ಧತಾ ಸಮಯ: 30 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 45 ನಿಮಿಷಗಳು
ಮಾಡುವ ವಿಧಾನ
* ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಕರಗಿಸಿಕೊಳ್ಳಿ ಹಾಗೂ ಇದನ್ನು ಪಾತ್ರೆಯ ಸುತ್ತಲೂ ಹರಡಿಸಿಕೊಳ್ಳಿ ಈ ರೀತಿ ಮಾಡುವುದರಿಂದ ಹಲ್ವಾ ಪಾತ್ರೆಗೆ ಅಂಟಿಕೊಳ್ಳುವುದಿಲ್ಲ.
* ಇದೇ ಪಾತ್ರಯಲ್ಲಿ 1/4 ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ, ನಂತರ ಉರಿಯನ್ನು ನಿಲ್ಲಿಸಿ, ಇದಕ್ಕೆ ಸಕ್ಕರೆಯನ್ನು ಹಾಕಿ ಮತ್ತು ಸಕ್ಕರೆ ಕರಗುವವರೆಗೆ ಇದನ್ನು ಸಮಮಿಶ್ರಣ ಮಾಡಿಕೊಳ್ಳಿ.
* ಇದೀಗ ಬಾದಾಮಿ ಪೇಸ್ಟ್ ಅನ್ನು ಸೇರಿಸಿಕೊಳ್ಳಿ, ಉಳಿದ ಹಾಲಿಗೆ ಕೇಸರಿಯನ್ನು ಹಾಕಿ ಮತ್ತು ಮಧ್ಯಮ ಉರಿಯಲ್ಲಿ ಇದನ್ನು ಚೆನ್ನಾಗಿ ಕಲಸುತ್ತಿರಿ.
* ಇದು ದಪ್ಪನಾಗುತ್ತಿದ್ದಂತೆ ಪಾತ್ರೆಯ ಬದಿ ಒಣಗುತ್ತದೆ, ಎಲ್ಲಾ ತುಪ್ಪವನ್ನು ಇದಕ್ಕೆ ಹಾಕಿ ಮತ್ತು 10 ನಿಮಿಷ ಇದನ್ನು ಬೇಯಿಸಿಕೊಳ್ಳಿ ಸಣ್ಣ ಉರಿಯಲ್ಲಿ ಇದನ್ನು ಚೆನ್ನಾಗಿ ಕಲಸುತ್ತಿರಿ.
*ಹಲ್ವಾವು ತುಪ್ಪವನ್ನು ಚೆನ್ನಾಗಿ ಹೀರುತ್ತಿರುವಂತೆ ಪಾತ್ರೆಯ ಬದಿಯಲ್ಲಿ ಗಟ್ಟಿಯಾಗಿ ಅಂಟಿಕೊಂಡಿರುವಂತಹ ಪಾಕ ಬಿಡುತ್ತದೆ. ಇದೀಗ ಉರಿಯನ್ನು ನಿಲ್ಲಿಸಿ. ಉಳಿದ ತುಪ್ಪವನ್ನು ಇದಕ್ಕೆ ಸೇರಿಸಿ ಮತ್ತು ಹಲ್ವಾವನ್ನು ಮೆತ್ತಗಾಗಿಸಲು ಚೆನ್ನಾಗಿ ಕಲಸಿ. ಹಲ್ವಾ ತಣ್ಣಗಾಗುತ್ತಿರುವಂತೆ ಸುಂದರವಾಗಿ ಪಾತ್ರೆಯಲ್ಲಿ ಮೂಡಿಬರುತ್ತದೆ.



Click it and Unblock the Notifications
