Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಯಾಕೆ ಲೇಟ್ ಮಾಡೋಣ ಬರ್ರಿ ಸ್ಟ್ರಾಬೆರ್ರಿ ಡಿಲೈಟ್
ಈಗ ಎಲ್ಲಿ ನೋಡಿದರೂ ಕೇಕ್‌ಗಳ ಘಂ ಎನ್ನುವ ಪರಿಮಳ. ಹೊಸವರ್ಷದ ಸಂಭ್ರಮಕ್ಕೆ ಕೇಕ್ ಜತೆಗೆ ಸ್ವಲ್ಪ ವೈವಿಧ್ಯವಾಗಿ ಈ ಸ್ಟ್ರಾಬೆರ್ರಿ ಡಿಲೈಟನ್ನು ಮಾಡಿ ನೋಡಿ! ಇದನ್ನು ತಯಾರಿಸಲು ಬೇಕಾದ ಪದಾರ್ಥಗಳ ಪಟ್ಟಿಯೂ ಕಡಿಮೆ. ಆಗಿದ್ದರೆ ತಡ ಯಾಕೆ?
ಬೇಕಾಗುವ ಪದಾರ್ಥಗಳು:
ಫ್ಲೈನ್ ಕೇಕ್ (ಬೇಕರಿಯಲ್ಲಿ ಸಿಗುತ್ತದೆ), ಒಂದು ಹಿಡಿ ಸ್ಟ್ರಾಬೆರ್ರಿ (ಉದ್ದುದ್ದ ಎರಡು ಹೋಳುಗಳಾಗಿ ಕತ್ತರಿಸಿಕೊಳ್ಳಬೇಕು), ವೆನಿಲಾ ಐಸ್‌ಕ್ರೀಂ 500ಗ್ರಾಂ, ಜಿಲೆಟಿನ್ 2 ಟೀ ಚಮಚ(ಇದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಕಲಸಬೇಕು), ಕಾಯಿಸಿದ ಹಾಲು ಒಂದು ಸಣ್ಣ ಕಪ್ಪು.
ತಯಾರಿಸುವ ವಿಧಾನ:
ಮೊದಲು ಕೇಕನ್ನು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಹಾಲು, ಜಿಲೆಟಿನ್, ವೆನಿಲಾ ಐಸ್‌ಕ್ರೀಮ್‌ಗಳನ್ನು ನೊರೆಬರುವವರೆಗೆ ಮಿಕ್ಸಿಯಲ್ಲಿ ಹಾಕಿ ಕಲೆಸಿಕೊಳ್ಳಬೇಕು. ಈಗ ಈ ಮಿಶ್ರಣಕ್ಕೆ ಸ್ವಲ್ಪ ಸ್ಟ್ರಾಬೆರ್ರಿ ಹೋಳುಗಳನ್ನು ಬೆರಸಿ 2-3 ಗಂಟೆಗಳ ಕಾಲ ಫ್ರಿಜ್‌ನಲ್ಲಿಡಬೇಕು. ತಣ್ಣನೆಯ ಈ ಮಿಶ್ರಣವನ್ನು ಮೊದಲೇ ಕತ್ತರಿಸಿ ಇಟ್ಟಿಕೊಂಡಿದ್ದ ಕೇಕ್‌ನ ಮೇಲೆ ಹರಡಿ ಅದರ ಮೇಲೆ ಉಳಿದಿರುವ ಸ್ಟ್ರಾಬೆರ್ರಿ ಹೋಳುಗಳನ್ನು ಇಟ್ಟು ಅಲಂಕರಿಸಬೇಕು. ಅಷ್ಟೇ ಬಾಯಲ್ಲಿ ನೀರೂರಿಸುವ ಸ್ಟ್ರಾಬೆರ್ರಿ ಡಿಲೈಟ್ ತಯಾರಾದಂತೆ.
(ದಟ್ಸ್‌ಕನ್ನಡ ಪಾಕಶಾಲೆ)



Click it and Unblock the Notifications
