Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸಂಭ್ರಮದ ಹೊಸ ವರ್ಷಕ್ಕೆ ಸಿಹಿ ಸಿಹಿ ಪೂರಿ ಮಾಡಿ

ಅಂಗಡಿಗಳಿಂದ ಸಿಹಿ ತಿಂಡಿಗಳನ್ನು ತರುವ ಬದಲು ಮನೆಯಲ್ಲೇ ಮಕ್ಕಳಿಗೆ, ನಿಮಗೆ ಅಚ್ಚುಮೆಚ್ಚಾಗುವ ಸಿಹಿ ಪೂರಿಗಳನ್ನು ತಯಾರಿಸಿ. ಅದೂ ಕೂಡ ಕಡಿಮೆ ಅವಧಿಯಲ್ಲಿ. ಸಿಹಿ ಪೂರಿ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.
ಸಿಹಿ ಪೂರಿಗೆ ಏನೇನು ಬೇಕು?
* ಒಂದು ಬಟ್ಟಲು ಮೈದಾಹಿಟ್ಟು
* ಸ್ವಲ್ಪ ಡಾಲ್ಡ / ಬೆಣ್ಣೆ / ತುಪ್ಪ
* 2 ದೊಡ್ಡ ಚಮಚ ಸಕ್ಕರೆ ಪುಡಿ
* ಸ್ವಲ್ಪ ಕೊಬ್ಬರಿತುರಿ
* ಎಣ್ಣೆ
ಸಿಹಿ ಪೂರಿ ತಯಾರಿಸುವ ವಿಧಾನ:
* ಮೊದಲು ಮೈದಾ, ಸಕ್ಕರೆಪುಡಿ ಮತ್ತು ಡಾಲ್ಡ ಎಲ್ಲವನ್ನು ಚೆನ್ನಾಗಿ ಬೆರೆಸಿ, ನೀರು ಹಾಕಿ ಗಟ್ಟಿಯಾಗಿ ಪೂರಿ ಹಿಟ್ಟಿನ ಹದಕ್ಕೆ ಅಥವ ಅದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿಕೊಂಡು 15 ನಿಮಿಷ ಬಿಡಬೇಕು.
* ಈ ಹಿಟ್ಟಿನಿಂದ ಉಂಡೆ ಮಾಡಿಕೊಂಡು ಪೂರಿಯಂತೆ ಮಣೆ ಮೇಲೆ ಲಟ್ಟಿಸಿಕೊಳ್ಳಬೇಕು (ಸ್ವಲ್ಪ ತೆಳುವಾಗಿರಲಿ)
* ನಂತರ ಕಾದಿರುವ ಎಣ್ಣೆಯಲ್ಲಿ ಎರಡೂ ಕಡೆಯಲ್ಲಿ ಬೇಯಿಸಿಕೊಳ್ಳಬೇಕು. ಪೂರಿ ಎಣ್ಣೆ ಹೀರಿಕೊಳ್ಳಲು ಪೇಪರ್ ಮೇಲೆ ಈ ಪೂರಿಗಳನ್ನು ಹಾಕಿಡಬೇಕು.
* ತಕ್ಷಣವೇ ಅಂದರೆ ಬಿಸಿ ಇರುವಾಗಲೇ ಪೂರಿಯ ಎರಡು ಕಡೆಗೂ ಸಕ್ಕರೆಪುಡಿ ಮತ್ತು ಕೊಬ್ಬರಿ ತುರಿ ಉದುರಿಸಬೇಕು.
* ಸಕ್ಕರೆ ಉದುರಿಸುವ ಬದಲು ಸಕ್ಕರೆ ಪಾಕ ಮಾಡಿಕೊಂಡು ಅದರಲ್ಲಿ ಅದ್ದಿ ತೆಗೆಯಲೂಬಹುದು. ನಂತರ ಕೊಬ್ಬರಿ ಉದುರಿಸಬಹುದು. ಈಗ ಸಿಹಿ ಪೂರಿ ತಿನ್ನಲು ಸಿದ್ಧವಾಗಿರುತ್ತೆ. ತುಂಬಾ ಸುಲಭವಾಗಿ ತಯಾರಿಸಬಹುದಾದ ಈ ಸಿಹಿಪೂರಿ ಹೊಸ ವರುಷಕ್ಕೆ ಹೇಳಿ ಮಾಡಿಸಿದ್ದು.



Click it and Unblock the Notifications
