Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕರ ಸಂಕ್ರಾಂತಿಗೆ ಸವಿ ಸವಿ-ಸ್ವಾದಿಷ್ಟ ತಿನಿಸುಗಳು

ಎಳ್ಳು ಹೋಳಿಗೆ
ಬೇಕಾಗುವ ಸಾಮಾಗ್ರಿ : ಒಂದು ಬಟ್ಟಲು ಕರಿ ಅಥವಾ ಬಿಳಿ ಎಳ್ಳು, ಒಂದು ಬಟ್ಟಲು ಬೆಲ್ಲ, ಒಂದು ಕಪ್ ಮೈದಾಹಿಟ್ಟು, ಒಂದು ಚಮಚ ಗಸಗಸೆ, ಏಲಕ್ಕಿ.
ಮಾಡುವ ವಿಧಾನ : ಎಳ್ಳನ್ನು ಸ್ವಲ್ಪ ಸ್ವಲ್ಪವೇ ಬಾಣಲೆಗೆ ಹಾಕಿ ಹದವಾಗಿ ಹುರಿಯಿರಿ. ಗಸಗಸೆ, ಏಲಕ್ಕಿ, ಬೆಲ್ಲದ ಪುಡಿ, ಎಳ್ಳು ಸೇರಿಸಿ ಪುಡಿ ಮಾಡಿ ಬೆರೆಸಿ ಎಳ್ಳಿನ ಹೂರಣ ಮಾಡಿ. ನಂತರ ಮೈದಾಹಿಟ್ಟಿಗೆ ನೀರು ಹಾಕಿ ಚಪಾತಿ ಹಿಟ್ಟಿನಂತೆ ಕಲಸಿ. ಒಂದು ಗಂಟೆಯ ನಂತರ ಚಪಾತಿ ರೀತಿಯಲ್ಲಿ ಲಟ್ಟಿಸಿ ಮಧ್ಯೆ ಎಳ್ಳಿನ ಹೂರಣ ಇಟ್ಟು ಮಡಚಿ ಪುನಃ ಲಟ್ಟಿಸಿ ಎಣ್ಣೆ ಹಾಕಿ ಹೊಂಬಣ್ಣಕ್ಕೆ ಬರುವವರೆಗೂ ಎರಡೂ ಕಡೆ ಬೇಯಿಸಿ. ನಂತರ ತುಪ್ಪ ಹಾಕಿ ತಿನ್ನಬಹುದು.
***
ಡ್ರೆೃ ಬರ್ಫಿ
ಬೇಕಾಗುವ ಸಾಮಗ್ರಿ : ಸಕ್ಕರೆ , ಪುಡಿ ಮಾಡಿದ ಹುರಿಗಡಲೆ, ಗಸಗಸೆ, ದ್ರಾಕ್ಷಿ, ಗೋಡಂಬಿ, ಕೊಬ್ಬರಿ, ಬಾದಾಮಿ.
ಮಾಡುವ ವಿಧಾನ : ಸಕ್ಕರೆ ಪಾಕ ಮಾಡಿಕೊಂಡು ಅದಕ್ಕೆ ಪುಡಿ ಮಾಡಿದ ಹುರಿಗಡಲೆ ಹಾಕಿ. ನಂತರ ಹುರಿದ ಗಸೆ ಸಗಸೆ, ದ್ರಾಕ್ಷಿ, ಗೋಡಂಬಿ, ಕೊಬ್ಬರಿ ತುರಿ, ಬಾದಾಮಿ, ಎರಡು ಚಮಚ ತುಪ್ಪ ಹಾಕಿ ಗಟ್ಟಿಯಾಗುವವರೆಗೂ ಚೆನ್ನಾಗಿ ಕೆದಕಿ, ಆನಂತರ ತುಪ್ಪ ಸವರಿದ ತಟ್ಟೆಗೆ ಹಾಕಬೇಕು. ಒಣಗಿದ ನಂತರ ನಿಮಗೆ ಬೇಕಾದಂತೆ ಕತ್ತರಿಸಿಕೊಳ್ಳಿ.
***
ಅಕ್ಕಿ, ಕಡಲೆ ಬೇಳೆ ಪಾಯಸ
ಬೇಕಾಗುವ ಸಾಮಗ್ರಿ : ಹುರಿದ ಅಕ್ಕಿ, ಗಸಗಸೆ, ಬೆಲ್ಲ, ಕಾಯಿತುರಿ, ಬೇಯಿಸಿದ ಕಡಲೆ ಬೇಳೆ ಹಾಗೂ ಬೆಲ್ಲ.
ಮಾಡುವ ವಿಧಾನ : ಮೊದಲು ಅಕ್ಕಿ ಹಾಗೂ ಗಸಗಸೆಯನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ಅದಕ್ಕೆ ಬೆಲ್ಲ , ಕಾಯಿತುರಿ ಎಲ್ಲಾ ಹಾಕಿ ರುಬ್ಬಿಕೊಳ್ಳಬೇಕು. ಬೇಯಿಸಿದ ಕಡಲೆ ಬೇಳೆಗೆ ಸ್ವಲ್ಪ ನೀರು ಹಾಕಿ ಈ ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಆನಂತರ ಸ್ವಲ್ಪ ಬಿಸಿ ಹಾಲು ಸೇರಿಸಿ. ಸಿಹಿ ಸಿಹಿ ಪಾಯಸದಿಂದ ದಿನವೆಲ್ಲ ಸಿಹಿ.
***
ಬಾದಾಮಿ ಖೀರು
ಬೇಕಾಗುವ ಸಾಮಗ್ರಿ : ಅರ್ಧ ಲೀಟರ್ ಹಾಲು, 125 ಗ್ರಾಂ. ಬಾದಾಮಿ, ಎರಡು ಏಲಕ್ಕಿ, 25 ಗ್ರಾಂ. ಸಕ್ಕರೆ.
ಮಾಡುವ ವಿಧಾನ : ಬಾದಾಮಿಯನ್ನು ಮೆತ್ತಗಾಗುವವರೆಗೆ ನೆನೆಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಹಾಲು, ಸಕ್ಕರೆ ಸೇರಿಸಿ ಇಪ್ಪತ್ತು ನಿಮಿಷಗಳ ಕಾಲ ಬೇಯಿಸಿ. ಕೆಳಗಿಳಿಸಿ ಏಲಕ್ಕಿ ಪುಡಿ ಬೆರೆಸಿ ಮಿಶ್ರ ಮಾಡಿ. ಸರ್ವ್ ಮಾಡುವಾಗ ಸ್ಟೀಲ್ ಲೋಟ ಬೇಡ. ಶೋಕೇಸಿನಲ್ಲಿರುವ ಒಳ್ಳೆ ಗಾಜಿನ ಲೋಟಗಳನ್ನು ಹೊರಗೆ ತೆಗೆಯಿರಿ.
- ನೀಲು ಬಸವಣ್ಣ ಹಿರೇಮಠ, ದಾಂಡೇಲಿ



Click it and Unblock the Notifications
