Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಲ್ವಾ ರುಚಿಯಾಗಬೇಕು ಅಲ್ವಾ? ಹೀಗೆ ಮಾಡಿ
Sweets
oi-Sumalatha
By Sumalatha

ಹಲ್ವಾಗೆ ಬೇಕಾಗುವ ಪದಾರ್ಥಗಳು:
* 1 ಕಪ್ ತುರಿದ ಕ್ಯಾರೆಟ್
* 1/2 ಕಪ್ ತುರಿದ ಬಿಳಿ ಕುಂಬಳಕಾಯಿ
* 1/4 ಕಪ್ ಗೋಡಂಬಿ
* 1/4 ಬಾದಾಮಿ
* 1/2 ಕಪ್ ತೆಂಗಿನ ತುರಿ
* 1 ಪೀಸ್ ಚೀಸ್
* 2 ಕಪ್ ಗಟ್ಟಿಗೊಳಿಸಿದ ಹಾಲು
* 1 ಕಪ್ ಸಕ್ಕರೆ
* 1/2 ಕಪ್ ತುಪ್ಪ
* ಸ್ವಲ್ಪ ಕೇಸರಿ * ಸ್ವಲ್ಪ ದ್ರಾಕ್ಷಿ
ಕ್ಯಾರೆಟ್- ಕುಂಬಳಕಾಯಿ ಹಲ್ವಾ ಮಾಡುವ ವಿಧಾನ:
ಬಾಣಲೆಯಲ್ಲಿ ತುಪ್ಪ ಹಾಕಿಕೊಂಡು ಅದಕ್ಕೆ ಗೋಡಂಬಿ ಮತ್ತು ಬಾದಾಮಿಯನ್ನು ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಕೆಂಪಗಾಗುವವರೆಗೆ ಹುರಿಯಬೇಕು. ನಂತರ ಅದಕ್ಕೆ ತೆಂಗಿನ ತುರಿ, ಕ್ಯಾರೆಟ್ ಮತ್ತು ಕುಂಬಳಕಾಯಿ ತುರಿಯನ್ನು ಹಾಕಿ 20 ನಿಮಿಷ ಚೆನ್ನಾಗಿ ತಿರುಗಿಸಬೇಕು. ಇದೇ ಸಮಯದಲ್ಲಿ ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಅದು ಚೆನ್ನಾಗಿ ಕಾಯಿಸಿ ಅದಕ್ಕೆ ಚೀಸ್ ಬೆರೆಸಿ ಗಟ್ಟಿಯಾಗುವವರೆಗೂ ಕಾಯಿಸಬೇಕು.
ಈಗ ಕ್ಯಾರೆಟ್ ಮಿಶ್ರಣಕ್ಕೆ ಹಾಲನ್ನು ಹಾಕಿ ಸಕ್ಕರೆ ಮತ್ತು ಕೇಸರಿಯನ್ನು ಬೆರೆಸಿ 10 ನಿಮಿಷ ಸಣ್ಣ ಕಾವಿನಲ್ಲಿ ಬೇಯಿಸುತ್ತಾ ತಿರುಗಿಸಬೇಕು. ಕೊನೆಗೆ * ತುಪ್ಪ ಸವರಿಟ್ಟ ಬಾಣಲೆಗೆ ಈ ಮಿಶ್ರಣವನ್ನು ಹಾಕಿದರೆ, ಕ್ಯಾರೆಟ್-ಕುಂಬಳ ಹಲ್ವಾ ತಿನ್ನಲು ಸಿದ್ಧವಾಗಿದೆ.
Comments
English summary
Nutri Halwa Sweet Recipe | Carrot-Pumpkin Sweet Dish | ಕ್ಯಾರೆಟ್-ಕುಂಬಳಕಾಯಿ ಹಲ್ವಾ ರೆಸಿಪಿ
Story first published: Tuesday, September 20, 2011, 14:28 [IST]
Other articles published on Sep 20, 2011



Click it and Unblock the Notifications
