Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಲೆನಾಡು ಮತ್ತು ಕರಾವಳಿಯ ‘ಹಸಿ ಶುಂಠಿ ತಂಬ್ಳಿ’

ಹಸಿ ಶುಂಠಿ - ಸುಮಾರು ಒಂದು ಇಂಚು
ಕಾಳು ಮೆಣಸು - ಆರು ಕಾಳು
ಉದ್ದಿನ ಬೇಳೆ - 1/2 ಟೀ ಚಮಚ
ಹಸೀ ತೆಂಗಿನಕಾಯಿ ತುರಿ - ಒಂದು ಟೇಬಲ್ ಚಮಚ ತುಂಬಾ.
ಒಗ್ಗರಣೆಗೆ- ಕಾಲು ಟೀ ಚಮಚ ಸಾಸಿವೆ, ಕರಿಬೇವು ಹತ್ತು ಎಲೆ, ಒಣಮೆಣಸಿನ ಕಾಯಿ ಒಂದು ಮತ್ತು ಅಡುಗೆಯ ಎಣ್ಣೆ ಎರಡು ಟೀ ಚಮಚ ಹಾಗೂ,
ರುಚಿಗೆ ತಕ್ಕಷ್ಟು ಉಪ್ಪು.
ತಂಬ್ಳಿ ತಯಾರಿಕೆಯ ವಿಧಾನ :
ಹಸಿ ಶುಂಠಿಯನ್ನು ಅತೀ ಚಿಕ್ಕದಾಗಿ ಹೆಚ್ಚಿಕೊಳ್ಳಿ, ಸಣ್ಣಗೆ ತುರಿದರೂ ಆಗಬಹುದು. ಒಂದು ಚಿಕ್ಕ ಬಾಣಲೆಯಲ್ಲಿ ಒಂದು ಟೀ ಚಮಚ ಎಣ್ಣೆಯನ್ನು ಹಾಕಿ ಸಣ್ಣ ಉರಿಯಲ್ಲಿ ಬಿಸಿಮಾಡಿಕೊಳ್ಳಿ. ಈ ಬಿಸಿ ಎಣ್ಣೆಗೆ ತುರಿದ ಶುಂಠಿ, ಕಾಳು ಮೆಣಸು ಮತ್ತು ಉದ್ದಿನ ಬೇಳೆ ಇವನ್ನು ಹಾಕಿ ಸುಮಾರು ಒಂದು ನಿಮಿಷ ಹುರಿಯಿರಿ. ಒಲೆಯಿಂದ ಬಾಣಲೆಯನ್ನು ಇಳಿಸಿರಿ.
ಈ ಪದಾರ್ಥಗಳು ತಣಿದಮೇಲೆ, ಇವಕ್ಕೆ ತೆಂಗಿನ ಕಾಯಿತುರಿ ಮತ್ತು ಎರಡು ಟೀ ಚಮಚ ನೀರು ಸೇರಿಸಿ ಮಿಕ್ಸಿಯ ಚಟ್ನಿ ಜಾರ್‌ಗೆ ಹಾಕಿ ನುಣ್ಣನೆ ತಿರುವಿರಿ. ತಮ್ಮ ರುಚಿಗೆ ತಕ್ಕಂತೆ ಒಂದು ಕಪ್ ಮೊಸರು ಅಥವಾ ಕಡೆದ ಮಜ್ಜಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರಸಿಕೊಳ್ಳಿ. ಒಂದು ಚಮಚ ಎಣ್ಣೆಯಲ್ಲಿ ಸಾಸಿವೆ ಹಾಕಿ ಬಿಸಿಮಾಡಿ. ಸಾಸಿವೆ ಸಿಡಿಯಲು ಶುರುವಾದಾಗ ಒಣಮೆಣಸಿನ ಕಾಯಿಯ ಚೂರುಗಳನ್ನು ಮತ್ತು ಕರಿಬೇವಿನ ಎಲೆಗಳನ್ನು ಕಮ್ಮನೆ ಹುರಿದು ಮೇಲಿನ ಮಿಶ್ರಣಕ್ಕೆ ಒಗ್ಗರಣೆ ಹಾಕಿರಿ.
ಈಗ ‘ಹಸೀ ಶುಂಠಿ ತಂಬ್ಳಿ’ ಅಥವಾ ನಮ್ಮ ಮಲೆನಾಡಿನ ಭಾಷೆಯಲ್ಲಿ ‘ಶುಂಠಿಯ ಹಸೀವಳೆ’ ತಯಾರ್!
ಸರ್ವ ಋತುಗಳಲ್ಲೂ ಆಹಾರ ವ್ಯತ್ಯಾಸಗಳಿಂದ ಉಂಟಾಗುವ ಅಜೀರ್ಣದ ತೊಂದರೆಗಳಿಗೆ ಇದು ನಮ್ಮಲ್ಲಿಯ ಮನೆಮದ್ದು. ......... ಅಲ್ಲದೆ ಊಟಕ್ಕೂ ರುಚಿ.



Click it and Unblock the Notifications
