Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಾಕಶಾಲೆ: ರುಚಿಕರ ನೆಲಗಡಲೆ ಟಾಫಿ
ಬಡವರ ಬಾದಾಮಿ ನೆಲಗಡಲೆಯಲ್ಲಿ ಏನೆಲ್ಲಾ ಹೊಸ ಹೊಸ ರುಚಿಗಳನ್ನು ಮಾಡಬಹುದೋ ಹಾಗೆಯೇ ಇಲ್ಲೊಂದು ಹಳೆರುಚಿಯನ್ನು ಮಾಡಲಾಗಿದೆ. ಅದೇ ನೆಲಗಡಲೆ ಟಾಫಿ. ಇದನ್ನು ಟಾಫಿ ಎಂದು ಕರೆಯಲುನಿಮ್ಮ ಆಕ್ಷೇಪವೇನಾದರೂ ಇದ್ದರೆ ಮಿಠಾಯಿ ಅಥವಾ ಬರ್ಫಿ ಎಂದು ಕರೆಯಬಹುದು. ಹೆಸರಿನಲ್ಲೇನಿದೆ ಬಿಡಿ ನೆಲಗಡಲೆ ಟಾಫಿಯ ರುಚಿ ಮಾತ್ರ ಅದ್ಭುತ.
ಬೇಕಾಗುವ ಪದಾರ್ಥಗಳು
ಸಕ್ಕರೆ: 1¼ ಕಪ್ಪು
ಬೆಣ್ಣೆ: 1 ಟೇಬಲ್ ಚಮಚ
ಕಡಲೆ ಬೀಜ: 2 ಕಪ್ಪು
ಮಾಡುವ ವಿಧಾನ
ಕಡಲೆ ಬೀಜವನ್ನು ಹುರಿದು ಕುಟ್ಟಿ ತರಿತರಿಯಾಗಿ ಮಾಡಿಕೊಳ್ಳಬೇಕು. ಸಕ್ಕರೆ ಅಥವಾ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಬಾಣಲೆಯಲ್ಲಿ ಹಾಕಿಕೊಂಡು ಮಧ್ಯಮ ಗಾತ್ರದ ಉರಿಯಲ್ಲಿ ಬಿಸಿ ಮಾಡಬೇಕು. ಸಕ್ಕರೆ ಕರಗಿ ಪಾಕ ತಯಾರಾಗುತ್ತದೆ. 5 ನಿಮಿಷಗಳ ಕಾಲ ಹಾಗೇ ಕಲಕುತ್ತಿರಬೇಕು. ಪಾಕ ಉಂಡೆಪಾಕ ಆದ ನಂತರ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತದೆ.
ಈಗ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಕಲಕಬೇಕು. ನಂತರ ನೆಲಗಡಲೆ ಹಾಕಬೇಕು. ತುಪ್ಪ ಸವರಿದ ತಟ್ಟೆಗೆ ಇದಿಷ್ಟನ್ನು ಹರಡಬೇಕು. ತಣ್ಣಗಾದ ನಂತರ ಬಿಲ್ಲೆಗಳಾಗಿ ಬರುತ್ತದೆ. ಬಿಸಿಯಾಗಿರುವಾಗಲೇ ಉಂಡೆಗಳಾಗಿಯೂ ಮಾಡಿಕೊಳ್ಳಬಹುದು. ಮಧ್ಯಮ ಗಾತ್ರದ 2 ಡಜನ್ ಉಂಡೆಗಳನ್ನು ಮಾಡಿಕೊಳ್ಳಬಹುದು.
(ದಟ್ಸ್ಕನ್ನಡ ಪಾಕಶಾಲೆ)



Click it and Unblock the Notifications
