Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಜಹಂಗೀರ್ ಕ್ರೀಮ್ ಪೇಸ್ತ್ರಿ

* ಸೌಮ್ಯ ಶರ್ಮಾ, ಬೆಂಗಳೂರು
ಬೇಕಾಗುವ ಪದಾರ್ಥ :
6 ಅಥವಾ 7 ಜಹಂಗೀರು. ಅಷ್ಟೇ ಸಂಖ್ಯೆಯ ರೌಂಡ್ ಬಿಸ್ಕತ್ತು. ಕಾಲು ಕಪ್ ಸಿಹಿ ಕ್ರೀಂ, ಕಾಲು ಕಪ್ ಚಾಕಲೇಟ್ ಕ್ರೀಂ, ಒಂದು ಅರ್ಧ ಕಪ್ಪು ಬಿಸ್ಕತ್ತು ಮತ್ತು ಕೇಕ್ಗಳ ಚೂರು, 2 ಚಮಚದಷ್ಟು ಖೋವಾ.
ಮಾಡುವ ವಿಧಾನ:
ಮೊದಲು ಸಿಹಿ ಕ್ರೀಂ ಮತ್ತು ಚಾಕಲೇಟ್ ಕ್ರೀಂ ಅನ್ನು ಪ್ರತ್ಯೇಕವಾಗಿ ಚೆನ್ನಾಗಿ ಗೊಟಾಯಿಸಿ 1 ಗಂಟೆ ಕಾಲ ಫ್ರಿಜ್ನಲ್ಲಿಡಿ. ಆನಂತರ ಬಿಸ್ಕತ್ತು ಮತ್ತು ಕೇಕ್ ಚೂರಿಗೆ ಚಾಕ್ಲೇಟ್ ಕ್ರೀಂ ಬೆರೆಸಿಡಿ. ಸಾದಾ ಸಿಹಿ ಕ್ರೀಂ ಅನ್ನು ಕೋನ್ಗೆ ತುಂಬಿಸಿಡಿ (ಮೆಹಂದಿ ಹಾಕುವ ಕೋನ್ ಮಾದರಿ).
ಒಂದು ಅಗಲವಾದ ತಟ್ಟೆಯಲ್ಲಿ ಜಹಂಗೀರುಗಳನ್ನು ಜೋಡಿಸಿ. ಅವುಗಳ ಮೇಲೆ ಮಧ್ಯಕ್ಕೆ ಬರುವಂತೆ ಗುಂಡಾಕಾರದ ಬಿಸ್ಕತ್ತುಗಳನ್ನು ಇಡಿ. ಅದರ ಮೇಲೆ ಚೆಂದವಾಗಿ ಕಾಣುವಂತೆ ಚಾಕಲೇಟ್ ಕ್ರೀಂ-ಕೇಕ್ ಬಿಸ್ಕತ್ ಸೇರಿಸಿದ ಮಿಶ್ರಣ ಹರಡಿ. ಜಹಂಗೀರ್ ಸುತ್ತಲೂ ಸಿಹಿ ಕ್ರೀಂ ಹಾಕಿದ ಕೋನ್ನಿಂದ ಐಸಿಂಗ್ (ಚಿತ್ತಾರ) ಮಾಡಿ.
ಆನಂತರ ಎಲ್ಲ ಜಹಂಗೀರ್ಗಳ ಮೇಲೂ ಖೋವಾ ಹಾಕಿದರೆ. ಸುಂದರ ಹಾಗೂ ಸ್ವಾದಿಷ್ಟ ಪೇಸ್ಟ್ರೀ ರೆಡಿ.
ನಿರೀಕ್ಷಿಸಿ : ಯಾವುದೇ ಹಬ್ಬದಲ್ಲಿ ಮಾಡಬಹುದಾದ ಶೇಂಗಾ ಹೋಳಿಗೆ.



Click it and Unblock the Notifications
