Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾಳೆಹಣ್ಣಿನ ಚಾಕಲೇಟ್ ಚಿಪ್ಸ್ ಕೇಕ್ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
* 1 ಮೊಟ್ಟೆ
* 1/2 ಚಮಚ ಅಡುಗೆ ಸೋಡಾ
* 1 ಕಪ್ ಹಿಸುಕಿದ ಬಾಳೆಹಣ್ಣು
* 3/4 ಕಪ್ ಸಿಹಿ ಸ್ವಲ್ಪ ಕಡಿಮೆ ಇರುವ ಚಾಕಲೇಟ್ ಚಿಪ್ಸ್
* 1/2 ಕಪ್ ಕರಗಿಸಿದ ಬೆಣ್ಣೆ
* 1/4 ಚಮಚ ಉಪ್ಪು
* 1/4 ಕಪ್ ಸಕ್ಕರೆ
* 1/4 ಹಾಲು
ತಯಾರಿಸುವ ವಿಧಾನ:
1. ದೊಡ್ಡ ಬಟ್ಟಲಿನಲ್ಲಿ ಮೈದಾ, ಸಕ್ಕರೆ, ಉಪ್ಪು ಮತ್ತು ಅಡುಗೆ ಸೋಡಾ, ಹಾಲು ಹಾಕಿ ಮಿಶ್ರ ಮಾಡಬೇಕು.
2. ಮತ್ತೊಂದು ಬಟ್ಟಲಿನಲ್ಲಿ ಕರಗಿಸಿದ ಬೆಣ್ಣೆ, ಮೊಟ್ಟೆ ಮತ್ತು ಹಿಸುಕಿದ ಬಾಳೆಹಣ್ಣು ಹಾಕಿ ಮಿಶ್ರ ಮಾಡಬೇಕು.
3. ಈಗ ಬಾಳೆಹಣ್ಣಿನ ಮಿಶ್ರಣವನ್ನು ಮೈದಾ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಬೇಕು.
4. ಈಗ ಚಾಕಲೇಟ್ ಚಿಪ್ಸ್ ಸೇರಿಸಬೇಕು.
5. ಮೈಕ್ರೋವೇವ್ ಅನ್ನು 350 ಡಿಗ್ರಿ F (ಫ್ಯಾರನ್ಹೀಟ್)ನಿಂದ 175 ಡಿಗ್ರಿ Cಗೆ ಮುಂಚಿತವಾಗಿ ಬಿಸಿಮಾಡಬೇಕು.
6. ಈಗ ಕೇಕ್ ಮಿಶ್ರಣವನ್ನು ಬೇಯಿಸುವ ಪಾತ್ರೆಗೆ ಸ್ವಲ್ಪ ಬೆಣ್ಣೆ ಸವರಿ ಅದರಲ್ಲಿ ಹಾಕಿ 25-30 ನಿಮಿಷ ಬೇಯಿಸಬೇಕು. ಕೇಕ್ ಪಾತ್ರೆಯಿಂದ ಸುಲಭವಾಗಿ ಬರುವಂತೆ ಬೇಯಿಸಬೇಕು.
7. ಕೇಕ್ ಬೆಂದ ಮೇಲೆ ಆರಲು ಬಿಡಬೇಕು. ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ರುಚಿಕರವಾದ ಬಾಳೆ ಹಣ್ಣಿನ ಕೇಕ್ ರೆಡಿ.



Click it and Unblock the Notifications
