Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಸಿಗೆ ಸ್ಪೆಷಲ್ ಡಿಲೈಟ್ : ಸಪೋಟಾ ಐಸ್ ಕ್ರೀಂ

ಸೋ, ಮತ್ತೇಕೆ ತಡ. ಮಕ್ಕಳ ಅಚ್ಚುಮೆಚ್ಚಿನ, ಹಿರಿಯರೂ ಇಷ್ಟಪಡುವ ರುಚಿಕಟ್ಟಾದ ಚಿಕ್ಕು ಅಥವಾ ಸಪೋಟಾ ಐಸ್ ಕ್ರೀಂನ್ನು ಮನೆಯಲ್ಲೇ ತಯಾರಿಸಿ. ಇದರಲ್ಲಿ ಪ್ರಿಸರ್ವೆಟೀವ್ಸ್ ಇಲ್ಲದಿರುವುದರಿಂದ ಅಂಗಡಿಯಿಂದ ತಂಡ ಐಸ್ ಕ್ರೀಂಗಿಂತ ಎಷ್ಟೇ ಪಾಲು ಉತ್ತಮ. ಕ್ಯಾಲರಿ ಕಡಿಮೆ ಮಾಡಬೇಕೆಂದರೆ ಕೊಬ್ಬಿನಂಶ ಕಡಿಮೆಯಿರುವ ಹಾಲನ್ನು ಬಳಸಿರಿ. ಆರೋಗ್ಯದ ದೃಷ್ಟಿಯಿಂದಲೂ ಸಪೋಟಾ ಅತ್ಯುತ್ತಮ ಹಣ್ಣು. ಸಪೋಟಾ ಐಸ್ ಕ್ರೀಂನ್ನು ಮನೆಯಲ್ಲಿಯೇ ಮಾಡುವ ವಿಧಾನ ತಿಳಿಯೋಣ ಬನ್ನಿ.
ಬೇಕಾಗುವ ಪದಾರ್ಥಗಳು
ಸಪೋಟಾ ಹಣ್ಣುಗಳು 4
ಸಕ್ಕರೆ ಅರ್ಧ ಕಪ್
ಕೆನೆರಹಿತ ಹಾಲು 2 ಕಪ್
ಕ್ರೀಂ 1 ಕಪ್
ಜಿಲ್ಯಾಟಿನ್ ಪೌಡರ್ 1 ಚಮಚ
ಮಿಲ್ಕ್ ಮೇಡ್ 1 ಕಪ್
ತಯಾರಿಸುವ ವಿಧಾನ
ಚಿಕ್ಕುವನ್ನು ಚೆನ್ನಾಗಿ ತೊಳೆದು ಚಿಪ್ಪೆಯನ್ನು ಸುಲಿದಿಟ್ಟು ಹೋಳುಗನ್ನಾಗಿ ಮಾಡಿಕೊಳ್ಳಿ. ನಂತರ ಜಿಲ್ಯಾಟಿನ್ ಪೌಡರನ್ನು ನೀರಿನಲ್ಲಿ ಮಿಶ್ರಣ ಮಾಡಿ, ಅದಕ್ಕೆ ಚಿಕ್ಕು ಮತ್ತು ಸಕ್ಕರೆ ಸೇರಿಸಿ ಕುದಿಯಲು ಇಡಿ.
ಈ ಮಿಶ್ರಣ ಆರಿದ ಮೇಲೆ ಅದಕ್ಕೆ ಹಾಲು, ಮಿಲ್ಕ್ ಮೇಡ್, ಕ್ರೀಂನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿರಿ. ಅದನ್ನು ಐಸ್ ಕ್ರೀಂ ಕಪ್ ಗಳಲ್ಲಿ ಹಾಕಿ ರೆಫ್ರಿರೇಟರಿನ ಫ್ರೀಜರ್ ನಲ್ಲಿ ಐದಾರು ತಾಸು ಅತ್ಯಂತ ಕಡಿಮೆ ಉಷ್ಣಾಂಶದಲ್ಲಿ ಇಡಿ.
ತಾಜಾ ಇರುವಾಗಲೇ ಸಪೋಟಾ ಐಸ್ ಕ್ರೀಂನ್ನು ಮಕ್ಕಳಿಗೆ ನೀಡಿ. ನೀವು ಕೂಡ ತಿನ್ನಲು ಮರೆಯಬೇಡಿ.



Click it and Unblock the Notifications
