Latest Updates
-
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ! -
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ? -
ಮಳೆಗಾಲದ ಬೆಳಿಗ್ಗೆ ಆಲಸ್ಯವೇ? ಬೆಂಗಳೂರಿನಲ್ಲಿ ಫಿಟ್ ಆಗಿರಲು 20 ನಿಮಿಷಗಳ ಸರಳ ವರ್ಕೌಟ್ ಇಲ್ಲಿದೆ! -
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ -
ಸಪ್ಲಿಮೆಂಟ್ ಖರೀದಿಸುವ ಮುನ್ನ ಎಚ್ಚರ! ಮಹಾರಾಷ್ಟ್ರ FDA ಕಠಿಣ ನಿಯಮ: ಸುಳ್ಳು ಜಾಹೀರಾತುಗಳಿಗೆ ಬ್ರೇಕ್
ಮಕ್ಕಳು ದಿನವಿಡೀ ಉಲ್ಲಾಸದಾಯಕವಾಗಿರಲು ನೀಡಿ ಈ ಸ್ಟ್ರಾಬೆರಿ ಮಿಲ್ಕ್ ಶೇಕ್
ಮಕ್ಕಳು ಪ್ರತಿದಿನ ವಿಭಿನ್ನವಾದುದನ್ನೇ ಕೇಳುತ್ತಾರೆ. ಅದರಲ್ಲೂ ಆಹಾರದ ವಿಚಾರದಲ್ಲಿ ವೈಶಿಷ್ಟ್ಯತೆ ಇಲ್ಲದೇ ಹೋದಲ್ಲಿ, ಅದು ಅವರ ಹೊಟ್ಟೆ ಸೇರುವುದು ಬಹಳ ಕಷ್ಟ. ಆದರೆ, ಬೆಳಗ್ಗಿನ ತಿಂಡಿಗೆ ವೈರೈಟಿ ಜೊತೆಗೆ ಆರೋಗ್ಯಕರವಾಗಿರುವುದನ್ನು ನೀಡುವುದು ಪೋಷಕರಿಗೆ ಸವಾಲೇ ಸರಿ. ಅದಕ್ಕಾಗಿ ನಾವಿಂದು ಮಕ್ಕಳಿಗೆ ಇಷ್ಟವಾಗುವ ಜೊತಗೆ ಅವರನ್ನು ದಿನವಿಡೀ ಉಲ್ಲಾಸದಾಯಕವಾಗಿ ಇಡುವ ವಿಶೇಷ ಪಾನೀಯವೊಂದನ್ನು ತಿಳಿಸಿಕೊಡಲಿದ್ದೇವೆ.

ಅದೇ ಸ್ಟ್ರಾಬೆರಿ ಮಿಲ್ಕ್ ಶೇಕ್. ಯಾವುದೇ ಕಿಡ್ಸ್ ಪಾರ್ಟಿ, ಹುಟ್ಟುಹಬ್ಬದ ಸಂತೋಷಕೂಟ ಅಥವಾ ಯಾವುದೇ ರೀತಿಯ ವಿಶೇಷ ಸಂದರ್ಭಕ್ಕಾಗಿ ಇದು ಉತ್ತಮ ಆಯ್ಕೆಯಾಗಿದೆ. ಯಾವುದೇ ವಿಶೇಷ ಸಂದರ್ಭವಿಲ್ಲದಿದ್ದರೂ ಇದನ್ನು ಕುಡಿಯಬಹುದು. ಈ ಪಾನೀಯವನ್ನು ಸೇವಿಸುವುದರಿಂದ ನಿಮಗೆ ಸಾಕಷ್ಟು ಶಕ್ತಿ ಸಿಗುವುದು, ಜೊತೆಗೆ ಬೇಸಿಗೆಯಲ್ಲಿ ಉಲ್ಲಾಸವನ್ನು ಅನುಭವಿಸಲು ಸಹಾಯ ಮಾಡುತ್ತದೆ.
ದಿನವಿಡೀ ಉಲ್ಲಾಸದಾಯಕವಾಗಿರಲು ಸ್ಟ್ರಾಬೆರಿ ಮಿಲ್ಕ್ ಶೇಕ್ ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ನೀಡಲಾಗಿದೆ:
Recipe By: Shreeraksha
Recipe Type: Snacks
Serves: 1
-
ಬೇಕಾಗುವ ಪದಾರ್ಥಗಳು:
1 ಕಪ್ ಸ್ಟ್ರಾಬೆರಿ
1 ಕಪ್ ತಣ್ಣನೆಯ ಹಾಲು
5 ಚಮಚ ಸಕ್ಕರೆ
-
ತಯಾರಿಸುವ ವಿಧಾನ:
ಮೊದಲು ಮಿಕ್ಸರ್ ಗ್ರೈಂಡರ್ನ ಜಾರ್ ತೆಗೆದುಕೊಂಡು ತಾಜಾ ಸ್ಟ್ರಾಬೆರಿಗಳನ್ನು ಜಾರ್ಗೆ ಹಾಕಿ. ಇದಕ್ಕೆ ಚಮಚ ಸಕ್ಕರೆಯನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ.
ನಂತರ, ಸ್ಟ್ರಾಬೆರಿಯಿಂದ ತಯಾರಾದ ಮಿಶ್ರಣವನ್ನು ಒಂದು ಗ್ಲಾಸಿಗೆ ಹಾಕಿ, ಈಗ ಮೇಲಿನಿಂದ ತಣ್ಣನೆಯ ಹಾಲನ್ನು ಸುರಿಯಿರಿ.
ಚಮಚದ ಸಹಾಯದಿಂದ ಈ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಇಲ್ಲಿ ನೀವು ಹಾಲು ಸೇರಿಸಿದ ತಕ್ಷಣ ಸ್ಟ್ರಾಬೆರಿ ಮತ್ತು ಹಾಲನ್ನು ಚೆನ್ನಾಗಿ ಮಿಶ್ರಣ ಮಾಡುವುದು ಬಹಳ ಮುಖ್ಯ.
ಈಗ ಸ್ಟ್ರಾಬೆರಿ ಮಿಲ್ಕ್ ಶೇಕ್ ಸಿದ್ಧವಾಗಿದ್ದು, ಇದನ್ನು ಸ್ಟ್ರಾಬೆರಿ ತುಂಡುಗಳಿಂದ ಅಲಂಕರಿಸಿ.
ಬೇಕಿದ್ದಲ್ಲಿ ಇದಕ್ಕೆ ಒಂದು ಚಮಚ ವೆನಿಲ್ಲಾ ಐಸ್ ಕ್ರೀಮ್ ಮತ್ತು ಸ್ಟ್ರಾಬೆರಿ ಐಸ್ ಕ್ರೀಂ ಅನ್ನು ಕೂಡ ಸೇರಿಸಬಹುದು. ನಿಮ್ಮ ಆಯ್ಕೆಯ ಐಸ್ ಕ್ರೀಂ ಫ್ಲೇವರ್ ಸೇರಿಸಿದ ನಂತರ, ಈ ಪಾನೀಯವನ್ನು ಚೆನ್ನಾಗಿ ಅಲ್ಲಾಡಿಸಬೇಕು.
- People - 2
- ಕ್ಯಾಲೋರಿ - 282kcl
- ಪ್ರೋಟೀನ್ - 6.1g
- ಕಾರ್ಬೋಹೈಡ್ರೇಟ್ - 25.6g
- ಫೈಬರ್ - 1.3g



Click it and Unblock the Notifications
