For Quick Alerts
ALLOW NOTIFICATIONS  
For Daily Alerts

ಮಂಗಳೂರು ಶೈಲಿಯ ಸೌತೆಕಾಯಿ ಪಲ್ಯ

Posted By:
|

ಸೌತೆಕಾಯಿ ಪಲ್ಯವು (ಮಂಗಳೂರು ಸೌತೆಕಾಯಿ ಪಲ್ಯ / ಸಬ್ಜಿ) ಕರ್ನಾಟಕದ ಕರಾವಳಿ ಭಾಗದ ಬಹುಪಾಲು ಜನರ ಅವಿಭಾಜ್ಯ ಅಂಗವಾಗಿದೆ, ಏಕೆಂದರೆ ಅವರು ತಮ್ಮ ಅಡುಗೆಯಲ್ಲಿ ಸಾಕಷ್ಟು ಮಂಗಳೂರು ಸೌತೆಕಾಯಿಯನ್ನು ಬಳಸುತ್ತಾರೆ. ಒಣ ಖಾದ್ಯವನ್ನು ಮುಖ್ಯವಾಗಿ ತಮ್ಮ ಸ್ಥಳೀಯ ಭಾಷೆಯಲ್ಲಿ ಪಲ್ಯ ಎಂದು ಕರೆಯಲಾಗುತ್ತದೆ. ಇದು ಕರಾವಳಿ ಜನರ ಅಚ್ಚುಮೆಚ್ಚ ಖಾದ್ಯವಾಗಿದೆ. ನಿರ್ದಿಷ್ಟ ಋತುಮಾನದಲ್ಲಿ ಬೆಳೆಯುವ ಈ ಸೌತೆಕಾಯಿಯನ್ನು ಮಳೆಗಾಲಕ್ಕಾಗಿ ವಿಭಿನ್ನ ರೀತಿಯಲ್ಲಿ ಶೇಖರಣೆ ಮಾಡಿ ಇಟ್ಟಿರುತ್ತಾರೆ. ಅದನ್ನು ನೊಡುವುದೇ ಒಂದು ಚಂದ. ಇಂತಹ ಸೌತೆಕಾಯಿಯನ್ನು ಸ್ವಲ್ಪ ದೇಶಿ ಅಂದರೆ ತಾವೇ ತಯಾರಿಸಿದ ಮಸಾಲೆಯೊಂದಿಗೆ ಮಿಶ್ರಣ ಮಾಡಿ ಪಲ್ಯವನ್ನು ತಯಾರಿಸಲಾಗುತ್ತದೆ. ಇದನ್ನು ಸುಲಭವಾಗಿ ಹೇಗೆ ತಯಾರಿಸುವುದು ಎಂಬುದನ್ನು ಈ ಲೇಖನದಲ್ಲಿ ಹೇಳಿದ್ದೇವೆ, ನೀವು ಮಾಡಿ ಸವಿಯಿರಿ.

Southekayi Palya Recipe - Mangalore Cucumber Palya
ಮಂಗಳೂರು ಶೈಲಿಯ ಸೌತೆಕಾಯಿ ಪಲ್ಯ
ಮಂಗಳೂರು ಶೈಲಿಯ ಸೌತೆಕಾಯಿ ಪಲ್ಯ
Prep Time
10 Mins
Cook Time
20M
Total Time
30 Mins

Recipe By: Shreeraksha

Recipe Type: Vegetarian

Serves: 2

Ingredients
  • ಬೇಕಾಗುವ ಪದಾರ್ಥಗಳು

    1 ಕಪ್ ಮಂಗಳೂರು ಸೌತೆಕಾಯಿ, ಸಿಪ್ಪೆ ಸಮೇತ ಸಣ್ಣ ಗಾತ್ರಕ್ಕೆ ಕತ್ತರಿಸಿ

    1/2 ಚಮಚ ಸಾಸಿವೆ

    1 ಚಮಚ ಉದ್ದಿನಬೇಳೆ

    1 ಈರುಳ್ಳಿ , ನುಣ್ಣಗೆ ಕತ್ತರಿಸಿ

    4 ಲವಂಗ ಬೆಳ್ಳುಳ್ಳಿ , ನುಣ್ಣಗೆ ಕತ್ತರಿಸಿ

    2 ಕರಿಬೇವಿನ ಎಲೆಗಳು, ನುಣ್ಣಗೆ ಕತ್ತರಿಸಿ

    1/2 ಚಮಚ ಅರಿಶಿನ ಪುಡಿ

    ಉಪ್ಪು , ರುಚಿಗೆ

    1/4 ಕಪ್ ತೆಂಗಿನಕಾಯಿ

    2 ಒಣ ಕೆಂಪು ಮೆಣಸಿನಕಾಯಿಗಳು

    1 ಚಮಚ ಜೀರಿಗೆ

Red Rice Kanda Poha
How to Prepare
  • ಸೌತೆಕಾಯಿ ಪಲ್ಯ ತಯಾರಿಸುವುದು ಹೇಗೆ?

    • ತೆಂಗಿನಕಾಯಿ, ಜೀರಿಗೆ ಮತ್ತು ಒಣ ಮೆಣಸಿನಕಾಯಿಯನ್ನು ಒಣ ಮಿಶ್ರಣಕ್ಕೆ ಮಿಕ್ಸರ್ ಗ್ರೈಂಡರ್ ಬಳಸಿ ಪುಡಿಮಾಡಿ. ಇದಕ್ಕೆ ಯಾವುದೇ ನೀರು ಸೇರಿಸಬೇಡಿ. ಇದು ಒಣ ಮಿಶ್ರಣವಾಗಿರಬೇಕು. ಇದನ್ನು ಪಕ್ಕಕ್ಕೆ ಇರಿಸಿ.
    • ಮೀಡಿಯಮ್ ಫ್ಲೇಮ್ ನಲ್ಲಿ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ, ಉದ್ದಿನಬೇಳೆ ಸೇರಿಸಿ. ಇವುಗಳು ಕಂದು ಬಣ್ಣ ಬರುವವರೆಗೆ ಹುರಿಯಿರಿ.
    • ಇದಕ್ಕೆ ಕತ್ತರಿಸಿದ ಬೆಳ್ಳುಳ್ಳಿ, ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಈರುಳ್ಳಿ ಮೃದುವಾಗುವವರೆಗೆ ಹುರಿಯಿರಿ.
    • ನಂತರ ಕತ್ತರಿಸಿದ ಮಂಗಳೂರು ಸೌತೆಕಾಯಿ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ತೆಂಗಿನಕಾಯಿ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಕಲಿಸಿ.
    • 2 ರಿಂದ 3 ಚಮಚ ನೀರನ್ನು ಸಿಂಪಡಿಸಿ, ಪ್ಯಾನ್ ಅನ್ನು ಮುಚ್ಚಿ ಮತ್ತು ಸೌತೆಕಾಯಿ ಪಲ್ಯ ಮೃದುವಾಗುವವರೆಗೆ ಬೇಯಿಸಿ.
Instructions
  • ಟಿಪ್ಪಣಿ: ಇದನ್ನು ಅನ್ನ ರಸಂ ಹಾಗೂ, ದೋಸೆ, ಫುಲ್ಕಾ, ಚಪಾತಿಯೊಂದಿಗೆ ಸವಿಯಬಹುದು.
Nutritional Information
  • People - 2
  • ಫೈಬರ್ - ೮.೨
  • ಕಾರ್ಬೋಹೈಡ್ರೇಟ್ - ೧೩.೨೯
  • ಪ್ರೋಟೀನ್ - ೩.೩೧
  • ಕೊಬ್ಬು - ೧೩.೩೭
[ 4.5 of 5 - 16 Users]
Story first published: Tuesday, March 2, 2021, 8:44 [IST]
X
Desktop Bottom Promotion