Just In
- 43 min ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 9 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 10 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 11 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- Movies Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೆಸಿಪಿ: ದೇಹದ ಬೊಜ್ಜು ಕರಗಿಸುವ ಸೀಗೆಸೊಪ್ಪಿನ ಸಾರು
ಸೀಗೆಕಾಯಿಯ ಹೆಸರನ್ನು ಹೆಚ್ಚಿನವರು ಕೇಳಿರುತ್ತೀರಿ. ಸೀಗೆಕಾಯಿಯಿಂದ
ತಯಾರಿಸಿದ ಸೋಪು ಸ್ನಾನಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಅನೇಕ
ಸೋಪು ಮತ್ತು ಶಾಂಪೂ ತಯಾರಿಕಾ ಕಂಪೆನಿಗಳು ಸೀಗೆಕಾಯಿಯನ್ನು ಬಳಸುತ್ತಿವೆ.
ಸೀಗೆಕಾಯಿ ಮತ್ತು ಅಂಟುವಾಳದ ಕಾಯಿಯ ಪೌಡರ್ ಬಳಸಿ ಅನಾದಿ ಕಾಲದ ಮಂದಿ ಸ್ನಾನ
ಮಾಡುತ್ತಿದ್ದರು. ಇದು ನೊರೆಯನ್ನು ಉಂಟು ಮಾಡುವ ಗುಣವನ್ನು ಹೊಂದಿದ್ದು ಚರ್ಮದ
ಸ್ವಚ್ಛತೆಗೆ ಬಹಳ ಪ್ರಯೋಜನಕಾರಿಯಾಗಿರುವ ಕಾಯಿಯಾಗಿದೆ.
ಸೀಗೆಕಾಯಿಯನ್ನು ಇಂಗ್ಲೀಷಿನಲ್ಲಿ ಹರ್ಬಾರಿಯಂ ಎಂದು ಕರೆಯುತ್ತಾರೆ. ಶೀಕಾ ಎಂದರೆ
ಕೂದಲು ಮತ್ತು ಕಾಯಿ ಅಂದರೆ ಹಣ್ಣು ಎಂದರ್ಥ. ಅಕಾಶಿಯಾ ಕಾನ್ಚಿನ್ನಾ(Acacia
concinna) ಎಂದು ಕೂಡ ಕರೆಯಲಾಗುತ್ತದೆ. ಏಷ್ಯಾದ ಹಲವು ಬೆಟ್ಟ ಪ್ರದೇಶಗಳಲ್ಲಿ
ನೀವಿದನ್ನು ಕಾಣಬಹುದು. ಅದರಲ್ಲೂ ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಸೀಗೆಕಾಯಿಯ
ಬಳ್ಳಿ ಹೆಚ್ಚಾಗಿ ಬೆಳೆಯುತ್ತದೆ.
ಹಾಗಂತ ಕೇವಲ ಕಾಯಿಯಿಂದ ಮಾತ್ರ ಪ್ರಯೋಜನ ಅಂದುಕೊಳ್ಳಬೇಡಿ. ಸೀಗೆಬಳ್ಳಿಯ
ಸೊಪ್ಪುಗಳು ಕೂಡ ಆರೋಗ್ಯಕ್ಕೆ ಹಲವು ಲಾಭಗಳನ್ನು ಮಾಡುತ್ತದೆ. ಹುಣಸೆ ಮರದ
ಸೊಪ್ಪಿನ ರೀತಿಯಲ್ಲೇ ಕಾಣುವ ಈ ಸೊಪ್ಪಿನಿಂದ ಖಾಧ್ಯಗಳನ್ನು ಕೂಡ
ತಯಾರಿಸಬಹುದು.
ನಿಮ್ಮ ಡಯಟ್ ನಲ್ಲಿ ಸೀಗೆಸೊಪ್ಪನ್ನು ಬಳಕೆ ಮಾಡುವುದರಿಂದಾಗಿ ಅನೇಕ ಆರೋಗ್ಯ
ಸಮಸ್ಯೆಗಳು ದೂರವಾಗುತ್ತದೆ. ತೂಕ ಇಳಿಸಲು, ದೇಹದ ಕೊಬ್ಬು ಕರಗಿಸಲು, ದೇಹಕ್ಕೆ
ಶಕ್ತಿ ನೀಡಲು ಸೇರಿದಂತೆ ಹಲವು ಕಾರಣಕ್ಕಾಗಿ ಆಯುರ್ವೇದದ ಹಲವು ಪ್ರಾಡಕ್ಟ್
ಗಳಲ್ಲಿ ಸೀಗೇಕಾಯಿಯ ಎಲೆಯನ್ನು ಬಳಸುತ್ತಾರೆ. ನಾವಿಲ್ಲಿ ಸೀಗೆಸೊಪ್ಪಿನಿಂದ
ರುಚಿರುಚಿಯಾದ ಸಾರು ತಯಾರಿಸುವುದು ಹೇಗೆ ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
ಮುಂದೆ ಓದಿ.
Recipe By: Sushma chatra
Recipe Type: Veg
Serves: 4
-
ಸೀಗೆಸೊಪ್ಪಿನ ಸಾರು ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು
ಸೀಗೆಸೊಪ್ಪು - ಒಂದು ಮುಷ್ಠಿ
ಉಪ್ಪು - ರುಚಿಗೆ ತಕ್ಕಷ್ಟು
ವಾಟೆಪುಡಿ - ಒಂದು ಚಿಟಿಕೆ ( ನೀವು ಹುಣಸೆ ರಸ, ಮಾವಿನ ಪುಡಿ ಅಥವಾ ಇತರೆ ಯಾವುದೇ ಹುಳಿ ಅಂಶವನ್ನು ಬಳಕೆ ಮಾಡಬಹುದು)
ಕಾಳುಮೆಣಸಿನ ಪುಡಿ - ಅರ್ಧ ಚಮಚ
ಜೀರಿಗೆ ಪುಡಿ - ಅರ್ಧ ಚಮಚ
ಬೆಲ್ಲ - ರುಚಿಗೆ ತಕ್ಕಷ್ಟು
-
ಮಾಡುವ ವಿಧಾನ
• ಸೀಗೆಸೊಪ್ಪನ್ನು ಸ್ವಲ್ಪ ಬಾಡುವವರೆಗೆ ಬಾಣಲೆಗೆ ಹಾಕಿ ಹುರಿದುಕೊಳ್ಳಿ
• ಹುರಿದ ಸೊಪ್ಪಿಗೆ ಉಪ್ಪು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ವಾಟೆಪುಡಿ ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.
• ಮಿಕ್ಸಿ ಮಾಡಿದ ಮಿಶ್ರಣಕ್ಕೆ ನೀರು ಸೇರಿಸಿ ಐದು ನಿಮಿಷ ಕುದಿಸಿ.
• ನಂತರ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಮತ್ತೊಂದೆರಡು ಕುದಿ ಬರುವವರೆಗೆ ಕಾಯಿಸಿದರೆ ಸೀಗೆಸೊಪ್ಪಿನ ಸಾರು ಸವಿಯಲು ಸಿದ್ಧ.
• ಅನ್ನದೊಂದಿಗೆ ಸಾರನ್ನು ಹೊಕಿಕೊಂಡು ಮೇಲಿನಿಂದ ಒಂದು ಚಮಚ ತುಪ್ಪ ಹಾಕಿ ಕಲಸಿಕೊಂಡು ಸೇವಿಸಲು ಬಲು ರುಚಿಯಾಗಿರುತ್ತದೆ.
- ಆರೋಗ್ಯಕ್ಕೆ ಪ್ರಯೋಜನಗಳು • ಸೀಗೆ ಸೊಪ್ಪು ಹೊಟ್ಟೆ ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅನಾವಶ್ಯಕ ಬೊಜ್ಜು ಹೊಟ್ಟೆಯಲ್ಲಿ ಶೇಖರಣೆಯಾಗಿದ್ದರೆ ಅದನ್ನು ಹೊರಹಾಕುವ ತಾಕತ್ತನ್ನು ಇದು ಹೊಂದಿದೆ. • ದೇಹದ ತೂಕ ಇಳಿಸಬೇಕು ಎಂದುಕೊಂಡಿರುವವರು ಈ ಸಾರನ್ನು ವಾರಕ್ಕೆ ಒಮ್ಮೆ ಬಳಕೆ ಮಾಡಬಹುದು. • ಬಾಣಂತಿಯರಿಗೆ ಈ ಸಾರು ಮಾಡುವ ರೂಢಿಯಿದೆ. • ನಿದ್ದೆಯ ಸಮಸ್ಯೆ ಎದುರಿಸುತ್ತಿರುವವರು ಈ ಸಾರು ಸೇವಿಸುವುದರಿಂದ ತಮ್ಮ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. • ಚರ್ಮದ ಕಾಂತಿ ಹೆಚ್ಚಿಸುವ ಗುಣವನ್ನು ಈ ಸೊಪ್ಪುಗಳು ಹೊಂದಿವೆ.
ಮಾಡುವ ವಿಧಾನ
• ಸೀಗೆಸೊಪ್ಪನ್ನು ಸ್ವಲ್ಪ
ಬಾಡುವವರೆಗೆ ಬಾಣಲೆಗೆ ಹಾಕಿ ಹುರಿದುಕೊಳ್ಳಿ
• ಹುರಿದ ಸೊಪ್ಪಿಗೆ ಉಪ್ಪು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ವಾಟೆಪುಡಿ ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.
• ಮಿಕ್ಸಿ ಮಾಡಿದ ಮಿಶ್ರಣಕ್ಕೆ ನೀರು ಸೇರಿಸಿ ಐದು ನಿಮಿಷ ಕುದಿಸಿ.
• ನಂತರ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಮತ್ತೊಂದೆರಡು ಕುದಿ ಬರುವವರೆಗೆ ಕಾಯಿಸಿದರೆ ಸೀಗೆಸೊಪ್ಪಿನ ಸಾರು ಸವಿಯಲು ಸಿದ್ಧ.
• ಅನ್ನದೊಂದಿಗೆ ಸಾರನ್ನು ಹೊಕಿಕೊಂಡು ಮೇಲಿನಿಂದ ಒಂದು ಚಮಚ ತುಪ್ಪ ಹಾಕಿ ಕಲಸಿಕೊಂಡು ಸೇವಿಸಲು ಬಲು ರುಚಿಯಾಗಿರುತ್ತದೆ.