Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ರಿಸ್ಮಸ್‌ಗೆ ನಾಲಿಗೆ ರುಚಿ ತಣಿಸುವ ರುಚಿಕರ ತಿನಿಸು
ಕ್ರಿಸ್ಮಸ್ ಹಬ್ಬ ಎಂದರೆ ರುಚಿಕರವಾದ ತಿಂಡಿಗಳನ್ನು ಮಾಡಿ ರುಚಿ ನೋಡುವ ಸಮಯ. ನಿಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ನೀವು ಈ ತಿಂಡಿಗಳನ್ನು ರುಚಿನೋಡಬಹುದು.
ಇಂದು ನಾವು ಕೆಲವು ರುಚಿಕರವಾದ ಕ್ರಿಸ್ಮಸ್ ಸ್ನಾಕ್ಸ್ ಗಳ ಬಗ್ಗೆ ವಿವರಗಳನ್ನು ನೀಡುತ್ತಿದ್ದೇವೆ. ಇದು ನಿಮ್ಮ ನಾಲಿಗೆಯ ರುಚಿಯನ್ನು ತಣಿಸುವುದಷ್ಟೇ ಅಲ್ಲದೆ ಕ್ರಿಸ್ಮಸ್ ಪಾರ್ಟಿಗೆ ವಿಶೇಷ ಕಳೆ ತಂದುಕೊಡುತ್ತದೆ.
ಇವುಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಈ ಬಾರಿಯ ಕ್ರಿಸ್ಮಸ್ ಹಬ್ಬದಲ್ಲಿ ಮಾಡಿ ನೋಡಿ.
ರುಚಿಕರವಾದ ಕ್ರಿಸ್ಮಸ್ ಸ್ನಾಕ್ಸ್

ಗರಿಗರಿಯಾದ ಕಾರ್ನ್ ಫಿಂಗರ್ಸ್
ಇವುಗಳನ್ನು ಸುಲಭವಾಗಿ ಮತ್ತು ಬೇಗ ಮಾಡಬಹುದು. ಇದನ್ನು ಜೋಳದ ಕಾಳನ್ನು ಬಳಸಿ ಮಾಡಲಾಗುತ್ತದೆ. ಇದರೊಳಗಿನ ಚೀಸ್ ಇದಕ್ಕೆ ವಿಶೇಷ ರುಚಿ ತಂದುಕೊಡುತ್ತದೆ.

ಇಟ್ಯಾಲಿಯನ್ ವೈನ್ ಕುಕೀಸ್
ಇದೊಂದು ಆರೋಗ್ಯಕರವಾದ ಸ್ನಾಕ್. ಮನೆಯಲ್ಲೇ ಈ ಇಟ್ಯಾಲಿಯನ್ ವೈನ್ ಕುಕೀಸ್ ಗಳನ್ನು ತಯಾರಿಸಬಹುದು.

ಹನಿ ಮಸ್ಟರ್ಡ್ ಚಿಕನ್ ವಿಂಗ್ಸ್
ಮಸಾಲೆ ಬೆರೆತ ಈ ಮಸ್ಟರ್ಡ್ ಚಿಕನ್ ವಿಂಗ್ಸ್ ನ ರುಚಿಯನ್ನು ಈ ಬಾರಿಯ ಕ್ರಿಸ್ಮಸ್ ಗೆ ನಿಮ್ಮ ಅತಿಥಿಗಳಿಗೆ ನೀಡಿ. ಇದರ ರುಚಿ ಅದ್ಭುತವಾಗಿರುತ್ತದೆ.

ರೋಸ್ ಕುಕೀಸ್
ಕ್ರಿಸ್ಮಸ್ ಹಬ್ಬ ರೋಸ್ ಕುಕೀಸ್ ಇಲ್ಲದೆ ಅಪೂರ್ಣವಾಗುತ್ತದೆ. ಇದು ಹೂವಿನ ಆಕಾರದಲ್ಲಿದ್ದು ರುಚಿಯಂತು ಅದ್ಭುತವಾಗಿರುತ್ತದೆ!

ಬ್ರೆಡ್ ಕಟ್ಲೆಟ್
ನಿಮ್ಮ ಮಕ್ಕಳಿಗೆ ಈಗ ಕ್ರಿಸ್ಮಸ್ ರಜೆ. ಸಹಜವಾಗಿ ಅವರು ಏನಾದರೂ ತಿಂಡಿಗಾಗಿ ನಿಮ್ಮನ್ನು ಕಾಡುತ್ತಿರುತ್ತಾರೆ. ಈ ಸರಳವಾದ ಮತ್ತು ಪೌಷ್ಟಿಕಾಂಶಭರಿತವಾದ ಬ್ರೆಡ್ ಕಟ್ಲೆಟ್ ಅನ್ನು ಮಕ್ಕಳಿಗೆ ನೀಡಿ.

ಟೊರ್ಟಿಲ ಚಿಪ್ಸ್
ಮಧುಮೇಹಿಗಳೇ ಇದು ನಿಮಗಾಗಿ. ನಾವೆನಪ್ಪ ಸ್ನಾಕ್ ತಿನ್ನೋದು ಅಂತ ಯೋಚಿಸುತ್ತಿದ್ದರೆ ಈ ಸ್ನಾಕ್ ನಿಮಗಾಗಿ. ಚಿಂತೆಯಿಲ್ಲದೆ ಆಸ್ವಾದಿಸಿ. ಇದು ಮೆಕ್ಸಿಕನ್ ರೆಸಿಪಿ. ಇದನ್ನು 'ಟೊರ್ಟಿಲ ಚಿಪ್ಸ್' ಎಂದು ಕರೆಯುತ್ತಾರೆ. ಇದನ್ನು ಕಡಿಮೆ ಎಣ್ಣೆ ಬಳಸಿ ತಯಾರಿಸಲಾಗುತ್ತದೆ. ತ್ರಿಕೋನಾಕಾರದ ಈ ಚಿಪ್ಸ್ ಅನ್ನು ರಾತ್ರಿ ಊಟಕ್ಕೆ ಬಡಿಸಬಹುದು ಅಥವ ಬಿಸಿಬಿಸಿಯಾಗಿ ಕ್ರಿಸ್ಮಸ್ ವೈನ್ ಜೊತೆ ಕೂಡ ನೀಡಬಹುದು.

ಗೋಬಿ ಪಕೋಡ
ಹೂಕೋಸಿನ ಪಕೋಡ ಸವಿಯಲು ರುಚಿಕರವಾಗಿರುತ್ತದೆ.

ಗರಿಗರಿಯಾದ ಚೀಸ್ ಬಾಲ್ಸ್
ಚೀಸ್ ಬಾಲ್ ಗಳು ಮಕ್ಕಳಿಗೆ ಪ್ರಿಯವಾದದ್ದು. ಈ ಬಾರಿ ಕ್ರಿಸ್ಮಸ್ ಹಬ್ಬಕ್ಕೆ ಇದನ್ನು ತಯಾರಿಸಿ ಒಂದು ಕಪ್ ಬಿಸಿ ಚಾಕೊಲೇಟ್ ನೊಂದಿಗೆ ಸವಿಯಬಹುದು.

ಕಾರ್ನಫ್ಲೆಕ್ಸ್ ಕುಕೀಸ್
ಇವು ರುಚಿಕರವಾಗಿರುತ್ತದೆ. ಗರಿಗರಿಯಾದ ಈ ಸ್ನಾಕ್ ನಲ್ಲಿ ಹೆಚ್ಚು ಕೊಬ್ಬಿನಂಶವಿರುವುದಿಲ್ಲ. ಇದನ್ನು ಸುಲಭವಾಗಿ ಮಾಡಬಹುದು. ಇದನ್ನು ಒಂದು ಕಪ್ ಬಿಸಿ ಕೊಕೊದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.

ಮಶ್ರೂಮ್ ಚೀಸ್ ಪಕೋಡ
ಇದನ್ನು ತಿಂದಷ್ಟು ಮತ್ತಷ್ಟು ತಿನ್ನಬೇಕೆನಿಸುತ್ತದೆ. ಆದ್ದರಿಂದ ಈ ಬಾರಿಯ ಕ್ರಿಸ್ಮಸ್ ಹಬ್ಬಕ್ಕೆ ಇದನ್ನು ಮಾಡಿ ನೋಡಿ.



Click it and Unblock the Notifications
