Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ದಕ್ಷಿಣ ಕನ್ನಡದಲ್ಲಿ ಪ್ರಸಿದ್ಧಿ ಪಡೆದಿರುವ ಗೋಳಿ ಬಜೆ
ದಕ್ಷಿಣ ಕನ್ನಡದ ಪ್ರಸಿದ್ಧ ತಿಂಡಿಗಳಲ್ಲಿ ಗೋಳಿ ಬಜೆ ಕೂಡ ಒಂದು. ಸಾಯಾಂಕಾಲದ ತಿಂಡಿಗೆ ಕಾಯಿ ಚಟ್ನಿ ತಿನ್ನುವುದು ಇಲ್ಲಿನವರಿಗೆ ತುಂಬಾ ಪ್ರಿಯ. ಮೆದುವಾಗಿರುವ ಗೋಳಿ ಬಜೆ ಹೊಟ್ಟೆಯೂ ತುಂಬುವುದು ಬಾಯಿಗೆ ರುಚಿಯನ್ನು ಕೂಡ ನೀಡುತ್ತದೆ. ಈ ಗೋಳಿ ಬಜೆ ಮಾಡುವ ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ಕಡಲೆಹಿಟ್ಟು
* ಅಕ್ಕಿಹಿಟ್ಟು
* ಈರುಳ್ಳಿ
* ಕೊತ್ತಂಬರಿ ಸೊಪ್ಪು
* ಹಸಿಮೆಣಸಿನ ಕಾಯಿ
* ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
1. ಕಡಲೆ ಹಿಟ್ಟು, ಅಕ್ಕಿಹಿಟ್ಟು, ಮತ್ತು ಉಪ್ಪನ್ನು ಚೆನ್ನಾಗಿ ಮಿಶ್ರ ಮಾಡಿ ಅದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಈರುಳ್ಳಿ ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಬೇಕು.
2. ನಂತರ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಅರ್ಧದಷ್ಟು ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದರಲ್ಲಿ ಕಲೆಸಿದ ಹಿಟ್ಟನ್ನು ಚಿಕ್ಕ ಉಂಡೆ ಮಾಡಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಬೇಕು.
ಹೀಗೆ ಮಾಡಿದರೆ ದಕ್ಷಣ ಕನ್ನಡದ ಪ್ರಸಿದ್ಧ ತಿಂಡಿಯಾದ ಗೋಳಿ ಬಜೆ ರೆಡಿ.
ಇದನ್ನು ಈ ಕೆಳಗಿನ ವಿಧಾನದಿಂದ ಕೂಡ ತಯಾರಿಸಬಹುದು.
ಬೇಕಾಗುವ ವಸ್ತುಗಳು :
* 1/4 ಕೆಜಿ ಮೈದಾ ಹಿಟ್ಟು
* ಸ್ವಲ್ಪ ಹುಳಿ ಮೊಸರು ಅಥವಾ ಮಜ್ಜಿಗೆ
* ಕರಿ ಬೇವಿನಸೊಪ್ಪು
* ಹಸಿಶುಂಠಿ
* 4 ಹಸಿಮೆಣಸಿನ ಕಾಯಿ
* ಚಿಟಿಕೆಯಷ್ಟು ಅಡುಗೆ ಸೋಡಾ
* ಕರಿಯಲು ಎಣ್ಣೆ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ: ಮೇಲಿನ ವಿಧಾನದಂತೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಶ್ರ ಮಾಡಿ 10 ನಿಮಿಷ ಬಿಟ್ಟು ನಂತರ ಅದನ್ನು ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಹಾಕಿ ಹುರಿದರೆ ಗೋಳಿ ಬಜೆ ರೆಡಿ.
ಇದನ್ನು ಈ ಕೆಳಗಿನ ವಿಧಾನದಲ್ಲಿ ತಯಾರಿಸಿದ ಚಟ್ನಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
1/4 ತೆಂಗಿನಕಾಯಿಯ ತುರಿಗೆ ಎರಡು ಹಸಿಮೆಣಸಿನ ಕಾಯಿ, ಬೇಕಾದರೆ ಹತ್ತು ಕಾಳು (ಉರಿಗಡಲೆ) ಬೆರೆಸಬಹುದು. ಇಲ್ಲವಾದರೆ ಕಾಯಿ, ಹಸಿಮೆಣಸು, ಉಪ್ಪು ಹಾಕಿ ಅರೆದು, ಒಂದು ಒಗ್ಗರಣೆ ಕೊಟ್ಟರೆ ಕಾಯಿ ಚಟ್ನಿ ರೆಡಿ.
ಸಲಹೆ:
1. ಮನೆಯಲ್ಲಿ ಮಾಡುವಾಗ ಸ್ವಲ್ಪ ಕಡಿಮೆಯೇ ಸೋಡಾ ಹಾಕಿ. ಇದರಿಂದ ಏನೂ ಆಗದು. ಬಜ್ಜಿ ಸ್ವಲ್ಪ ಗಟ್ಟಿ ಎನಿಸುವುದು ಹೌದು. ಆದರೆ ಇದರಿಂದ ತಿನ್ನುವಾಗ ಸುಸ್ತು ಎನಿಸಲಾರದು.
2. ಹಿಟ್ಟು ನೀರಾದರೆ ಬಜೆಎಣ್ಣೆಯನ್ನು ಹೆಚ್ಚು ಕುಡಿಯುತ್ತದೆ.
3. ಸೋಡಾ ಜಾಸ್ತಿ ಹಾಕಿದರೆ ಬಜ್ಜಿ ಬಹಳ ಮೃದುವಾಗಿ ಬರುತ್ತದೆ. ಆದರೆ, ಹೆಚ್ಚು ಎಣ್ಣೆಯನ್ನು ಕುಡಿಯುತ್ತದೆ. ಅಲ್ಲದೇ ಸ್ವಲ್ಪ ತಣ್ಣಗಾದ ಕೂಡಲೇ ರಬ್ಬರ್ ಮಾದರಿ ಬಜ್ಜಿ ಆಗುತ್ತದೆ.
4. ಇದಕ್ಕೆ ಜೀರಿಗೆ ಹಾಕಿದರೆ ಸ್ವಲ್ಪ ಕಹಿ ಎನಿಸುತ್ತದೆ.
5. ಹಿಟ್ಟು ಕಲೆಸುವಾಗ ಪೂರಿ ಹಿಟ್ಟಿನಂತೆ ತುಂಬಾ ಕಲೆಸಬೇಡಿ. ಹಾಗೆ ಮಾಡಿದರೆ ನಾರಾಗುವ ಸಂಭವವೇ ಹೆಚ್ಚು.



Click it and Unblock the Notifications
