Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೆಜಿಟೇರಿಯನ್ ಪಾಸ್ತಾ ರೆಸಿಪಿ
ಪಾಸ್ತಾ ಚೈನೀಸ್ ಆಹಾರವಾದರೂ ಇತ್ತೀಚಿನ ದಿನಗಳಲ್ಲಿ ಪಾಸ್ತಾ ಭಾರತದಲ್ಲೂ ತುಂಬಾ ಜನಪ್ರಿಯತೆಯನ್ನು ಗಳಿಸುತ್ತಿದೆ. ಪಾಸ್ತಾವನ್ನು ಫಾಸ್ಟ್ ಫುಡ್ ಎಂದು ಹೇಳಲು ಸಾಧ್ಯವಿಲ್ಲ. ಇದನ್ನು ಆರೋಗ್ಯಕರವಾಗಿ ಮಾಡಿದರೆ ತುಂಬಾ ಆರೋಗ್ಯಕರವಾದ ಆಹಾರವಾಗಿದೆ. ಇವತ್ತು ವಿಶ್ವ ಪಾಸ್ತಾ ದಿನ. ಈ ದಿನದ ವಿಶೇಷವಾಗಿ ಈ ಸ್ಪೆಷಲ್ ರೆಸಿಪಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ:
ಈ ಪಾಸ್ತಾ ಮಾಡಲು 3 ಸರಳ ವಿಧಾನ
1. ಪಾಸ್ತಾವನ್ನು ಬೇಯಿಸಬೇಕು.
2. ಪಾಸ್ತಾ ತಯಾರಿಸುವುದು
3. ತರಕಾರಿ

ಪಾಸ್ತಾವನ್ನು ಬೇಯಿಸುವುದು ಹೇಗೆ?
* ಸ್ವಲ್ಪ ದೊಡ್ಡ ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಸಿ.
* ನೀರು ಕುದಿಯುತ್ತಿರುವಾಗ ಸ್ವಲ್ಪ ಉಪ್ಪು ಹಾಕಿ. ತಳ ಹಿಡಿಯದಿರಲು ಆಗಾಗ ತಿರುಗಿಸಿ.
* ಪಾಸ್ತಾ ಬೆಂದಾಗ ಅದು ಮೆತ್ತಗಾಗುತ್ತದೆ. ನಂತರ ನೀರನ್ನು ಬಸಿಯಿರಿ.
ಪಾಸ್ತಾ ಸಾಸ್ ನ ರೆಸಿಪಿ
ಹಣ್ಣಾದ ಟೊಮೆಟೊ 4-5
ಪಾಸ್ತಾ
ಈರುಳ್ಳಿ 1
ಬೆಳ್ಳುಳ್ಳಿ 2 ಚಮಚ
ಆಲೀವ್ ಎಣ್ಣೆ ಒಂದೂವರೆ ಚಮಚ
ರುಚಿಗೆ ತಕ್ಕ ಉಪ್ಪು ಮತ್ತು ಕರಿ ಮೆಣಸಿನ ಪುಡಿ
ಟೊಮೆಟೊ ಕೆಚಪ್ 2 ಚಮಚ
ದೊಡ್ಡ ಪತ್ರೆ ಪುಡಿ ಅರ್ಧ ಚಮಚ
ಮಾಡುವ ವಿಧಾನ:
* ಟೊಮೆಟೊವನ್ನು ಬಿಸಿ ನೀರಿಗೆ 5 ನಿಮಿಷ ಬೇಯಿಸಿ.
* ಈಗ ಪ್ಯಾನ್ ಗೆ ಎಣ್ಣೆ ಹಾಕಿ ಅದರಲ್ಲಿ ಬೆಳ್ಳುಳ್ಳಿ, ಈರುಳ್ಳಿ ಚೆನ್ನಾಗಿ ಫ್ರೈ ಮಾಡಿ.
* ನಂತರ ಟೊಮೆಟೊ ಹಾಕಿ ಮ್ಯಾಶ್ ಮಾಡಿ ಪೇಸ್ಟ್ ರೀತಿ ಮಾಡಿ, ನಂತರ ಟೊಮೆಟೊ ಕೆಚಪ್ ಸೇರಿಸಿ10 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿ, ನಂತರ ದೊಡ್ಡ ಪತ್ರೆ, ಉಪ್ಪು ಮತ್ತು ಕರಿ ಮೆಣಸಿನ ಪುಡಿ ಹಾಕಿ ಉರಿಯಿಂದ ಇಳಿಸಿ ಇಡಿ.
ಬೇಕಾದ ತರಕಾರಿಗಳು
ಈರುಳ್ಳಿ1
ಬೆಳ್ಳುಳ್ಳಿ 1 ಚಮಚ
ಚಿಕ್ಕ ಬ್ರೊಕೋಲಿ
ಕ್ಯಾಪ್ಸಿಕಂ(ಹಸಿರು, ಹಳದಿ, ಕೆಂಪು ಬಣ್ಣದ್ದು)
ರುಚಿಗೆ ತಕ್ಕ ಉಪ್ಪು ಮತ್ತು ಕರಿ ಮೆಣಸಿನ ಪುಡಿ
ದೊಡ್ಡ ಪತ್ರೆ
ಆಲೀವ್ ಎಣ್ಣೆ ಒಂದೂವರೆ ಚಮಚ
ಮಾಡುವ ವಿಧಾನ
* ಬ್ರೊಕೋಲಿಯನ್ನು ಶುಚಿ ಮಾಡಿ ಕುದಿಯುವ ನೀರಿಗೆ ಹಾಕಿ 3-4 ನಿಮಿಷ ಕುದಿಸಬೇಕು.
* ಎಣ್ಣೆಯನ್ನು ಬಿಸಿ ಮಾಡಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಬ್ರೊಕೋಲಿ ಮತ್ತು ಕ್ಯಾಪ್ಸಿಕಂ ಹಾಕಿ ಸೌಟ್ ನಿಂದ ಆಡಿಸಿ.
* ತರಕಾರಿ ಬೆಂದ ಮೇಲೆ ದೊಡ್ಡ ಪತ್ರೆ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಮತ್ತು ಕರಿ ಮೆಣಸಿನ ಪುಡಿ ಹಾಕಿ ಮತ್ತೆ 5 ನಿಮಿಷ ಫ್ರೈ ಮಾಡಿ.
ಸರ್ವ್ ಮಾಡುವುದು ಹೇಗೆ?
ಮೊದಲು ಫ್ರೈ ಮಾಡಿದ ತರಕಾರಿಯನ್ನು ಹಾಕಿ, ನಂತರ ಬೇಯಿಸಿದ ಪಾಸ್ತಾ, ನಂತರ ಸಾಸ್ ಹಾಕಿ, ಬೇಕಿದ್ದರೆ ತುರಿದ ಚೀಸ್ ಹಾಕಿ ಸರ್ವ್ ಮಾಡಿ.
ಗಮನಿಸಿಬೇಕಾದ ವಿಷಯ
* ಬೇಕಿದ್ದರೆ ಅಣಬೆಯನ್ನು ಕೂಡ ಹಾಕಬಹುದು.
* ಆಲೀವ್ ಆಯಿಲ್ ಇಲ್ಲದಿದ್ದರೆ ನೀವು ಅಡುಗೆಗೆ ಬಳಸುವವ ಎಣ್ಣೆಯನ್ನು ಬಳಸಬಹುದು.



Click it and Unblock the Notifications
