Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರುಚಿಕರವಾದ ಕೊತ್ತಂಬರಿ,ಲಿಂಬೆ ಸೂಪ್ ರೆಸಿಪಿ
ಚಳಿಗಾಲದಲ್ಲಿ ಎಲ್ಲರ ಮನೆಯಲ್ಲೂ ಸೂಪ್ ಸಾಮಾನ್ಯ. ನೀವು ಕೇವಲ 20 ನಿಮಿಷಗಳಲ್ಲಿ ತಯಾರಿಸಬಹದಾದ ಹಲವಾರು ಸೂಪ್‌ಗಳಿವೆ. ಅದರಲ್ಲೂ ಟೊಮೇಟೊ ಸೂಪ್ ಸರಳ ರುಚಿಕರ ಸೂಪ್ ಆಗಿದ್ದು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ.
ಆದರೂ ಸೂಪ್‌ನೊಂದಿಗೆ ತಾಜಾ ತರಕಾರಿಗಳು ಸೊಪ್ಪುಗಳು ಮಿಶ್ರಗೊಂಡಿದ್ದರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಅದರಲ್ಲೂ ಕೊತ್ತಂಬರಿ ಸೊಪ್ಪು ತನ್ನಲ್ಲಿ ಹೇರಳವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಿ ದೇಹವನ್ನು ಆರೋಗ್ಯವಾಗಿಸುತ್ತದೆ.

ಕೊತ್ತಂಬರಿ ಸೊಪ್ಪು ಸೂಪ್ ಅನ್ನು ಮನೆಯಲ್ಲಿ ತಯಾರಿಸುವುದು ಹೇಗೆ? ಈ ಚಳಿಗಾಲವನ್ನು ಆನಂದಿಸಲು ನಾವಿಂದು ನಿಮಗೆ ಕೊತ್ತಂಬರಿ ಸೊಪ್ಪು ಮತ್ತು ಲಿಂಬೆ ಸೂಪ್ ಅನ್ನು ಮಾಡುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಇದು ನಿಮ್ಮನ್ನು ಪ್ರಫುಲ್ಲಗೊಳಿಸಿ ತೂಕ ಇಳಿಸುವಲ್ಲಿ ನೆರವು ನೀಡುತ್ತದೆ.
ಪ್ರಮಾಣ: 2
ಸಿದ್ಧತೆ ಸಮಯ: 10 ನಿಮಿಷಗಳು
ಅಡುಗೆ ಸಮಯ:15 ನಿಮಿಷಗಳು
ಸಾಮಾಗ್ರಿಗಳು
1.ಕತ್ತರಿಸಿದ ಕೊತ್ತಂಬರಿ ಸೊಪ್ಪು - 2 ಟೇಸ್ಫೂನ್
2.ಈರುಳ್ಳಿ -1 (ಕತ್ತರಿಸಿದ್ದು)
3.ಸ್ಪ್ರಿಂಗ್ ಈರುಳ್ಳಿ - 1 (ಕತ್ತರಿಸಿದ್ದು)
4.ಶುಂಠಿ - 1 ಇಂಚು (ಜಜ್ಜಿದ್ದು)
5.ಬೆಳ್ಳುಳ್ಳಿ - 1 ಎಸಳು (ಜಜ್ಜಿದ್ದು)
6.ನಿಂಬೆ ರಸ - 2 ಟೇಸ್ಪೂನ್
7.ತರಕಾರಿ ಕತ್ತರಿಸಿದ್ದು - 4 ಕಪ್
8. ಕರಿಮೆಣಸು - 4-5 (ಜಜ್ಜಿದ್ದು)
9.ಉಪ್ಪು - ರುಚಿಗೆ ತಕ್ಕಷ್ಟು
10.ಬೆಣ್ಣೆ - 1 ಟೇಸ್ಪೂನ್
ಮಾಡುವ ವಿಧಾನ
1. ಪ್ಯಾನ್‌ನಲ್ಲಿ ಬೆಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಈರುಳ್ಳಿ, ಶುಂಠಿ, ಮತ್ತು ಸ್ಪ್ರಿಂಗ್ ಈರುಳ್ಳಿಯನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಿ.
2. ನಂತರ ಈರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. ಸಣ್ಣ ಉರಿಯಲ್ಲಿ ಫ್ರೈ ಆಗಲು ಇದಕ್ಕೆ 4 ನಿಮಿಷಗಳು ಬೇಕಾಗಬಹುದು.
3. ತದನಂತರ ಕತ್ತರಿಸಿರುವ ತರಕಾರಿಗಳನ್ನು ಪ್ಯಾನ್‌ಗೆ ಹಾಕಿ ಹಾಗೂ ಚೆನ್ನಾಗಿ ಅದನ್ನು ಕುದಿಸಿ.
4. ಕೊತ್ತಂಬರಿ ಸೊಪ್ಪು, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಮೆಣಸನ್ನು ಪ್ಯಾನ್‌ಗೆ ಸೇರಿಸಿ ಮತ್ತು ಮಿಶ್ರ ಮಾಡಿ.
5. ಸೂಪ್ ದಪ್ಪಗಾದ ನಂತರ, ಗ್ಯಾಸ್ ಆಫ್ ಮಾಡಿ.
ಕೊತ್ತಂಬರಿ ಸೊಪ್ಪು ನಿಂಬೆ ಸೂಪ್ ಸವಿಯಲು ಸಿದ್ಧವಾಗಿದೆ. ಸ್ವಲ್ಪ ಬೆಣ್ಣೆಯೊಂದಿಗೆ ಅಲಂಕರಿಸಿ ಸವಿಯಲು ನೀಡಿ.



Click it and Unblock the Notifications
