Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನುಚ್ಚಿನುಂಡೆ - ಮಜ್ಜಿಗೆ ಹುಳಿ ಗಣನಾಯ್ಕ

ನಾವು ಚಿಕ್ಕವರಿದ್ದಾಗ ಪಿಟ್ಜಾ, ಚಾಟ್, ಗೋಬಿ-ಮಂಚೂರಿಯನ್ ಯಾವುದೂ ಇರದ ಕಾಲ. ನುಚ್ಚಿನುಂಡೆ, ಗುಲ್‌ಪಾವಟಿ, ರಾಗಿ ಹುರಿಟ್ಟು, ಕಡ್ಲೆಪುರಿ ಜೊತೆಗೆ ತಾಜಾ ತಾಜಾ ಕಳ್ಳೇಕಾಯ್ ಕಾಲವದು. ಓಲ್ಡ್ ಈಸ್ ಗೋಲ್ಡ್. ಪ್ರೋಟೀನ್ ಪುಷ್ಕಳ, ತಿನ್ನಲೂ ಸ್ವಾದಿಷ್ಟ. ಬಿಸಿಬಿಸಿ ನುಚ್ಚಿನುಂಡೆ ಮೇಲೆ ಗಟ್ಟಿ ತುಪ್ಪ.. ಬಾಯಲ್ಲಿ ನೀರೂರದೇ ಇದ್ದೀತೇ?
ಬೇಕಾಗುವ ಸಾಮಗ್ರಿ
ತೊಗರಿಬೇಳೆ : 1 ಕಪ್
ಕಡಲೆಬೇಳೆ : 1 ಟೀ ಸ್ಪೂನ್
ಹಸಿಮೆಣಸಿನಕಾಯಿ : 3 ಅಥವಾ 4
ಕೆಂಪು ಮೆಣಸಿನಕಾಯಿ : 3
ತೆಂಗಿನತುರಿ : 1/4 ಕಪ್
ಕರಿಬೇವು, ಕೊತ್ತಂಬರಿ, ಚಿಟಿಕೆ ಹಿಂಗು, ಶುಂಠಿ, ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು.
ಮಾಡುವ ವಿಧಾನ
3 ಗಂಟೆಕಾಲ ತೊಗರಿಬೇಳೆಯನ್ನು ನೆನೆಸಿಡಿ. ನೀರನ್ನು ಬಸಿದು ಮೆಣಸಿನಕಾಯಿ, ಕೊತ್ತಂಬರಿ, ಕಾಯಿ, ಶುಂಠಿ, ಉಪ್ಪು ಸೇರಿಸಿ ಸ್ವಲ್ಪ ತರಿ-ತರಿಯಾಗಿ, ನೀರು ಹಾಕದೆ ಗಟ್ಟಿಯಾಗಿ ರುಬ್ಬಿ. ಇಡ್ಲಿ ಪ್ಲೇಟಿನಲ್ಲಿ ಎಣ್ಣೆ ಸವರಿ ರುಬ್ಬಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ 10 ನಿಮಿಷ ಆವಿಯಲ್ಲಿ ಬೇಯಿಸಿ.
ಬಿಸಿಯಾಗಿ ತುಪ್ಪ ಹಾಕಿಕೊಂಡು ತಿನ್ನಿ ಅಥವಾ ಮಜ್ಜಿಗೆ ಹುಳಿ ಮಾಡಿ ಅದರಲ್ಲಿ ಹಾಕಿ ತಿನ್ನಿ.
ಆರಿದರೆ/ಮಿಕ್ಕಿದರೆ : ಬೇಯಿಸಿದ ಅವರೆಕಾಳು ಅಥವಾ ಸ್ವಲ್ಪವೇ ಹುರಿದ ಮೆಂತ್ಯಸೊಪ್ಪಿಗೆ ಆರಿದ ಉಂಡೆಗಳನ್ನು ಪುಡಿ ಮಾಡಿ ಒಗ್ಗರಣೆ ಹಾಕಿ ಪಲ್ಯ ಮಾಡಿ. ಬಲು ರುಚಿಯಾಗಿರುತ್ತೆ.
ನುಚ್ಚಿನುಂಡೆ ಜೊತೆ ಮಜ್ಜಿಗೆ ಹುಳಿ ಒಳ್ಳೇ ಕಾಂಬಿನೇಷನ್ ಅಂತ ಹೇಳಿ ಮಜ್ಜಿಗೆ ಹುಳಿ ಬಗ್ಗೆ ಕೊಟ್ಟೇ ಇಲ್ಲ ಅಂತ ತಗಾದೆಯಾ?



Click it and Unblock the Notifications
