Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕ್ಯಾಪ್ಸಿಕಂ ಮೊಸರು ಮಸಾಲಾ!

ಬೇಕಾಗುವ ಸಾಮಗ್ರಿಗಳು :
1. ತುಂಡು ಮಾಡಿದ ಈರುಳ್ಳಿ- 1 ಕಪ್.
2. ಕತ್ತರಿಸಿದ ಟೊಮಾಟೊ- 1 ಕಪ್.
3. ಕತ್ತರಿಸಿದ ದೊಣ್ಣೆ ಮೆಣಸಿನ ಕಾಯಿ (ಕ್ಯಾಪ್ಸಿಕಂ)- 1 ಕಪ್.
4. 2-3 ಟೀ ಸ್ಪೂನ್ ರೀಫೈನ್ಡ್ ಎಣ್ಣೆ .
5. ಜೀರಿಗೆ- 1 ಟೀ ಸ್ಪೂನ್.
6. ಹಸಿ ಮೆಣಸಿನ ಕಾಯಿ- 3. ಉದ್ದುದ್ದ ಕತ್ತರಿಸಿಕೊಳ್ಳಿ.
7. ಒಂದು ಎಸಳು ಕರಿಬೇವಿನ ಸೊಪ್ಪು.
8. ರುಚಿಗೆ ತಕ್ಕಷ್ಟು ಉಪ್ಪು .
9. ಬಣ್ಣಕ್ಕೆ ಒಗ್ಗುವಷ್ಟು ಅರಿಷಿಣ ಪುಡಿ.
10. 1 ಟೀ ಸ್ಪೂನ್ ಖಾರದ ಪುಡಿ (ಒಣ ಮೆಣಸಿನಕಾಯಿ ಪುಡಿ).
11. 1 ಟೀ ಸ್ಪೂನ್ ಕೊತ್ತಂಬರಿ ಬೀಜದ ಪುಡಿ.
12. ಅರ್ಧ ಟೀ ಸ್ಪೂನ್ ಗರಂ ಮಸಾಲಾ.
13. ಸಿಹಿ ಮೊಸರು- 100 ಮಿಲೀ. ಮೊಸರು ಗಟ್ಟಿಯಾಗಿರಲಿ.
14. ನೀರು- 1 ಲೋಟ.
ಮಾಡುವ ವಿಧಾನ :
ಮೊದಲಿಗೆ- ಅಗಲ ತಳದ ಪಾತ್ರೆಯಾಂದರಲ್ಲಿ 2-3 ಟೀ ಸ್ಪೂನ್ ಎಣ್ಣೆ ಹಾಕಿ. ಸ್ಟವ್ ಹಚ್ಚಿದ್ದೀರಿ ತಾನೇ? ಪಾತ್ರೆಯನ್ನು ಸ್ಟವ್ ಮೇಲಿಡಿ. ಮಧ್ಯಮ ಉರಿಯಲ್ಲಿ ಜೀರಿಗೆಯನ್ನು ಹುರಿದುಕೊಳ್ಳಿ. ಜೀರಿಗೆ ಹುರಿಯಲು 1 ನಿಮಿಷ ಸಾಕು.
ಜೀರಿಗೆ ಹುರಿದಿದ್ದಾಯಿತಾ ? ಅದೇ ಪಾತ್ರೆಗೆ- ಕತ್ತರಿಸಿಟ್ಟುಕೊಂಡ ಈರುಳ್ಳಿ ತುಂಡುಗಳು, ತೊಳೆದಿಟ್ಟುಕೊಂಡ ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ ತುಂಡುಗಳನ್ನು ಹಾಕಿ. ಈರುಳ್ಳಿ ತುಂಡುಗಳು ಬಂಗಾರ ಬಣ್ಣಕ್ಕೆ ಬರುವವರೆಗೆ ಬೇಯಲಿ. ಆನಂತರ ಕತ್ತರಿಸಿ ಸಿದ್ಧಪಡಿಸಿಕೊಂಡ ಟೊಮೊಟಾ ಹಾಗೂ ದೊಣ್ಣೆ ಮೆಣಸಿನಕಾಯಿ ತುಂಡುಗಳನ್ನು ಪಾತ್ರೆಗೆ ಸೇರಿಸಿ. ಚೆನ್ನಾಗಿ ಕಲಕಿ.
1 ಲೋಟ ನೀರನ್ನು ಪಾತ್ರೆಗೆ ಸೇರಿಸಿ, ಪ್ಲೇಟ್ ಮುಚ್ಚಿ . ಪಾತ್ರೆಯಲ್ಲಿನ ಪದಾರ್ಥಗಳು ಚೆನ್ನಾಗಿ ಕುದಿಯಲಿ. ತರಕಾರಿ ಚೆನ್ನಾಗಿ ಬೆಂದ ನಂತರ ಉಪ್ಪು , ಅರಿಷಿಣ ಹಾಗೂ ಕೊತ್ತಂಬರಿ ಪುಡಿ ಸೇರಿಸುವುದು. ಮಿಶ್ರಣವನ್ನು ಚೆನ್ನಾಗಿ ಕಲಕಿದ ನಂತರ ಮತ್ತೆ 5 ನಿಮಿಷ ಬೇಯಿಸುವುದು. ಈಗ ಸಿಹಿ ಮೊಸರು ಸೇರಿಸುವ ಸರದಿ. ಮೊಸರು ಸೇರಿಸಿದ ನಂತರದ ಮಿಶ್ರಣವನ್ನು ಮತ್ತೆ ಸ್ಟವ್ ಮೇಲಿಡಿ. ಉರಿ ಮಧ್ಯಮವಾಗಿರಲಿ. ಮೊಸರಿನಲ್ಲಿನ ನೀರಿನಂಶ ಸಂಪೂರ್ಣ ಆವಿಯಾಗುವ ತನಕ ಕುದಿಸುವುದು. ಒಲೆಯಿಂದ ಕೆಳಗಿಳಿಸುವ ಮುನ್ನ - ಗರಂ ಮಸಾಲಾ ಸೇರಿಸುವುದು.
ಪೂರಿ ಹಾಗೂ ಪರೋಟಾಗಳಿಗೆ ಕ್ಯಾಪ್ಸಿಕಂ ಮೊಸರು ಮಸಾಲಾ ತುಂಬಾ ರುಚಿ. ಬಿಸಿಯಾಗಿರುವಾಗಲೇ ಬಳಸುವುದು ಒಳ್ಳೆಯದು. ಹಸಿ ಈರುಳ್ಳಿ ಹಾಗೂ ಟೊಮೊಟೊ ತುಂಡುಗಳನ್ನು ಕ್ಯಾಪ್ಸಿಕಂ ಮೊಸಲು ಮಸಾಲಾದ ಮೇಲೆ ಹರಡಬಹುದು.



Click it and Unblock the Notifications
