Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರಮಾಗರಂ ಕ್ಯಾಪ್ಸಿಕ್ಸಂ ರವಾ ಪಕೋಡ
* ನಂದಿನಿ ಗಿರೀಶ್, ಮಲೇಶಿಯಾ
ಬೇಕಾದ ಸಾಮಾಗ್ರಿಗಳು :
ಈರುಳ್ಳಿ -2
ಕ್ಯಾಪ್ಸಿಕಂ- 1(ದೊಡ್ಡ ಗಾತ್ರದ್ದು)
ರವೆ- 2 ಲೋಟ ಶುಂಠಿ+ ಹಸಿ ಮೆಣಸು ಪೇಸ್ಟ್ - 1/4 ಚಮಚ
ಮೊಸರು- 1 ಲೋಟ
ಕೊತ್ತಂಬರಿ ಪುಡಿ- 1/4 ಚಮಚ
ಮೆಣಸಿನ ಪುಡಿ- 1/2 ಚಮಚ
ಸೋಡಾ - 1 ಚಿಟಿಕೆ
ಅರಿಶಿನ ಪುಡಿ- 1/4ಚಮಚ
ಅಕ್ಕಿ ಹಿಟ್ಟು - 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು ಹಾಗೂ ಕರಿಯಲು ಶುದ್ಧ ಎಣ್ಣೆ
ಮಾಡುವ ವಿಧಾನ :
ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಈ ತುಂಡುಗಳೊಂದಿಗೆ ಇತರ ಪದಾರ್ಥಗಳನ್ನೂ ಸೇರಿಸಿ ಒಂದು ಪಾತ್ರೆಯಲ್ಲಿ ಹಾಕಿ. ಸ್ವಲ್ಪ ಸ್ವಲ್ಪವೇ (ಚಮಚದಲ್ಲಿ ) ಮೊಸರು ಹಾಕುತ್ತಾ ಚೆನ್ನಾಗಿ ಕಲಸಿ. ಕಲಸಿದ ಮಿಶ್ರಣದ ಹಿಟ್ಟು ಗಟ್ಟಿಯಾಗಿರಬೇಕು. ಅಪ್ಪಿ-ತಪ್ಪಿಯೂ ಮೊಸರಿನ ಜತೆಗೆ ನೀರು ಹಾಕಬೇಡಿ.ಅಥವಾ ಮೊಸರಿನ ಬದಲು ನೀರನ್ನು ಬಳಸಬೇಡಿ.
ಗಟ್ಟಿ ಮತ್ತು ದಪ್ಪನಾದ ಹಿಟ್ಟನ್ನು ಉಂಡೆ ಮಾಡಿ. ನಂತರ ಅಂಗೈಯಲ್ಲಿ ತಟ್ಟಿ ಚಪ್ಪಟೆ ಮಾಡಿ. ಬಳಿಕ ಕುದಿ ಎಣ್ಣೆಯಲ್ಲಿ ಕರಿಯಲು ಬಿಡಿ. ಕೆಂಪಾಗಿ ಕಾದಾಗ ತೆಗೆಯಿರಿ. ಈಗ ಪಕೋಡ ರೆಡಿ. ಬಿಸಿಬಿಸಿ ಪಕೋಡಾದ ಜೊತೆ ನೆಂಚಿಕೊಳ್ಳಲು ಟೊಮೆಟೊ ಮತ್ತು ಮೆಣಸಿನ ಸಾಸ್ ಇದ್ದರೆ ಚೆನ್ನ.



Click it and Unblock the Notifications
