Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಎಲ್ಲರಿಗೂ ಇಷ್ಟಾರಿ ಗೋಬಿ ಮಂಚೂರಿ

1/2 ಕೆಜಿ - ಹೂ ಕೋಸು
1/2 ಕಪ್ - ಮೆಕ್ಕೆಜೋಳ(ಮುಸುಕಿನ ಜೋಳ)ದ ಹಿಟ್ಟು
1/2 - ಕಡಲೆಬೇಳೆ ಹಿಟ್ಟು
1 ಕತ್ತರಿಸಿದ ಈರುಳ್ಳಿ
ಟೊಮೆಟೊ ಸಾಸ್ - 4 ಟೀ ಚಮಚ
ರುಬ್ಬಿಕೊಂಡ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ
1 ಟೀ ಚಮಚ ಸೋಯಾ ಸಾಸ್
ಕರಿಯಲು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ : ಮೊದಲು ಹೂ ಕೋಸಿನ ತೊಳೆಗಳನ್ನು ಬಿಚ್ಚಿ, ಕುದಿಯುವ ನೀರಿನಲ್ಲಿ ಹಾಕಿ ತೊಳೆದುಕೊಳ್ಳಿ. ಇನ್ನೊಂದೆಡೆ ಒಂದು ಪಾತ್ರೆಯಲ್ಲಿ ಕಡಲಿ ಹಿಟ್ಟು ಹಿಟ್ಟು , ಮೆಕ್ಕೆಜೋಳದ ಹಿಟ್ಟು ತೆಗೆದುಕೊಳ್ಳಿ. ಆನಂತರ ನೀರು ಹಾಕಿ ಕಲಸಿಕೊಳ್ಳಿ(ತೀರಾ ತಿಳಿಯೂ ಅಲ್ಲದ, ಗಟ್ಟಿಯೂ ಅಲ್ಲದ ಮಧ್ಯಮ ರೀತಿಯಲ್ಲಿ ಕಲಸಿಕೊಳ್ಳಿ).
ಈಗ ಸ್ಟೋವ್ ಮೇಲೆ ಇನ್ನೊಂದು ಬಾಣಲೆಯನ್ನಿಟ್ಟುಕೊಳ್ಳಿ, ಅದರಲ್ಲಿ ಎಣ್ಣೆ ಹಾಕಿ. ಎಣ್ಣೆ ಕಾಯ್ದ ಮೇಲೆ ಹಿಟ್ಟಿನಲ್ಲಿ ಹೂಕೋಸಿನ ತೊಳೆಗಳನ್ನು ಹಾಕಿ, ಮೆಣಸಿನಕಾಯಿ ಬಜ್ಜಿಯಂತೆ ಕರಿಯುತ್ತಾ ಹೋಗಿ. ಹಿಟ್ಟಿನಲ್ಲಿ ಕರಿದ ಹೂಕೋಸಿನ ತೊಳೆಗಳನ್ನು ಒಂದೆಡೆ ಇಟ್ಟುಕೊಳ್ಳಿ.
ಈಗ ಮತ್ತೆ ಸ್ಟೋವ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾಯ್ದ ಮೇಲೆ ಅದರೊಳಗೆ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ ಮತ್ತು ಟೊಮೆಟೊವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ರುಬ್ಬಿಕೊಂಡ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ಸೋಯಾ ಸಾಸ್, ಟೊಮೆಟೊ ಸಾಸ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಈಗ ಈ ಮಿಶ್ರಣಕ್ಕೆ ಕರಿದಿಟ್ಟ ಹೂ ಕೋಸಿನ ತೊಳೆಗಳನ್ನು ಹಾಕಿ ಕಲಸಿಕೊಳ್ಳಿ. ಸ್ವಲ್ಪಹೊತ್ತು ಹಾಗೆ ಒಲೆಯ ಮೇಲಿಟ್ಟು ಬಿಸಿಯಾಗುವವರೆಗೆ ತಿರುವಾಡುತ್ತಿರಿ.
ಈಗ ನಿಮ್ಮ ಮೆಚ್ಚಿನ ರೆಡಿ. ಇದನ್ನು ಊಟಕ್ಕಿಂತ ಮೊದಲು ಅಥವಾ ಊಟದ ಜೊತೆ ನೆಂಜಿಕೊಳ್ಳುತ್ತ ತಿನ್ನಬೇಕು. ಮತ್ತಿನ್ಯಾಕೆ ತಡ. ನೀವೂ ಮಾಡಿ ರುಚಿ ನೋಡಿ.



Click it and Unblock the Notifications
