Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಅಥೆನ್‌ಟಿಕ್ ಬಿಸಿಬೇಳೆಭಾತ್‌ಕೊ ಜವಾಬ್‌ನಹಿ
ಬಿಸಿಬೇಳೆ ಭಾತ್ ಅಂತ ಹೇಳ್ಕೊಂಡು ಕೆಲವರು ಏನೇನೋ ಮಾಡ್ತಾರೆ. ಮಾಡುವುದು ಹಾಗಲ್ಲರೀ, ಹೀಗೆ!
- ಕಮಲಮ್ಮ, ಬೆಂಗಳೂರು.
ಬಿಸಿಬೇಳೆ ಭಾತೋ, ಸಾಂಬಾರ್ ಅನ್ನಾನೋ ? ನಾನೂ 40 ವರ್ಷದಿಂದ ಬಿಸಿಬೇಳೆಭಾತ್ ಮಾಡ್ತಾನೇ ಇದೀನಿ. ಇದೊಂದು ಥರ ಥರಹೇವಾರಿ ಭಾತ್ ಅಂದ್ರೂ ಸರಿನೇ. ನಾನು ಮಾಡೋ ಬಿಬೇಭಾ(ಬಿಸಿಬೇಳೆಭಾತ್)ಗೂ ನನ್ನ ಸೊಸೆ ಸರಸರಾಂತ ಮಾಡುವ ಬಿಬೇಭಾಗೂ ಇರುವ ವ್ಯತ್ಯಾಸ ಅಂದ್ರೆ ದೀರ್ಘ ಪ್ರೊಸೆಸ್ಸಿನ ನನ್ನ ಹುಳಿಯನ್ನ, ಸಿಂಪ್ಲೆಸ್ಟ್ ಪಾಕ ಕುಶಲತೆ ಇರೋ ಆಕೆಯ ಬಿಬೇಭಾ ರುಚಿ ಎರಡೂ ಒಂದೆ ಅನ್ನಿ. ಬಿಗುಮಾನ ಬಿಟ್ ಹೇಳಬೇಕು ಅಂದರೆ ಅವಳು ಮಾಡಿದ್ದಕ್ಕೆ ರುಚಿ ಒಂದ್‌ಕೈಮೇಲೇನೇ ಅನ್ಕೊಬಹುದು. (ನನ್ನ ಸೊಸೆನೇ ತಾನೆ)
ಬೇಕಾಗುವ ಸಾಮಾನು :
(ಮೊದಲು ಪುಡಿ ಮಾಡ್ಕೊಬೇಕು :)
30 ಒಣಮೆಣಸಿನಕಾಯಿ (ಬ್ಯಾಡಗಿ-ಬಣ್ಣಕ್ಕೆ)
ಕಡಲೆಬೇಳೆ (ಒಂದು ಜಾಮೂನು ಬಟ್ಟಲು)
ಉದ್ದಿನಬೇಳೆ (ಮುಕ್ಕಾಲು ಬಟ್ಟಲು)
ಮರಾಠಾ ಮೊಗ್ಗು, ಚಕ್ಕೆ 3-4 ಚೂರು
ಲವಂಗ ಬೇಡ. ಕರಿಬೇವು ಒಂದು ಹಿಡಿ
ಮಾಡುವ ರೀತಿ :
ಮೇಲಿನ ಎಲ್ಲ ಪದಾರ್ಥಗಳನ್ನೂ ಘಂ ಅಂತ ಹುರಿದುಕೊಂಡು ಮಿಕ್ಸಿನಲ್ಲಿ ಪುಡಿಮಾಡಿಕೊಳ್ಳಿರಿ.
ಹೆಲ್ತ್ ಕಾನ್‌ಷಸ್‌ನೆಸ್‌ನ ಈಗಿನ ಮುಂಡೇವು ಕೊಬ್ರಿ ಕಾಯಿ ಇಲ್ಲದೇನೇ ರುಚಿ ತರಿಸ್‌ಬಿಡ್ತಿವೆ. ರುಚಿಕಟ್ಟಾದ ಬಿಸಿಬೇಳೆ ಬಾತ್‌ನಲ್ಲಿ ಇಷ್ಟ ಇರೋರು ಒಣಕೊಬ್ಬರಿ ಹಾಕ್ತಾರೆ.
ಕುಕ್ಕರ್‌ನಲ್ಲಿ ಒಂದು ಪಾವು ಅಕ್ಕಿ, ಮುಕ್ಕಾಲುಅಥವಾ ಒಂದು ಪಾವು ತೊಗರಿಬೇಳೆ ತೊಳೆದು ಹಾಕಬೇಕು. ಎಲ್ಲಾ ತರಕಾರಿ ( ಸ್ವಲ್ಪ ಗಟ್ಟಿಗಿರೋದು) ಹುರುಳಿ, ಗರ್ಜರಿ, ಗೆಡ್ಡೆ ಕೋಸು, ಈರುಳ್ಳಿ, ಹುಣಿಸೆ ಪೇಸ್ಟ್ ಅಥವಾ ಕಿವುಚಿದ ಹುಣಿಸೆ ಹುಳಿ, ಬಟಾಣಿ ಕಾಳು, ಒಂದು ಚೂರು ಬೆಲ್ಲ, ಚಿಟಿಕೆ ಅರಿಶಿನ..ಎಲ್ಲಾ ಸೇರಿದರೆ ಆಗೋ ಅಳತೆಗೆ 3-4ರಷ್ಟು ನೀರು ಹಾಕಿ ಒಟ್ಟಿಗೆ ಕುಕ್ಕರ್ ಕೂಗಿಸಿ.
ಪಕ್ಕದ ಬರ್ನರ್ ಮೇಲೆ ಒಗ್ಗರಣೆಗೆ ಸ್ವಲ್ಪ ಎಣ್ಣೆ ಇಟ್ಟು ಸಾಸಿವೆ, ಇಂಗು, ಕರಿಬೇವು, ಹೆಚ್ಚಿಕೊಂಡ ಟೋಮೆಟೋ, ಸ್ಲೈಸ್ ಮಾಡಿದ ದೊಣ್ಣಮೆಣನಕಾಯಿ ಹಾಕಿ ಬಾಡಿಸಿ. ಬೇಕಾದರೆ ನಾಕು ಒಣ ಮೆಣಸಿನಕಾಯಿನೂ ಹಾಕಿ. ಚೆನ್ನಾಗಿರತ್ತೆ.
ಕುಕ್ಕರ್ ಬಿಚ್ಚಿ ಈ ಒಗ್ಗರಣೆ ಬೆರಸಿ. ಮಕ್ಕಳು ಮರಿಗೆ ತುಪ್ಪ ಹಾಕಿ ಕೊಡಿ. ಖಾರಾ ಬೂಂದೀನೋ ಆಲೂಗೆಡ್ಡೆ ಚಿಪ್ಸೋ ಇದ್ದರೆ ಚೆನ್ನ. ಇದನ್ನ ಆದಷ್ಟು ಬೇಗ ಮಾಡಿ ನೋಡಿ, ನನ್ನ ಸೊಸೆ ಕೈರುಚಿ ಹೇಗಿರತ್ತೆ ಅಂತ. ನಾನೂ ಒಂದಿಷ್ಟು ಬೀಗುತ್ತೀನಿ.



Click it and Unblock the Notifications
