Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದಾವಣಗೆರೆಯ ಬಾಯಿ ಚಪ್ಪರಿಸುವ ತಿಂಡಿ ಬೇಕೆ?
ದಾವಣಗೆರೆ, ಹರಿಹರ, ಚಿತ್ರದುರ್ಗ, ಹಿರಿಯೂರು ಜಿಲ್ಲೆಗಳ ಕಡೆಗೆ ಎಂದಾದರು ಹೋಗಿದ್ದರೆ ಆ ಊರಿನ ದಾರಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ, ಅಷ್ಟೇ ಏಕೆ ನಾಲ್ಕು ರೋಡು ಕೂಡೋ ಎಲ್ಲಾ ಸರ್ಕಲ್‍ಗಳಲ್ಲಿ ಮೆಣಸಿನಕಾಯಿ ಬೋಂಡ, ಖಾರ ಮಂಡಕ್ಕಿ ಮಾರಿ ಜೀವನ ಸಾಗಿಸುವ ರಸ್ತೆಬದಿಯ ಪಾಕಪಂಡಿತರು ಗಮನಸೆಳೆಯುತ್ತಾರೆ. ನಾಲಗೆ ಚಪ್ಪರಿಸುವ ಈ ತಿಂಡಿ ಮಾಡುವ ಬಗೆಯನ್ನು ತಿಳಿದುಕೊಳ್ಳೋಣ.
ಸುನಂದಾ, ಬೆಳಗಾವಿ
ದಾವಣಗೆರೆ ಬೆಣ್ಣೆದೋಸೆಗಷ್ಟೇ ಅಲ್ಲ, ಒಗ್ಗರಣೆ ಮಂಡಕ್ಕಿ, ಖಾರ ಮಂಡಕ್ಕಿ ಮೆಣಸಿನ ಕಾಯಿಗೂ ಅಷ್ಟೇ ಪ್ರಸಿದ್ಧಿ. ದಾವಣಗೆರೆಯಲ್ಲಿ ಹೆಚ್ಚು ಜನಪ್ರಿಯವಾದ ಮೆಣಸಿನಕಾಯಿ ಬೋಂಡ ಅಥವಾ ಮೆಣಸಿನಕಾಯಿ ಬಜ್ಜಿಗೆ ದಾವಣಗೆರೆ ಮೆಣಸಿನಕಾಯಿ ಎಂದೇ ಕರೆಯಲಾಗುತ್ತದೆ. ಆಡುಭಾಷೆಯಲ್ಲಿ ಬರೀ ಮೆಣಸಿನಕಾಯಿ ಎನ್ನುತ್ತಾರೆ. ಖಾರ ಮಂಡಕ್ಕಿ ಜೊತೆಗಿದ್ದರೆ ಈ ಲೋಕ ಮರೀಬಹುದು.
ಬಜ್ಜಿಗೆ ಬೇಕಾಗುವ ಪದಾರ್ಥಗಳು:
ಬಜ್ಜಿ ಮೆಣಸಿನಕಾಯಿ: 6
ಕಡಲೆಹಿಟ್ಟು: 250 ಗ್ರಾಂ
ಖಾರದಪುಡಿ:ರುಚಿಗೆ ತಕ್ಕಷ್ಟು
ಅಡುಗೆ ಸೋಡಾ:ಎರಡು ಚಿಟಿಕೆ
ಉಪ್ಪು:ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ(ಕರಿಯಲು)
ನೀರು:ಹಿಟ್ಟು ಕಲಸಿಕೊಳ್ಳಲು
ಮಾಡುವ ವಿಧಾನ :
ಕಡಲೆಹಿಟ್ಟಿಗೆ ಖಾರದಪುಡಿ, ಉಪ್ಪು, ಸೋಡಾ, ನೀರು ಹಾಕಿ ಸ್ವಲ್ಪ ಗಟ್ಟಿಯಾಗಿ ಕಲಸಿಕೊಳ್ಳಿ. ಮೆಣಸಿನಕಾಯಿಯನ್ನು ಮಧ್ಯದಲ್ಲಿ ಸ್ವಲ್ಪ ಸೀಳಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ, ಕಾದಬಳಿಕ ಮೆಣಸಿನಕಾಯಿಯನ್ನು ಹಿಟ್ಟಿನಲ್ಲಿ ಅದ್ದಿ ಬಾಣಲೆಗೆ ಹಾಕಿ. ಬಜ್ಜಿ ಹೊನ್ನಿನ ಬಣ್ಣಕ್ಕೆ ತಿರುಗಿದ ಮೇಲೆ ಹೊರಕ್ಕೆ ತೆಗೆಯಿರಿ. ಈಗ ಬಜ್ಜಿಯನ್ನು ಮಂಡಕ್ಕಿ ಒಗ್ಗರಣೆ ಜೊತೆ ತಿಂದು ನೋಡಿ, ಒಳ್ಳೆಯ ಕಾಂಬಿನೇಷನ್ ಅಂತ ನೀವೇ ಹೇಳುತ್ತೀರಿ.



Click it and Unblock the Notifications
