Latest Updates
-
ಬೆಂಗಳೂರಿನಲ್ಲಿ ಹೊಸ ಮನೆಗೆ ಶಿಫ್ಟ್ ಆಗ್ತಿದ್ದೀರಾ? ₹2.53 ಲಕ್ಷ ಖರ್ಚಾಗದಂತೆ ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಎಚ್ಚರ! FSSAI ಕಟ್ಟುನಿಟ್ಟಿನ ಕ್ರಮ: ನೀವು ಬಳಸುವ ನೀರು, ಜೀರಿಗೆ ಸುರಕ್ಷಿತವೇ? -
ಮಹಾರಾಷ್ಟ್ರ ಆಟೋ ಮುಷ್ಕರ: ಇಂದಿನ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳೇನು? ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಬೆಂಗಳೂರು ಮಂಜು, ತಮಿಳುನಾಡು ಮಳೆ: ಹೊರಗೆ ಹೋಗುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ದಕ್ಷಿಣ ದೆಹಲಿಯಲ್ಲಿ ಮದುವೆಗಳ ಅಬ್ಬರ: ಟ್ರಾಫಿಕ್ ಜಾಮ್ ತಪ್ಪಿಸಲು ಈ ಪ್ಲಾನ್ ಫಾಲೋ ಮಾಡಿ! -
ಹಕ್ಕಿ ಜ್ವರದ ಭೀತಿ: ಚಿಕನ್ ಮತ್ತು ಮೊಟ್ಟೆ ತಿನ್ನಬಹುದೇ? ಸುರಕ್ಷಿತವಾಗಿ ಸೇವಿಸಲು ಈ ನಿಯಮ ಪಾಲಿಸಿ -
ಬಿಗ್ ಬಾಸ್ ಕನ್ನಡ ಎಲಿಮಿನೇಷನ್: ವೋಟಿಂಗ್ ಟ್ರೆಂಡ್ನಲ್ಲಿ ಭಾರೀ ಬದಲಾವಣೆ, ಸುದೀಪ್ ಕ್ಲಾಸ್ನಲ್ಲಿ ಯಾರಿಗೆ ಶಾಕ್? -
ಶಬರಿಮಲೆ ಯಾತ್ರೆ: ಜನದಟ್ಟಣೆಯ ನಡುವೆ ಸುಲಭವಾಗಿ ಬೆಟ್ಟ ಹತ್ತುವುದು ಹೇಗೆ? ಇಲ್ಲಿದೆ ಸುರಕ್ಷಿತ ಪಾದಯಾತ್ರೆಯ ಟಿಪ್ಸ್ -
ನವೆಂಬರ್ 21ರ ಮದುವೆ ಸಂಭ್ರಮ: ಒತ್ತಡವಿಲ್ಲದೆ ಕಾರ್ಯಕ್ರಮ ನಿರ್ವಹಿಸಲು ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ಇಂದಿನ ಮೊಟ್ಟೆ ದರ ಎಷ್ಟು? ₹40ರಲ್ಲಿ ಸಿಗುವ ಬೆಸ್ಟ್ ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು
ಶಾಕಾಹಾರಿಗಳಿಗಾಗಿ ಬನಾನಾ ಕಬಾಬ್!

* ನಿವೇದಿತಾ ಪ್ರಭಾಕರ್, ಬೆಂಗಳೂರು
ಅಗತ್ಯವಾದ ಸಾಮಾಗ್ರಿಗಳು:
ದಪ್ಪನೆಯ ನೇಂದ್ರ ಬಾಳೆ ಕಾಯಿ: ಒಂದು ಕಿಲೋ
ಮೈದಾ: 2ಕಪ್
ಅರಿಶಿಣ ಪುಡಿ: ಅರ್ಧ ಚಮಚ
ಏಲಕ್ಕಿ ಪುಡಿ: ಒಂದು ಚಮಚ
ಸಕ್ಕರೆ: 4 ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಸೋಡಾ: ಚಿಟಿಕೆ
ಜೀರಿಗೆ ಒಂದು ಚಮಚದಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ ಸಹ ಬಹಳ ಸುಲಭ:
ಮೊದಲು ಬಾಳೆ ಕಾಯಿಯ ಸಿಪ್ಪೆಯನ್ನು ತೆಗೆದು ಬಿಡಿ. ಸಿಪ್ಪೆ ತೆಗೆದ ಬಾಳೆಹಣ್ಣನ್ನು ನಿಮ್ಮ ಮನಸ್ಸಿಗೆ ಇಷ್ಟವಾದಂತೆ ಉದ್ದುದ್ದಕ್ಕೆ ಅಥವಾ ಅಡ್ಡಡ್ಡಕ್ಕೆ ಸೀಳಿ. ಅವನ್ನೆಲ್ಲ ಒಂದು ಪಾತ್ರೆಯಲ್ಲಿ ಹಾಕಿಡಿ.
ಆಮೇಲೆ ಮೈದಾ ಹಿಟ್ಟಿನೊಂದಿಗೆ ಅರಿಷಿಣ ಪುಡಿ, ಏಲಕ್ಕಿ ಪುಡಿ, ಸಕ್ಕರೆ, ಉಪ್ಪು, ಸೋಡಾ, ಜೀರಿಗೆ ಎಲ್ಲ ಸೇರಿಸಿಟ್ಟುಕೊಳ್ಳಿ. ಅದಕ್ಕೆ ನೀರು ಸೇರಿಸಿ ಎಲ್ಲೂ ಗಂಟಾಗದಿರುವ ಹಾಗೆ ಚೆನ್ನಾಗಿ ಕಲಸಿ. ಅದು ದೋಸೆ ಹಿಟ್ಟಿನಷ್ಟು ಅಳಕಾಗಿರಬೇಕು.
ಅಲ್ಲಿಗೆ ಶೇ.70ರಷ್ಟು ಕೆಲಸ ಮುಗಿದು ಹೋಯಿತು. ಬಾಣಲಿಯಲ್ಲಿನ ಎಣ್ಣೆ ಕಾದ ನಂತರ, ಬಾಳೇ ಕಾಯಿ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ ಬೋಂಡಾ ಕರಿದಂತೆ ಕೆಂಪಗಾಗುವ ತನಕ ಕರಿಯಿರಿ. ಆಮೇಲೆ ತಟ್ಟೆಗೆ ಬಿಸಿಬಿಸಿ ಬನಾನಾ ಕಬಾಬ್ ಬಾಕಿಕೊಂಡು ರುಚಿ ನೋಡಿ! ಜೊತೆಗೊಂದು ಕಪ್ ಬಿಸಿಬಿಸಿ ಕಾಫಿಯಿದ್ದರಂತೂ ಮಜವೋ ಮಜ.
ಇದನ್ನು ಹೆಂಗಳೆಯರ ಕಿಟ್ಟಿ ಪಾರ್ಟಿಗಳಲ್ಲಿ, ಸ್ನೇಹಿತರು ಬಂಧುಗಳು ಸೇರಿಕೊಂಡಾಗ, ಬನಾನಾ ಕಬಾಬ್ ತಿನ್ನಲೇಬೇಕೆನ್ನಿಸಿದಾಗ ಮತ್ತು ಹಾಗೆ ಸುಮ್ಮನೆ ಯಾವಾಗಲಾದರೊಮ್ಮೆ ಪ್ರಯೋಗಿಸಿ ನೋಡಿ.



Click it and Unblock the Notifications
