Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಗ್ರೀನ್ ಪಲಾವ್(ಹರಾ ಪಲಾವೋ)
Snacks
-Staff
By Staff
- 1ಕಪ್ ಬಾಸುಮತಿ ಅಕ್ಕಿ
- 250 ಗ್ರಾಂ ಹೂಕೋಸು
- 150 ಗ್ರಾಂ ಹಸಿರು ಬಟಾಣಿ
- 200 ಗ್ರಾಂ ಚಿಕ್ಕದಾಗಿ ಕತ್ತರಿಸಿದ ಆಲೂಗಡ್ಡೆ
- 2 ತುಂಡು ಚೆಕ್ಕೆ
- 4ರಿಂದ 5 ಲವಂಗ
- 7ರಿಂದ 8 ಕರಿಮೆಣಸು
- 2ರಿಂದ 3 ಪಲಾವೋ ಪತ್ರೆ
- 2 ಏಲಕ್ಕಿ
- 2 ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ
- 2 ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ
- 4 ಟೇಬಲ್ ಸ್ಪೂನ್ ಕಡಲೇಕಾಯಿ ಎಣ್ಣೆ
- 100 ಗ್ರಾಂ ಕೊತ್ತಂಬರಿ ಸೊಪ್ಪು,
- 4 ಹಸಿಮೆಣಸಿನಕಾಯಿ
- 1 ಇಂಚಿನಷ್ಟು ಶುಂಠಿಯಿಂದ ನುಣ್ಣಗೆ ತಯಾರಿಸಿದ ಮಿಶ್ರಣ
- ರುಚಿಗೆ ತಕ್ಕಷ್ಟು ಉಪ್ಪು
- ಗರಂ ಮಸಾಲೆ ಪುಡಿ
ಪಾತ್ರೆಯಾಂದರಲ್ಲಿ 1ಟೇಬಲ್ ಸ್ಪೂನ್ ಕಡಲೇಕಾಯಿ ಎಣ್ಣೆ ಹಾಕಿಕೊಳ್ಳಿ. ಪಲಾವ್ ಪತ್ರೆ, ಲವಂಗ, ಚೆಕ್ಕೆ, ಕರಿಮೆಣಸನ್ನು ಅರ್ಧ ನಿಮಿಷದವರೆಗೆ ಮಧ್ಯಮ ಪ್ರಮಾಣದ ಶಾಖದಲ್ಲಿ ಕರಿಯಿರಿ. ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಅದಕ್ಕೆ ಹಾಕಿಕೊಂಡು ಗುಲಾಬಿ ಬಣ್ಣಕ್ಕೆ ತಿರುಗುವವರೆಗೆ ಹುರಿದುಕೊಂಡು ಒಂದು ಕಡೆ ಎತ್ತಿಟ್ಟುಕೊಳ್ಳಿ.
ಈಗ ಉಳಿದ ಕಡಲೇಕಾಯಿ ಎಣ್ಣೆ ಹಾಕಿಕೊಂಡು ಎಲ್ಲ ತರಕಾರಿಯನ್ನು 4ರಿಂದ 5ನಿಮಿಷಗಳ ಕಾಲ ಕರಿದುಕೊಳ್ಳಿ. ಕೊತ್ತಂಬರಿ ಹಸಿಮೆಣಸಿನಕಾಯಿ, ಶುಂಠಿಯಿಂದ ತಯಾರಿಸಿದ ಮಿಶ್ರಣವನ್ನು ಇದಕ್ಕೆ ಬೆರೆಸಿಕೊಳ್ಳಿ. ಕರಿದ ಈರುಳ್ಳಿ, ಗರಂ ಮಸಾಲೆ ಹಾಗೂ ಉಪ್ಪು ಹಾಕಿಕೊಂಡು 5 ನಿಮಿಷಗಳ ಕಾಲ ತಿರುವಿರಿ.
ಆನಂತರ ತೊಳೆದ ಅಕ್ಕಿ ಹಾಗೂ ನೀರು(2ಕಪ್ಗಳಿಗಿಂತ ಸ್ವಲ್ಪ ಹೆಚ್ಚು) ಹಾಕಿ ಮಧ್ಯಮ ಪ್ರಮಾಣದ ಶಾಖದಲ್ಲಿ ಕುದಿಯಲು ಇಡಿ. ಕುದಿಯುತ್ತಿರುವಾಗ ಒಂದು ಸಲ ತಿರುವಿರಿ. ಈಗ ರುಚಿಯಾದ ಗ್ರೀನ್ ಪಲಾವ್ ರೆಡಿಯಾಗಿದೆ. ಇದನ್ನು ಕತ್ತರಿಸಿದ ಕೊತ್ತಂಬರಿಯಿಂದ ಅಲಂಕರಿಸಿದರೆ ಚೆಂದ.
Comments
Read more about: kannada karnataka bangalore kannada.oneindia.in kannada websites hara pulavo hasiru palavo green palav palav palavo pulav pulavo alexa.com
Story first published: Thursday, September 19, 2002, 5:30 [IST]
Other articles published on Sep 19, 2002



Click it and Unblock the Notifications