Just In
Don't Miss
- Sports
IND vs AUS: ಬಾರ್ಡರ್-ಗವಾಸ್ಕರ್ ಮೊದಲ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದ ಟೀಂ ಇಂಡಿಯಾ
- Movies
ಮತ್ತೆ ಟಾಪ್ ಒನ್ ಸ್ಥಾನಕ್ಕೆ ಬಂದ 'ಪುಟ್ಟಕ್ಕನ ಮಕ್ಕಳು'
- News
ಇದೇ ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ: ಬಸವರಾಜ ಬೊಮ್ಮಾಯಿ
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೀಕೆಂಡ್‌ನಲ್ಲಿ ಮಾಡಿ ಯಮ್ಮೀ ಚಿಕನ್ ಸ್ನಾಕ್ಸ್: ಚಿಕನ್ ಮೆಜೆಸ್ಟಿಕ್
ನೀವು ಚಿಕನ್ ಪ್ರಿಯರೇ? ಹಾಗಾದರೆ ನಿಮಗೆ ನಾವು ತುಂಬಾ ಸುಲಭದಲ್ಲಿ ಮಾಡಬಹುದಾದ ಯಮ್ಮಿ ಚಿಕನ್ ಸ್ನಾಕ್ಸ್ ರೆಸಿಪಿ ಹೇಳುತ್ತೇವೆ. ಇದನ್ನು ನೀವು ಮಾಡಿ ಸವಿದರೆ ನಿಮ್ಮ ಫೇವರೆಟ್ ರೆಸ್ಟೋರೆಂಟ್ ಶೆಫ್‌ನಂತೆಯೇ ನನಗೂ ಅಡುಗೆ ಮಾಡೋಕೆ ಬರುತ್ತೆ ಎಂಬ ಆತ್ಮವಿಶ್ವಾಸ ಬರುವುದರಲ್ಲಿ ನೋ ಡೌಟ್, ಅಷ್ಟೊಂದು ರುಚಿಯಾಗಿರುತ್ತದೆ.
ಈ ಚಿಕನ್ ಸ್ನಾಕ್ಸ್ ಮಾಡಲು ತುಂಬಾ ಸಾಮಗ್ರಿ ಬೇಕಾಗಿಲ್ಲ, ಮಾಮೂಲಿಯಾಗಿ ಕಿಚನ್‌ನಲ್ಲಿರುವ ಸಾಮಗ್ರಿಗಳೇ ಸಾಕು, ಅಲ್ಲದೆ ಹೆಚ್ಚು ಸಮಯ ಕೂಡ ಬೇಕಾಗಿಲ್ಲ.
ಇದನ್ನು ನೀವು ಸಂಜೆ ಸ್ನ್ಯಾಕ್ಸ್‌ಗೆ ಮಾಡಬಹುದು ಅಥವಾ ನೈಡ್ ಡಿನ್ನರ್‌ಗೆ ಸ್ಪೆಷಲ್ ಐಟಂ ಆಗಿ ಸೇರಿಸಿಬಹುದು, ತಡವೇಕೆ? ರೆಸಿಪಿ ನೋಡೋಣ:
Recipe By: Reena TK
Recipe Type: snacks
Serves: 4
-
ಬೇಕಾಗುವ ಸಾಮಗ್ರಿ
*1/4 ಕೆಜಿ ಬೋನ್‌ಲೆಸ್ ಚಿಕನ್
*1/2 ಕಪ್ ಮಜ್ಜಿಗೆ
* 1/ 2 ಚಮಚ ಜೋಳದ ಹಿಟ್ಟು (ಕಾರ್ನ್ ಫ್ಲೋರ್)
* 1/2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 1/8 ಚಮಚ ಅರಿಶಿಣ ಪುಡಿ
* 1/ 2 ಚಮಚ ಖಾರದ ಪುಡಿ
ರುಚಿಗೆ ತಕ್ಕ ಉಪ್ಪು
ಸಾಸ್
2-3 ಬಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
ಸ್ವಲ್ಪ ಕರಿಬೇವು
ಸ್ವಲ್ಪ ಪುದೀನಾ
1 ಚಮಚ ಸೋಯಾ ಸಾಸ್
1/ 2 ಚಮಚ ಖಾರದ ಪುಡಿ
1/2 ಚಮಚ ಗರಂ ಮಸಾಲ
3 ಚಮಚ ಮೊಸರು
-
ಮಾಡುವ ವಿಧಾನ
* ಚಿಕನ್ ಅನ್ನು ಮಜ್ಜಿಗೆಯಲ್ಲಿ ನಾಲ್ಕು ಗಂಟೆ ಕಾಲ ನೆನೆ ಹಾಕಿ. ನಂತರ ಸೋಸಿ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಜೋಳದ ಹಿಟ್ಟು, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿಡಿ.
* ನಂತರ ಚಿಕನ್ ಅನ್ನು ಡೀಪ್ ಫ್ರೈ ಮಾಡಿಡಿ, ಬೇಕಿದ್ದರೆ ಪ್ಯಾನ್ ಫ್ರೈ ಮಾಡಿಡಬಹುದು.
* ನಂತರ ಮಸಾಲೆ ಮಾಡಲು ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಹಸಿ ಮೆಣಸು, ಕರಿಬವು ಹಾಕಿ ಫ್ರೈ ಮಾಡಿ, ಬೆಳ್ಳುಳ್ಳಿ ಜೊತೆಗೆ ಹಾಕಿ ಫ್ರೈ ಮಾಡಿ. ಕರಿಬೇವು-ಬೆಳ್ಳುಳ್ಳಿ ಕ್ರಿಸ್ಪಿ ರೀತಿ ಇರಲಿ.
* ಈಗ ಪುದೀನಾ ಎಲೆ, ಖಾರದ ಪುಡಿ, ಗರಂ ಮಸಾಲೆ ಹಾಕಿ ಮಿಕ್ಸ್ ಮಾಡಿ, ನಂತರ ಮೊಸರು ಹಾಕಿ, ಮಿಶ್ರಣ ಸ್ವಲ್ಪ ಗಟ್ಟಿಯಾದಾಗ, ಸೋಯಾ ಸಾಸ್ ಸೇರಿಸಿ. ಈಗ ಫ್ರೈ ಮಾಡಿಟ್ಟ ಚಿಕನ್ ಹಾಕಿ ಡ್ರೈಯಾಗುವಂತೆ ಮಾಡಿದರೆ ಸರ್ವ್ ಮಾಡಲು ಮೆಜೆಸ್ಟಿಕ್ ಚಿಕನ್ ರೆಡಿ.
- ಇದನ್ನು ಕೆಂಪು ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಸವಿಯಬಹುದು