ನವರಾತ್ರಿ ಸ್ಪೆಷಲ್: ಬಂಗಾಳಿ ಸಂದೇಶ್ ಸ್ವೀಟ್ ರೆಸಿಪಿ

By: Divya pandith
Subscribe to Boldsky

ಹಬ್ಬ ಹಾಗೂ ಉತ್ಸವದ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ಬೆಂಗಾಲಿಯ ಸಿಹಿ ತಿನಿಸು ಸಂದೇಶ್/ಸಂಡೇಶ್. ಪನ್ನೀರು, ಸಕ್ಕರೆ ಪುಡಿ ಮತ್ತು ಗುಲಾಬಿ ನೀರಿನ ಮಿಶ್ರಣದಿಂದ ತಯಾರಿಸಲಾಗುವ ಸರಳ ಹಾಗೂ ರುಚಿಕರವಾದ ತಿನಿಸು ಇದು. ಇದನ್ನು ಫ್ರಿಜ್‍ನಲ್ಲಿಟ್ಟು ತಂಪುಗೊಳಿಸಿ ಸವಿದರೆ ನಾಲಿಗೆಗೆ ಹೆಚ್ಚು ಆಹ್ಲಾದ ಸಿಗುವುದು.

ಇದು ಬೆಂಗಾಲಿಯ ಸಾಂಪ್ರದಾಯಿಕ ಸಿಹಿ ತಿನಿಸಾಗಿದ್ದರೂ ಭಾರತದಾದ್ಯಂತ ಜನಪ್ರಿಯಗೊಂಡಿದೆ. ಮೃದುವಾದ ಹಾಗೂ ಸಿಹಿ ಭರಿತವಾದ ಈ ತಿನಿಸನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕೆಂದು ಮನ ಹಂಬಲಿಸುತ್ತದೆ. ಈ ವಿಶೇಷ ಸಿಹಿ ತಿಂಡಿಯನ್ನು ನೀವು ಮನೆಯಲ್ಲಿ ತಯಾರಿಸಬೇಕೆಂದುಕೊಂಡಿದ್ದರೆ, ನಾವಿಲ್ಲಿ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯ ಮೊರೆ ಹೋಗಬಹುದು.

sandesh recipe
ಸಂದೇಶ್ ರೆಸಿಪಿ| ಬೆಂಗಾಳಿ ಸಂದೇಶ್ ಮನೆಯಲ್ಲಿ ಮಾಡುವುದು ಹೇಗೆ| ಸ್ವೀಟ್ ಸಂಡೇಶ್ ರೆಸಿಪಿ| ಬೆಂಗಾಳಿ ಸಂಡೇಶ್ ರೆಸಿಪಿ
ಸಂದೇಶ್ ರೆಸಿಪಿ| ಬೆಂಗಾಳಿ ಸಂದೇಶ್ ಮನೆಯಲ್ಲಿ ಮಾಡುವುದು ಹೇಗೆ| ಸ್ವೀಟ್ ಸಂಡೇಶ್ ರೆಸಿಪಿ| ಬೆಂಗಾಳಿ ಸಂಡೇಶ್ ರೆಸಿಪಿ
Prep Time
1 Hours
Cook Time
30M
Total Time
2 Hours

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: 7-8 ಸಂದೇಶ್/ಸಂಡೇಶ್

Ingredients
 • ಹಾಲು - 1 ಲೀಟರ್

  ಐಸ್ ಕ್ಯೂಬ್‍ಗಳು -1 ಕಪ್

  ಹೆಚ್ಚಿಕೊಂಡ ಪಿಸ್ತಾ - 1/4 ಕಪ್

  ಸಿಟ್ರಿಕ್ ಆಸಿಡ್ ಹರಳು (ನಿಂಬುವಿನ ಜೊತೆ) -1/4 ಟೀ ಚಮಚ

  ಸಕ್ಕರೆ ಪುಡಿ - 3/4 ಕಪ್

  ಗುಲಾಬಿ ನೀರು - 2 ಟೇಬಲ್ ಚಮಚ.

Red Rice Kanda Poha
How to Prepare
 • 1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.

  2. ಇದಕ್ಕೆ ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ ಬಿಸಿಮಾಡಿ.

  3. ಹಾಲು ಕುದಿಯಲಾರಂಭಿಸಿದ ನಂತರ ಉರಿಯನ್ನು ಆರಿಸಿ.

  4. ನಂತರ ಸಿಟ್ರಿಕ್ ಆಸಿಡ್ ಹರಳನ್ನು ಸೇರಿಸಿ.

  5. ಹಾಲು ಮೊಸರಾಗಿ ಒಡೆಯುವವರೆಗೂ ಸುಮಾರು 2-3 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಲೇ ಇರಿ.

  6. ಮೊಸರಾಗಿ ಒಡೆದ ತಕ್ಷಣ ಐಸ್ ಕ್ಯೂಬ್‍ಗಳನ್ನು ಸೇರಿಸಿ ಮತ್ತು ಅದು ಸಂಪೂರ್ಣವಾಗಿ ಕರಗುವವರೆಗೂ ಒಂದೆಡೆ ಇಡಿ.

  7. ಒಂದು ಬೌಲ್‍ಅನ್ನು ತೆಗೆದುಕೊಂಡು, ಅದರ ಮೇಲ್ಭಾಗದಲ್ಲಿ ಕಿಚನ್ ಟವೆಲ್‍ಅನ್ನು ಹಾಸಿ.

  8. ಇದರ ಮೇಲೆ ಮೊಸರೊಡೆದ ಹಾಲನ್ನು ಸುರಿಯಿರಿ.

  9. ಟವೆಲ್‍ನ ತುದಿಯ ಭಾಗವನ್ನು ಹಿಡಿದು ಎತ್ತಿ, ನೀರನ್ನು ಬಳಿಸಿ.

  10. ನಂತರ 10 ನಿಮಿಷಗಳ ಕಾಲ ಮಿಶ್ರಣವನ್ನು ಟವೆಲ್‍ನಲ್ಲಿಟ್ಟು ತೂಗುಹಾಕಿರಿ. ನೀರು ಸಂಪೂರ್ಣವಾಗಿ ಬಳಿದು ಹೋಗುವುದು.

  11. ಟವೆಲ್‍ಅನ್ನು ಬಿಚ್ಚಿ, ನೀರಿನಿಂದ ಬೇರ್ಪಟ್ಟ ಹೂರಣವನ್ನು ತೆಗೆಯಿರಿ.

  12. ಹೂರಣವನ್ನು ಮಿಕ್ಸರ್ ಪಾತೆಗೆ ವರ್ಗಾಯಿಸಿ, ರುಬ್ಬಿಕೊಳ್ಳಿ.

  13. ಕಾಳುಕಾಳಾಗಿರುವ ಮಿಶ್ರಣದಂತೆ ಮಾಡಿಕೊಳ್ಳಿ.

  14. ಒಂದು ಪ್ಲೇಟ್‍ಗೆ ವರ್ಗಾಯಿಸಿ.

  15. ಗಂಟುಗಳಿರದಂತೆ ಅಂಗೈನಲ್ಲಿ ಚೆನ್ನಾಗಿ ನಾದಿ/ಮಿಶ್ರಗೊಳಿಸಿ.

  16. ಸಕ್ಕರೆ ಪುಡಿ ಮತ್ತು ಗುಲಾಬಿ ನೀರನ್ನು ಸೇರಿಸಿ.

  17. ಒಂದು ಮೃದುವಾದ ಹಿಟ್ಟಿನ ಮುದ್ದೆಯಾಗುವವರೆಗೆ ಚೆನ್ನಾಗಿ ನಾದಬೇಕು.

  18. 15-20 ನಿಮಿಷಗಳ ಕಾಲ ಫ್ರಿಜ್‍ನಲ್ಲಿ ಇಡಿ.

  19. ಸಮ ಪ್ರಮಾಣದಲ್ಲಿ ಮುದ್ದೆ/ಮಿಶ್ರಣವನ್ನು ತೆಗೆದುಕೊಂಡು, ಅಂಗೈನಲ್ಲಿ ಪೇಡೆಯ ಆಕಾರಕ್ಕೆ ತನ್ನಿ.

  20. ಇದರ ಮೇಲ್ಭಾಗದಲ್ಲಿ ಹೆಚ್ಚಿಕೊಂಡ ಪಿಸ್ತವನ್ನು ಹಾಕಿ ಅಲಂಕಾರಗೊಳಿಸಿ.

  21. ಫ್ರಿಜ್‍ನಲ್ಲಿಟ್ಟು ತಣ್ಣಗಾಗಿಸಿ, ನಂತರ ಸವಿಯಲು ನೀಡಿ.

Instructions
 • 1. ಹಾಲನ್ನು ಮೊಸರಾಗಿ ಒಡೆಯಲು ನಿಂಬು, ಮೊಸರು ಅಥವಾ ಬಿಳಿ ವಿನೆಗರ್‍ಅನ್ನು ಬಳಸಬಹುದು.
 • 2. ಮೊಸರೊಡೆದ ತಕ್ಷಣವೇ ಐಸ್ ಕ್ಯೂಬ್‍ಗಳನ್ನು ಸೇರಿಸಬೇಕು. ಆಗ ಮಿಶ್ರಣವು ಹೆಚ್ಚು ಗಟ್ಟಿಯಾಗುವುದನ್ನು ತಡೆಯಬಹುದು.
 • 3. ಸಂದೇಶ್/ಸಂಡೇಶ್ ಮಾಡುವಾಗ ಯಾವುದೇ ಬಿರುಕುಗಳಿಲ್ಲದಂತೆ ನೋಡಿಕೊಳ್ಳಬೇಕು.
 • 4. ನೀವು ಸಕ್ಕರೆಯ ಬದಲಿಗೆ ಪಾಮ್ ಸಕ್ಕರೆಯನ್ನು ಬಳಸಬಹುದು.
Nutritional Information
 • ಸರ್ವಿಂಗ್ ಸೈಜ್ - 1 ಸಂದೇಶ್
 • ಕ್ಯಾಲೋರಿ - 147 ಕ್ಯಾಲ್
 • ಫ್ಯಾಟ್ - 7 ಗ್ರಾಂ.
 • ಪ್ರೋಟೀನ್ - 3 ಗ್ರಾಂ.
 • ಕಾರ್ಬೋಹೈಡ್ರೇಟ್ - 17 ಗ್ರಾಂ.
 • ಸಕ್ಕರೆ - 15 ಗ್ರಾಂ.

ಹಂತ ಹಂತವಾದ ಚಿತ್ರವಿವರಣೆ:

1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.

sandesh recipe

2. ಇದಕ್ಕೆ ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ ಬಿಸಿಮಾಡಿ.

sandesh recipe

3. ಹಾಲು ಕುದಿಯಲಾರಂಭಿಸಿದ ನಂತರ ಉರಿಯನ್ನು ಆರಿಸಿ.

sandesh recipe

4. ನಂತರ ಸಿಟ್ರಿಕ್ ಆಸಿಡ್ ಹರಳನ್ನು ಸೇರಿಸಿ.

sandesh recipe

5. ಹಾಲು ಮೊಸರಾಗಿ ಒಡೆಯುವವರೆಗೂ ಸುಮಾರು 2-3 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡಿಸುತ್ತಲೇ ಇರಿ.

sandesh recipe

6. ಮೊಸರಾಗಿ ಒಡೆದ ತಕ್ಷಣ ಐಸ್ ಕ್ಯೂಬ್‍ಗಳನ್ನು ಸೇರಿಸಿ ಮತ್ತು ಅದು ಸಂಪೂರ್ಣವಾಗಿ ಕರಗುವವರೆಗೂ ಒಂದೆಡೆ ಇಡಿ.

sandesh recipe
sandesh recipe

7. ಒಂದು ಬೌಲ್‍ಅನ್ನು ತೆಗೆದುಕೊಂಡು, ಅದರ ಮೇಲ್ಭಾಗದಲ್ಲಿ ಕಿಚನ್ ಟವೆಲ್‍ಅನ್ನು ಹಾಸಿ.

sandesh recipe
sandesh recipe

8. ಇದರ ಮೇಲೆ ಮೊಸರೊಡೆದ ಹಾಲನ್ನು ಸುರಿಯಿರಿ.

sandesh recipe

9. ಟವೆಲ್‍ನ ತುದಿಯ ಭಾಗವನ್ನು ಹಿಡಿದು ಎತ್ತಿ, ನೀರನ್ನು ಬಳಿಸಿ.

sandesh recipe
sandesh recipe

10. ನಂತರ 10 ನಿಮಿಷಗಳ ಕಾಲ ಮಿಶ್ರಣವನ್ನು ಟವೆಲ್‍ನಲ್ಲಿಟ್ಟು ತೂಗುಹಾಕಿರಿ. ನೀರು ಸಂಪೂರ್ಣವಾಗಿ ಬಳಿದು ಹೋಗುವುದು.

sandesh recipe

11. ಟವೆಲ್‍ಅನ್ನು ಬಿಚ್ಚಿ, ನೀರಿನಿಂದ ಬೇರ್ಪಟ್ಟ ಹೂರಣವನ್ನು ತೆಗೆಯಿರಿ.

sandesh recipe
sandesh recipe

12. ಹೂರಣವನ್ನು ಮಿಕ್ಸರ್ ಪಾತೆಗೆ ವರ್ಗಾಯಿಸಿ, ರುಬ್ಬಿಕೊಳ್ಳಿ.

sandesh recipe

13. ಕಾಳುಕಾಳಾಗಿರುವ ಮಿಶ್ರಣದಂತೆ ಮಾಡಿಕೊಳ್ಳಿ.

sandesh recipe

14. ಒಂದು ಪ್ಲೇಟ್‍ಗೆ ವರ್ಗಾಯಿಸಿ.

sandesh recipe

15. ಗಂಟುಗಳಿರದಂತೆ ಅಂಗೈನಲ್ಲಿ ಚೆನ್ನಾಗಿ ನಾದಿ/ಮಿಶ್ರಗೊಳಿಸಿ.

sandesh recipe

16. ಸಕ್ಕರೆ ಪುಡಿ ಮತ್ತು ಗುಲಾಬಿ ನೀರನ್ನು ಸೇರಿಸಿ.

sandesh recipe
sandesh recipe

17. ಒಂದು ಮೃದುವಾದ ಹಿಟ್ಟಿನ ಮುದ್ದೆಯಾಗುವವರೆಗೆ ಚೆನ್ನಾಗಿ ನಾದಬೇಕು.

sandesh recipe

18. 15-20 ನಿಮಿಷಗಳ ಕಾಲ ಫ್ರಿಜ್‍ನಲ್ಲಿ ಇಡಿ.

sandesh recipe

19. ಸಮ ಪ್ರಮಾಣದಲ್ಲಿ ಮುದ್ದೆ/ಮಿಶ್ರಣವನ್ನು ತೆಗೆದುಕೊಂಡು, ಅಂಗೈನಲ್ಲಿ ಪೇಡೆಯ ಆಕಾರಕ್ಕೆ ತನ್ನಿ.

sandesh recipe

20. ಇದರ ಮೇಲ್ಭಾಗದಲ್ಲಿ ಹೆಚ್ಚಿಕೊಂಡ ಪಿಸ್ತವನ್ನು ಹಾಕಿ ಅಲಂಕಾರಗೊಳಿಸಿ.

sandesh recipe

21. ಫ್ರಿಜ್‍ನಲ್ಲಿಟ್ಟು ತಣ್ಣಗಾಗಿಸಿ, ನಂತರ ಸವಿಯಲು ನೀಡಿ.

sandesh recipe
[ 5 of 5 - 81 Users]
Subscribe Newsletter