Latest Updates
-
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ! -
ನವರಾತ್ರಿ ಗರ್ಬಾ ಸಂಭ್ರಮ: ಬೆಂಗಳೂರಿನ ಕಪಲ್ಸ್ ಎಂಜಾಯ್ ಮಾಡಲು ಇಲ್ಲಿದೆ ಬೆಸ್ಟ್ ಸೇಫ್ಟಿ ಟಿಪ್ಸ್ -
ದೆಹಲಿ ವಾಯು ಮಾಲಿನ್ಯ: ಮನೆಯೊಳಗೆ ಶುದ್ಧ ಗಾಳಿ ಪಡೆಯಲು 20 ನಿಮಿಷದ ಈ ಸರಳ ಟ್ರಿಕ್ಸ್ ಫಾಲೋ ಮಾಡಿ
ಶಬರಿಮಲೆ ಅರಾವಣ ಪಾಯಸಂ ರೆಸಿಪಿ
ಶಬರಿಮಲೆ ಸ್ವಾಮಿ ಪ್ರಸಾದವೆಂದರೆ ಅರಾವಣಂ ಪಾಯಸಂ. ಮಲೆಗೆ ಮಾಲೆ ಹೋಗಿ ಬಂದವರು ಈ ಪ್ರಸಾದ ತಂದು ತಮ್ಮ ಆಪ್ತರಿಗೆ, ಸ್ನೇಹಿತರಿಗೆ ಹಂಚುತ್ತಾರೆ. ಆದ್ದರಿಂದ ಈ ಪಾಯಸಂ ರುಚಿ ಗೊತ್ತಿಲ್ಲ ಎನ್ನುವವರು ತುಂಬಾ ವಿರಳ.

ಒಂದು ಚಮಚ ಬಾಯಿಗೆ ಹಾಕಿದರೆ ಸಾಕು ಅದರ ರುಚಿ ಅದ್ಭುತ ಅನಿಸುವುದು. ಈ ಪಾಯಸ ಹೇಗೆ ತಯಾರಿಸಲಾಗುವುದು? ವರ್ಷದವರೆಗೆ ಇಟ್ಟರೂ ಇದು ಹಾಳಾಗಲ್ಲ, ಹಾಗಾಗಿ ಇದಕ್ಕೆ ಬಳಸುವ ಸಾಮಗ್ರಿ ಯಾವುದು ಎಂಬ ಪ್ರಶ್ನೆ ಹಲವರಲ್ಲಿದೆ.
ಅಯ್ಯಪ್ಪ ಸ್ವಾಮಿ ನೈವೇದ್ಯಕ್ಕೆ ಈ ಪಾಯಸ ಮಾಡ ಬಯಸುವುದಾದರೆ ಇಲ್ಲಿದೆ ರೆಸಿಪಿ ಟ್ರೈ ಮಾಡಿ, ಅದೇ ಅರಾವಣ ಪಾಯಸಂ ರುಚಿಯಲ್ಲಿಯೇ ಇರುತ್ತದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
Recipe By: Reena TK
Recipe Type: sweet
Serves: many
-
ಬೇಕಾಗುವ ಸಾಮಗ್ರಿ
1/4 ಕಪ್ ಮಟ್ಟಾ ರೈಸ್ (ಕೆಂಪು ಕುಚಲಕ್ಕಿ)
1/4 ಕಪ್ ತುಪ್ಪ
2 ಕಪ್ ನೀರು
1.5 ಕಪ್ ತುಪ್ಪ
2 ಚಮಚ ತೆಂಗಿನಕಾಯಿ ತುಂಡು
1/4 ಚಮಚ ಶುಂಠಿ ಪುಡಿ (ಚುಕ್ಕು)
3-4 ಹಸಿರು ಏಲಕ್ಕಿ
-
ಮಾಡುವ ವಿಧಾನ
* ಉರುಳಿ (ದಪ್ಪ ತಳವಿರುವ ತಾಮ್ರದ ಪಾತ್ರೆ) ಬಿಸಿ ಮಾಡಿ 1/4 ಕಪ್ ತುಪ್ಪ ಹಾಕಿ ಬಿಸಿ ಮಾಡಿ
* ಈಗ ಅದಕ್ಕೆ ಕತ್ತರಿಸಿದ ತೆಂಗಿನಕಾಯಿ ತುಂಡು ಹಾಕಿ ಅದರ ಬಣ್ಣ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಆ ತೆಂಗಿನ ಕಾಯಿ ತೆಗೆದು ಒಂದು ಬದಿಯಲ್ಲಿ ಇಡಿ
* ಈಗ ಅದೇ ತುಪ್ಪಕ್ಕೆ ಮಟ್ಟಾ ರೈಸ್ ಹಾಕಿ 5 ನಿಮಿಷ ಫ್ರೈ ಮಾಡಿ. ನಂತರ 2 ಕಪ್ ಹಾಕಿ ಬೇಯಿಸಿ.
* ಅದಕ್ಕೆ 3/4 ಕಪ್ ತುರಿದ ಬೆಲ್ಲ ಹಾಕಿ, ಬೆಲ್ಲ ಕರಗುವವರೆಗೆ ಬಿಡಿ.
* ಈಗ ಅದಕ್ಕೆ 3-4 ಜಜ್ಜಿದ ಏಲಕ್ಕಿ ಹಾಕಿ.
* ಅಕ್ಕಿಯಿಂದ ತುಪ್ಪ ಬಿಟ್ಟು ಮೇಲ್ಭಾಗದಲ್ಲಿ ತೇಲುವವರೆಗೆ ಬೇಯಿಸಿ. ಮಿಶ್ರಣ ಗಟ್ಟಿಯಾದಾಗ ಗ್ಯಾಸ್ ಆಫ್ ಮಾಡಿ.
* ನಂತರ ಫ್ರೈ ಮಾಡಿಟ್ಟ ತೆಂಗಿನಕಾಯಿ ಪೀಸ್ ಸೇರಿಸಿ, ನಂತರ ಚುಕ್ಕು ಪುಡಿ ಹಾಕಿ ಮಿಶ್ರ ಮಾಡಿ.
* ನಂತರ ದೇವರಿಗೆ ನೈವೇದ್ಯ ಅರ್ಪಿಸಿ, ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಸಮಯದವರೆಗೆ ಬಳಸಬಹುದು.
- ಇದನ್ನು ಮಾಡಲು ನೀವು ಉರುಳಿ ಪಾತ್ರೆ ಬಳಸಬೇಕು. ಈ ಪಾತ್ರೆ ಕೇರಳದ ಮನೆಗಳಲ್ಲಿ ಇರುತ್ತದೆ, ಉರುಳಿ ಇಲ್ಲದಿದ್ದರೆ ದಪ್ಪ ತಳದ ಕಡಾಯಿ ಬಳಸಿ, ಆದರೆ ತಾಮ್ರದ ಕಡಾಯಿಯಲ್ಲಿ ಮಾಡಿದರೆ ರುಚಿ ಹೆಚ್ಚು
- ಕ್ಯಾಲೋರಿ: - 47ಕ್ಯಾ
- ಕೊಬ್ಬು: - 12 ಗ್ರಾಂ



Click it and Unblock the Notifications
