Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬಾಯಿಯಲ್ಲಿ ನೀರೂರಿಸುವ ರುಚಿಯಾದ ಕ್ಯಾಪ್ಸಿಕಮ್ ಬಾತ್
ಮಧ್ಯಾಹ್ನದ ಊಟ ರುಚಿಯಾಗಿದ್ದು ಆರೋಗ್ಯಕರವಾಗಿರಬೇಕೆಂದು ಯಾರು ತಾನೇ ಬಯಸವುದಿಲ್ಲ ಹೇಳಿ. ಬೆಳಗಿನ ಕಚೇರಿಗೆ ಹೋಗುವ ಧಾವಂತದಲ್ಲಿ ತಿಂಡಿಯನ್ನು ಸರಿಯಾಗಿ ತಿನ್ನಲು ಸಮಯವಿರುವುದಿಲ್ಲ. ಹೀಗಿರುವಾಗ ಮಧ್ಯಾಹ್ನದ ಊಟ ಸ್ವಾದಿಷ್ಟವಾಗಿರಬೇಕೆಂದು ಸ್ವಲ್ಪ ಹೆಚ್ಚಾಗಿಯೇ ಸೇವಿಸಬೇಕೆಂಬುದು ಮನದಲ್ಲಿ ಮೂಡುವುದು ಸಹಜ. ಹಾಗಿದ್ದರೆ ಆ ಆಸೆಯನ್ನು ನಮ್ಮ ಓದುಗರಿಗಾಗಿ ಸಫಲವಾಗಿಸುವುದು ನಮ್ಮ ಕರ್ತವ್ಯವಾಗಿದೆ.
ಇಂದಿನ ಲೇಖನ ನಿಮ್ಮ ಆಸೆಯನ್ನು ಕೈಗೂಡಿಸುವ ಒಂದು ಸುಂದರ ಸರಳ ಪಾಕ ವಿಧಾನದೊಂದಿಗೆ ನಾವು ಬಂದಿದ್ದು ಇದು ಖಂಡಿತ ನಿಮ್ಮ ಊಟಕ್ಕೆ ಹೆಚ್ಚಿನ ಸ್ವಾದವನ್ನು ಪೂರೈಸಿ ಕೊಡುತ್ತದೆ. ಕ್ಯಾಪ್ಸಿಕಮ್ (ದೊಣ್ಣೆ ಮೆಣಸು) ಅನ್ನು ಬಳಸಿಕೊಂಡು ಮಾಡುವ ಈ ರುಚಿಯಾದ ಕ್ಯಾಪ್ಸಿಕಮ್ ಬಾತ್ ನಿಮ್ಮ ಮಧ್ಯಾಹ್ನದ ಹಸಿವನ್ನು ತೀರಿಸಿ ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.

ಕ್ಯಾಪ್ಸಿಕಮ್ ಜೊತೆ ಮಿಶ್ರ ಮಾಡುವ ಇತರ ಸಾಮಾಗ್ರಿಗಳೂ ನಿಮ್ಮ ರುಚಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಬೆಳಗಿನ ತಿಂಡಿಗೂ ಇದು ಸೂಕ್ತವಾಗಿದ್ದು ಮಧ್ಯಾಹ್ನದ ಊಟಕ್ಕೆ ಹೇಳಿ ಮಾಡಿಸಿದ್ದು. ಹಾಗಿದ್ದರೆ ಇಂದಿನ ಲೇಖನದಲ್ಲಿ ಕ್ಯಾಪ್ಸಿಕಮ್ ಬಾತ್ ಮಾಡುವ ಅತಿ ಸುಲಭ ವಿಧಾನವನ್ನು ತಿಳಿದುಕೊಳ್ಳೋಣ.
ಟಪ್ಪರ್ ಡಬ್ಬಿಗೆ ಹೇಳಿ ಮಾಡಿಸಿದ ಫಟಾಫಟ್ ಪುಲಾವ್
ಪ್ರಮಾಣ: 2
*ಸಿದ್ಧತಾ ಸಮಯ: 15 ನಿಮಿಷ
*ಅಡುಗೆಗೆ ಬೇಕಾದ ಸಮಯ: 15 ನಿಮಿಷ
ಸಾಮಾಗ್ರಿಗಳು
*ಅನ್ನ - 2 ಕಪ್
*ಈರುಳ್ಳಿ - 1 ಹೆಚ್ಚಿದ್ದು
*ಹಸಿಮೆಣಸು - 1 ಹೆಚ್ಚಿದ್ದು
*ಶುಂಠಿ - ಸಣ್ಣದು
*ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ
*ಕರಿಬೇವು - 1 ಎಸಳು
*ಸಾಸಿವೆ - 1 ಚಮಚ
*ಉದ್ದಿನ ಬೇಳೆ - 1/2 ಚಮಚ
*ಅರಶಿನ - 1/2 ಚಮಚ
*ಕ್ಯಾಪ್ಸಿಕಮ್ - 1 ದೊಡ್ಡದು
*ಟೊಮೇಟೊ - 1 ದೊಡ್ಡದು
*ಗರಮ್ ಮಸಾಲಾ - 1/2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
1. ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾದೊಡನೆ ಇದಕ್ಕೆ ಸಾಸಿವೆ, ಉದ್ದಿನ ಬೇಳೆ ಮತ್ತು ಕರಿಬೇವಿನೆ ಎಸಳನ್ನು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಿ.
2. ನಂತರ ಹೆಚ್ಚಿದ ಈರುಳ್ಳಿ ಮತ್ತು ಟೊಮೇಟೊವನ್ನು ಬಾಣಲೆಗೆ ಹಾಕಿ ಇದು ಬೇಯುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.
3. ನಂತರ ಇದಕ್ಕೆ ಸ್ವಲ್ಪ ಅರಶಿನ ಮತ್ತು ಗರಮ್ ಮಸಾಲೆಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.
4. ಇದೀಗ ಸಣ್ಣಗೆ ಹೆಚ್ಚಿರುವ ಕ್ಯಾಪ್ಸಿಕಮ್ ಅನ್ನು ಈ ಮಿಶ್ರಣಕ್ಕೆ ಹಾಕಿ ಮತ್ತು ಸ್ವಲ್ಪ ಹೊತ್ತು ಮುಚ್ಚಿಡಿ.
5. 5 ನಿಮಿಷಗಳ ತರುವಾಯ ಈ ಮಿಶ್ರಣಕ್ಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
6. ಮೊದಲೇ ಬೇಯಿಸಿದ ಅನ್ನವನ್ನು ಈ ಮಿಶ್ರಣಕ್ಕೆ ಬೆರೆಸಿ ಚೆನ್ನಾಗಿ ಕಲಸಿ.
7. 10 ನಿಮಿಷಗಳು ಇದನ್ನು ಸಣ್ಣ ಉರಿಯಲ್ಲಿ ಹಾಗೆಯೇ ಬಿಡಿ.
8.ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ರುಚಿಯಾದ ಆರೋಗ್ಯಕರ ಕ್ಯಾಪ್ಸಿಕಮ್ ಬಾತ್ ಸವಿಯಲು ಸಿದ್ಧವಾಗಿದೆ. ಮಧ್ಯಾಹ್ನದ ಊಟದ ಸವಿಯನ್ನು ಹೆಚ್ಚಿಸುವ ಈ ಬಾತ್ ನಿಮ್ಮ ಹಸಿವಿನ ತುಡಿತವನ್ನು ಸಮಾಧಾನಗೊಳಿಸಿ ನಿಮಗೆ ಹೊಟ್ಟೆ ತುಂಬುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.



Click it and Unblock the Notifications
