Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕ್ಯಾರೆಟ್ ಪಾಲಾಕ್ ಮಸಾಲೆ ಅನ್ನ

ಅದರಲ್ಲೂ ಮಸಾಲೆ, ಅದು ಇದು ಸೇರಿಸಿದರೆ ತಿನ್ನಲೂ ಹಿತ ಎನಿಸುತ್ತದೆ ತಾನೇ? ಹಾಗೇ ಮಕ್ಕಳಿಗೂ ಹೊಸ ಹೊಸ ಬಗೆಯ ಅನ್ನದ ಖಾದ್ಯಗಳನ್ನು ತಿನ್ನಿಸಿದರೆ ಆರೋಗ್ಯಕ್ಕೂ ಒಳ್ಳೆಯದು. ಅದಕ್ಕಾಗಿಯೇ ನಿಮಗಾಗಿ ಒಂದು ಆರೋಗ್ಯಕರ ಹಾಗೂ ರುಚಿಕರವಾದ ಕ್ಯಾರೆಟ್ ಪಾಲಾಕ್ ಮಸಾಲೆ ಅನ್ನ ಮಾಡುವ ಪರಿಯನ್ನು ತಿಳಿಸುತ್ತಿದ್ದೇನೆ, ರೆಸಿಪಿ ನೋಡಿ ಇಲ್ಲಿದೆ.
ಈ ಖಾದ್ಯಕ್ಕೆ ಇವಿಷ್ಟೇ ಸಾಕು
ಉದುರು ಉದುರಾದ 3 ಕಪ್ ಅನ್ನ ಮಾಡಿಟ್ಟುಕೊಳ್ಳಿ.
ಒಂದು ಈರುಳ್ಳಿ ಇದ್ದರೆ ಚೆನ್ನ.
2 ಟೊಮೇಟೊ ತೆಗೆದಿಟ್ಟುಕೊಳ್ಳಿ.
ಹೆಚ್ಚಿದ ಪಾಲಾಕ್ ಸೊಪ್ಪು 2 ಕಪ್ ಸಾಕು.
ಒಂದೆರಡು, ಒಂದೇ ಗಾತ್ರದ (ಚಿಕ್ಕದಾದರೆ 2) ಕ್ಯಾರೆಟ್ ತುರಿದಿಟ್ಟುಕೊಳ್ಳಿ.
ಎರಡೆರಡು ಚಮಚ ಜೀರಿಗೆ, ಕೊತ್ತಂಬರಿ ಪುಡಿ ಪರಿಮಳಕ್ಕೆ ಬೇಕು.
2 ಚಮಚ ಮೆಣಸಿನಪುಡಿ ಹಾಕಿದರೆ ಇನ್ನಷ್ಟು ರುಚಿ.
1/2 ಚಮಚ ಅರಿಶಿನ ಪುಡಿ ಅಡಿಗೆಯಲ್ಲಿದ್ದರೇನೇ ಚಂದ.
2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡಾ ಇರಲಿ.
ಎಣ್ಣೆ, ಸಾಸಿವೆ, ಕೊತ್ತಂಬರಿ ಸೊಪ್ಪು, ಉಪ್ಪು, ಚಿಟಿಕೆ ಸಕ್ಕರೆ ಜೊತೆಗಿರಲಿ.
ಇನ್ನು ಹೀಗೆ ಮಾಡಿ
* ಬಾಣಲೆಯಲ್ಲಿ ಸಾಮಾನ್ಯನಾಗಿ ಒಗ್ಗರಣೆ ಹಾಕುವ ಹಾಗೆ ಎಣ್ಣೆ, ಸಾಸಿವೆ, ಜೀರಿಗೆ ಪುಡಿ ಹಾಕಿ ಒಗ್ಗರಣೆ ಮಾಡಿ. ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಒಗ್ಗರಣೆ ಜೊತೆ
ಸೇರಿಸಿ ಹುರಿಯಬೇಕು. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಹೆಚ್ಚಿದ ಟೊಮೇಟೊ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಇನ್ನಷ್ಟು ಪ್ರೈ ಮಾಡಿ.
* ನಂತರ ರುಚಿಗೆ ತಕ್ಕ ಹಾಗೆ ಉಪ್ಪು, ಸಕ್ಕರೆ, ಮೆಣಸಿನ ಹುಡಿ (ಬೇಕೆನಿಸಿದರೆ ಗರಂ ಮಸಾಲಾ ಪುಡಿಯನ್ನೂ ಸೇರಿಸಿಕೊಳ್ಳಬಹುದು) ಮಿಶ್ರಣ ಮಾಡಿ ಬೇಯಿಸಿ.
ಈ ಮಿಶ್ರಣ ಹದವಾಗಿ ಬೆಂದ ನಂತರ ಕ್ಯಾರೆಟ್, ಪಾಲಾಕ್ ಸ್ವಲ್ಪ ಉಪ್ಪನ್ನು ಇದರೊಂದಿಗೆ ಸೇರಿಸಿ ಬೇಯಿಸಿಕೊಳ್ಳಿ.
* ನಂತರ ಅನ್ನ, ಕೊತ್ತಂಬರಿ ಸೊಪ್ಪು ಬೆರೆಸಿ ಇನ್ನೆರಡು ನಿಮಿಷ ಬೇಯಿಸಿ.
ಸಿದ್ಧವಾದ ಅಡುಗೆಯನ್ನು ತುಪ್ಪ ಹಾಗೂ ಸ್ವಲ್ಪ ನಿಂಬೆರಸ ಸೇರಿಸಿ ತಿಂದರೆ ಬಾಯಿಗೆ ಹಾಯ್ ಎನ್ನಿಸದೇ ಇದ್ದೀತೇ?



Click it and Unblock the Notifications
